ತಿಂಗಳಿಗೆ ಒಂದೆರಡು ಸಲ ಕೋರ್ಟ್‌ಗೆ ಹೋಗ್ತೀನಿ ,ನಿಜ ಸಾಕಾಗಿದೆ: ಕೇಸ್‌ ಸತ್ಯ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ

ಯಾಕೆ ಸೋನು ವಿದೇಶ ಪ್ರಯಾಣ ಮಾಡ್ತಿಲ್ಲ? ಸೇವಂತಿ ಎಂಬ ಹುಡುಗಿ ಜೊತೆ ನಡೆಯುತ್ತಿರುವ ಕೋರ್ಟ್ ಕೇಸ್ ಏನ್ ಆಯ್ತು? 

Sonu Srinivas Gowda talks about court case with little girl vcs

ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಕೆಲವು ದಿನಗಳ ಹಿಂದೆ ಅಭಿಮಾನಿಗಳು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವರ್ಷ ಆರಂಭದಲ್ಲಿ ಬಡ ಕುಟುಂಬಕ್ಕೆ ಸೇರಿದ ಹುಡುಗಿಯೊಬ್ಬಳಿಗೆ ಸೋನು ಸಾಕಷ್ಟು ಸಹಾಯ ಮಾಡಿದ್ದಳು, ಪ್ರತಿಯೊಂದನ್ನು ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಆದರೆ ಮಕ್ಕಳ ಇಲಾಖೆಯವರು ಸೋನು ದತ್ತು ತೆಗೆದುಕೊಂಡಿರುವುದಾಗಿ ವಿಡಿಯೋ ಹಾಕುತ್ತಿದ್ದಾಳೆ ಆದರೆ ಆ ವಯಸ್ಸಿನ ಹುಡುಗಿಯನ್ನು ದತ್ತು ತೆಗೆದುಕೊಳ್ಳುವ ಹಕ್ಕು ಆಕೆಗೆ ಇಲ್ಲ ಎಂದು ದೂರು ನೀಡಿದ್ದರು. ಇಷ್ಟು ದಿನ ಸೋನುಗೆ ಸಪೋರ್ಟ್ ಆಗಿದ್ದ ಆ ಹುಡುಗಿ ಪೋಷಕರು ವಿರುದ್ಧ ನಿಂತು ದೂರು ನೀಡುತ್ತಾರೆ. ಹೀಗಾಗಿ ಒಂದೆರಡು ವಾರ ಸೋನುಗೆ ಸೆಂಟ್ರಲ್ ಜೈಲಿನ ವನವಾಸ ಶುರುವಾಗುತ್ತದೆ. ಜಾಮೀನು ಪಡೆದು ಹೊರ ಬಂದು ತಿಂಗಳು ಕಳೆದರೂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ ಎನ್ನಲಾಗಿದೆ.

ಈ ಕೋರ್ಟ್‌ ಕೇಸ್‌ ಬಗ್ಗೆ ಸೋನು ಫಾಲೋವರ್ಸ್ ಪ್ರಶ್ನಿಸಿದ್ದಾರೆ. 'ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ ಹೀಗಾಗಿ ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವಂತೆ. ಹೆಸರು ಹೇಳುವಂತಿಲ್ಲ. ಇಷ್ಟು ದಿನಗಳಿಂದ ನಾನು ಸುಮ್ಮನಿರುವುದು ಅದಕ್ಕೆ. ಕೋರ್ಟ್‌ನಲ್ಲಿ ಕೇಸ್ ಮುಗಿಯಲಿ ನಾನು ಕ್ಲಾರಿಟಿ ಕೊಡುತ್ತೀನಿ. ತಿಂಗಳಿಗೆ ಒಂದೆರಡು ಸಲ ಕೋರ್ಟ್‌ಗೆ ಹೋಗ್ತಿದ್ದೀನಿ ಬರ್ತಿದ್ದೀನಿ...ಪದೇ ಪದೇ ಹೋಗ್ತಾ ಇರ್ಬೇಕು ಬರ್ತಾ ಇರ್ಬೇಕು ಅಂತ ಮೈಂಡ್ ಅಪ್ಸೆಟ್ ಆಗಿದೆ. ಆದಷ್ಟು ಬೇಗ ಈ ಕೇಸ್ ಮುಗಿಯಬೇಕು ಅನಿಸುತ್ತಿದೆ. ಕೇಸ್ ನಡೆಯುತ್ತಿರುವುದರಿಂದ ನಾನು ವಿದೇಶಕ್ಕೆ ಹೋಗಲು ಆಗುತ್ತಿಲ್ಲ' ಎಂದು ಸೋನು ಉತ್ತರಿಸಿದ್ದಾರೆ.

ಸಿಂಪಲ್ ಸೀರೆ, ಹಣೆಯಲ್ಲಿ ಕುಂಕುಮ; ಚೈತ್ರಾ ಕುಂದಾಪುರ ನಿಜಕ್ಕೂ ಮೇಕಪ್ ಹಾಕಲ್ವಾ?

ಸೋನು ಶ್ರೀನಿವಾಸ್ ಗೌಡ ಮೇಲಿ ಜನರಿಗೆ ಇದ್ದ ಕೆಟ್ಟ ಅಭಿಪ್ರಾಯ ಸಂಪೂರ್ಣವಾಗಿ ಬದಲಾಗುತ್ತದೆ. ಹಿಂದೆ ಮುಂದೆ ಯೋಚನೆ ಮಾಡದೆ ಸಹಾಯ ಮಾಡಲು ಹೋಗಿದ್ದಕ್ಕೆ ಇಷ್ಟೋಂದು ಕಷ್ಟ ಅನುಭವಿಸುತ್ತಿರುವುದು ಪಾಪಾ ಎನ್ನುತ್ತಿದ್ದಾರೆ. ಅಲ್ಲದೆ ಸೋನು ಪಕ್ಕಾ ನಟ ದರ್ಶನ್ ಫ್ಯಾನ್ ಆಗಿರುವ ಕಾರಣ ಏನ್ ಅಕ್ಕ ಲಿಂಕ್ ಇದು ನೀನು ಜೈಲಿಗೆ ಹೋಗಿ ಬಂದ ಮೇಲೆ ಅಣ್ಣನೂ ಹೋಗಿದ್ದಾರೆ ಅದಕ್ಕೆ ಹೇಳೋದು ನೀನು ರಿಯಲ್ ಫ್ಯಾನ್ಸ್‌ ಎಂದು ಅಂತ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ದರ್ಶನ್ ಜೈಲು ವಾಸದಲ್ಲಿ ಇದ್ದಾಗ ಸೋಷಿಯಲ್ ಮೀಡಿಯಾದಲ್ಲಿ ನಟನ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. 

ಕಿರುತೆರೆ ನಟಿ ದೀಪಾ ಭಾಸ್ಕರ್ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿರದ ನೋವಿನ ವಿಷಯ ಇದು

Latest Videos
Follow Us:
Download App:
  • android
  • ios