ನಿಮ್ಮ ಮನೆ ಮಗಳ 'ಕ್ಯಾಡ್ಬರಿಸ್' ಇದು- ಸಪೋರ್ಟ್ ಮಾಡಿ ಎನ್ನುತ್ತಲೇ ಬಿಗ್ ಅಪ್ಡೇಟ್ ನೀಡಿದ ಸೋನು ಗೌಡ
ಬಿಗ್ಬಾಸ್ ಖ್ಯಾತಿಯ ನಟಿ ಸೋನು ಗೌಡ ಕ್ಯಾಡ್ಬರಿಸ್ ಚಿತ್ರದಲ್ಲಿ ನಟಿಸುತ್ತಿದ್ದು, ಈ ಕುರಿತು ಮಾಹಿತಿಯೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹೇಳಿದ್ದೇನು?

ಕಳೆದ ಕೆಲವು ದಿನಗಳಿಂದ ಬಿಗ್ಬಾಸ್ ಖ್ಯಾತಿಯ ನಟಿ ಸೋನು ಗೌಡ (Sonu Gowda) ಸಕತ್ ಸುದ್ದಿಯಲ್ಲಿದ್ದಾರೆ. ವಿದೇಶಗಳಲ್ಲಿ ಪ್ರಯಾಣಿಸಿ ಬಿಕಿನಿ ತೊಟ್ಟು ಸಾಕಷ್ಟು ಟ್ರೋಲ್ಗೂ ಒಳಗಾಗುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಪಡೆದಿರುವುದಕ್ಕೆ ಮಾಲ್ಡೀವ್ಸ್‌ನಲ್ಲಿ ಬಿಕಿನಿ ಧರಿಸಿ ಸಮುದ್ರದ ಕಡೆ ವಾಕಿಂಗ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ನಟಿ, ಬೇರೆ ಬೇರೆ ವೇಷಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಆಂಡ್ ಬ್ಲಾಕ್ ಟು ಪೀಸ್ ಧರಿಸಿರುವ ಸೋನು ಗೌಡ ಕ್ಯಾಟ್‌ವಾಕ್ ಮಾಡಿಕೊಂಡು ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಸಾಕಷ್ಟು ಟ್ರೋಲ್ಗೂ ಒಳಗಾಗಿದ್ದಾರೆ. ಇದೇ ವೇಳೆ ಈಕೆಯ ಫ್ಯಾನ್ಸ್ ಹಾರ್ಟ್ ಇಮೋಜಿಗಳಿಂದ ಸ್ವೀಟ್ ಎಂದೂ ಹೇಳುತ್ತಿದ್ದಾರೆ. ಇದೇ ವೇಳೆ ತಮ್ಮ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿರುವುದಕ್ಕೆ ದುಃಖ ತೋಡಿಕೊಂಡಿದ್ದ ನಟಿ, ಯಾರಿಗಾದರೂ ತೊಂದರೆ ಕೊಟ್ಟರೆ ಕಳ್ಳತನ ಮಾಡಿದರೆ ಅಥವಾ ಹೊಡೆದರೆ ತಪ್ಪು. ಆದರೆ ಸುಮ್ಮನೇ ನನ್ನನ್ನು ಟ್ರೋಲ್ ಮಾಡಬೇಡಿ. ನನ್ನ ಟ್ರೋಲ್ ವಿಡಿಯೋ ಅವಮಾನಗಳನ್ನು ನೋಡಿ ನನ್ನ ತಾಯಿ ಆರೋಗ್ಯ ಕೆಟ್ಟಿದೆ. ಈಗಲೂ ಟ್ರೋಲ್‌ಗಳನ್ನು ನೋಡಿ ನನ್ನ ಕುಟುಂಬಸ್ಥರು ನನ್ನನ್ನು ಮಾತನಾಡಿಸುವುದಿಲ್ಲ ಎಂದೆಲ್ಲಾ ಹೇಳಿಕೊಂಡಿದ್ದರು.
ಇದೀಗ ನಟಿ, ಇನ್ನೊಂದು ಹೊಸ ವಿಷ್ಯವನ್ನು ಅನೌನ್ಸ್ ಮಾಡಿದ್ದಾರೆ. ಕನಸು ಪ್ರೊಡಕ್ಷನ್ಸ್ (Kanasu production) ನಿರ್ಮಾಣದ ಕ್ಯಾಡ್ಬರಿಸ್ ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಇದರ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ.
ಒಂದು ಮಿಲಿಯನ್ ಜನ ನೋಡಲಿ ಅಂತ ಬಿಕಿನಿ ವಿಡಿಯೋ ಹಾಕಿದ ಸೋನು ಗೌಡ!
ಅವರ ಮಾತಿನಲ್ಲಿಯೇ ಹೇಳುವುದಾದರೆ, ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಮನೆ ಮಗಳು ಸೋನು ಗೌಡ. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಾನು ಕನಸು ಪ್ರೊಡಕ್ಷನ್ಸ್ ನಿರ್ಮಾಣದ ಕ್ಯಾಡ್ಬರಿಸ್ (Cadburys) ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದೆ. ಈಗ ಆ ಮೂವಿಯ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಈ ವರ್ಷದ ಕೊನೆಯಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಇಂದು ಈ ಚಿತ್ರದ ನನ್ನ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಹಾಗೂ ನಮ್ಮ ಚಿತ್ರತಂಡದ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇವೆ. ಈ ಚಿತ್ರವು ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದ್ದು ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಅದ್ವಿತಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಇನ್ನು ಹಲವಾರು ದೊಡ್ಡ ದೊಡ್ಡ ನಟರು ನಟಿಸುತ್ತಿದ್ದಾರೆ. ಅವರೆಲ್ಲರ ಜೊತೆ ನಟಿಸಿದ್ದು ನನಗೆ ಸಂತಸ ತಂದಿದೆ ಎಂದಿದ್ದಾರೆ.
ಈ ಚಿತ್ರವನ್ನು ರಮೇಶ್ ಯಾದವ್ ರವರು ನಿರ್ದೇಶನ ಮಾಡುತ್ತಿದ್ದು ಡಾ: ಶಿವರಾಜ್ ಜಾಣಗೆರೆ ರವರು ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಮತ್ತು ಸಾಹಿತ್ಯ, ಬರೆದು ಸಂಗೀತ ಸಂಯೋಜನೆ, ಮಾಡಿದ್ದಾರೆ. ಈ ಚಿತ್ರಕ್ಕೆ ಶರತ್ ಕುಮಾರ್ ಅವರ ಛಾಯಾಗ್ರಹಣವಿದ್ದು ಸಿನಿಮಾ ತುಂಬಾ ಸೊಗಸಾಗಿ ಮೂಡಿಬಂದಿದೆ. ನನಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಈ ಚಿತ್ರದ ನಿರ್ಮಾಪಕರಿಗೂ ನಿರ್ದೇಶಕರಿಗೂ ಹಾಗೂ ಚಿತ್ರತಂಡದ ಎಲ್ಲರಿಗೂ ನನ್ನ ಧನ್ಯವಾದಗಳು ತಿಳಿಸುತ್ತಾ ಸಮಸ್ತ ಕನ್ನಡ ನಾಡಿನ ಜನರ ಆಶೀರ್ವಾದ ಬಯಸುತ್ತಿರುವ ನಿಮ್ಮ ಪ್ರೀತಿಯ ಸೋನು ಶ್ರೀನಿವಾಸ್ ಗೌಡ ಎಂದು ನಟಿ ಹೇಳಿಕೊಂಡಿದ್ದಾರೆ.