Asianet Suvarna News Asianet Suvarna News

ಖಾಸಗಿ ವಿಡಿಯೋ ಲೀಕ್ ಬಳಿಕ ಸೋಶಿಯಲ್ ಮಿಡಿಯಾದಲ್ಲಿ ಗುನ್ಗುನ್ ಗುಪ್ತಾ ಹೊಸ ವಿಡಿಯೋ!

ಕೆಲ ತಿಂಗಳ ಹಿಂದೆ ಗುನ್ಗುನ್ ಗುಪ್ತಾ ಖ್ಯಾತಿಯ ಸೋಶಿಯಲ್ ಮೀಡಿಯಾಾ ಇನ್ಪ್ಲುಯೆನ್ಸರ್ ಖಾಸಗಿ ವಿಡಿಯೋ ಲೀಕ್ ಕೋಲಾಹಲ ಸೃಷ್ಟಿಸಿತ್ತು. ಇದಾದ ಕೆಲವೇ ತಿಂಗಳಲ್ಲಿ ಇದೀಗ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ.

Social Media Sensation Gungun Gupta share Heeramandi song Dance video months after MMS Leak ckm
Author
First Published May 15, 2024, 7:41 PM IST

ದೆಹಲಿ(ಮೇ.15) ಸೋಶಿಯಲ್ ಇನ್ಲ್ಫುಯೆನ್ಸರ್ ಗುನ್ಗುನ್ ಗುಪ್ತಾ ಇದೀಗ ಮತ್ತೆ ಸದ್ದು ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಗುಪ್ತಾ ಖಾಸಗಿ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಲೀಕ್ ಆಗಿತ್ತು. ಭಾರಿ ವೈರಲ್ ಬೆನ್ನಲ್ಲೇ ಕೋಲಾಹಲ ಸೃಷ್ಟಿಯಾಗಿತ್ತು. ಘಟನೆ ಕುರಿತು ಸ್ಪಷ್ಟನೆ ನೀಡಿದ ಗುಪ್ತಾ ಸೈಲೆಂಟ್ ಆಗಿದ್ದರು. ಇದೀಗ ಖಾಸಗಿ ವಿಡಿಯೋ ಲೀಕ್ ಬಳಿಕ ಇದೀಗ ಗುನ್ಗುನ್ ಗುಪ್ತಾ ಹೊಸ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಅದ್ಭುತ ಡ್ಯಾನ್ಸ್ ವಿಡಿಯೋ ಮೂಲಕ ಗುಪ್ತಾ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ.

ಕೆಲ ತಿಂಗಳ ಹಿಂದೆ ಗುನ್ಗುನ್ ಗುಪ್ತಾ ಖಾಸಗಿ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಕಾಲ್‌ನಲ್ಲಿ ಗುಪ್ತಾ ಬೆತ್ತಲಾಗಿದ್ದು ಸೇರಿದಂತೆ ಕೆಲ ಅಶೀಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಈ ವಿಡಿಯೋ ಕುರಿತು ದೂರು ನೀಡಿದ್ದ ನಟಿ, ಡೀಫ್ ಫೇಕ್ ಮೂಲಕ ಈ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡಲಾಗಿದೆ ಎಂದು ಗುಪ್ತಾ ಸ್ಪಷ್ಟನೆ ನೀಡಿದ್ದರು. ಆದರೆ ಅಷ್ಟರಲ್ಲೇ ವಿಡಿಯೋ ಲಕ್ಷಾಂತರ ಲೈಕ್ಸ್ ಹಾಗೂ ಶೇರ್ ಪಡೆದುಕೊಂಡಿತ್ತು. ಈ ಘಟನೆ ಕುರಿತು ಸ್ಪಷ್ಟನೆ ನೀಡಿದ್ದ ಗುಪ್ತಾ ಬಳಿ ಸೋಶಿಯಲ್ ಮಿಡಿಯಾದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಡ್ಯಾನ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಇದ್ದಕ್ಕಿದ್ದಂತೆ ಹೆಚ್ಚಾದ ಧನುಶ್ರೀ ಫಾಲೋವರ್ಸ್‌; ಸ್ಯಾಮ್ ಜೊತೆ ಬ್ರೇಕಪ್ ಕಾರಣವೇ?

ಸಂಜಯ್ ಲೀಲಾ ಬನ್ಸಾಲಿ ಅವರ ಹೀರಾಮಂಡಿ ಚಿತ್ರದ ಸೌತಾನಿಯಾ ಹಾಡಿಗೆ ಗುಪ್ತಾ ಹೆಜ್ಜೆ ಹಾಕಿದ್ದಾರೆ. ಹಳದಿ ಸೆಲ್ವಾರ್‌ನಲ್ಲಿ ಗುಪ್ತಾ ಕಾಣಿಸಿಕೊಂಡಿದ್ದು, ಅದ್ಭುತ ಸ್ಟೆಪ್ಸ್ ಹಾಕಿದ್ದಾರೆ. ವಿಡಿಯೋ ಪೋಸ್ಟ್ ಮಾಡಿ, ಹೀರಾಮಂಡಿ ಚಿತ್ರದ ಈ ಹಾಡನ್ನು ಯಾರು ಕೇಳಿದ್ದೀರಿ ಎಂದು ಅಭಿಮಾನಿಗಳಲ್ಲಿ ಪ್ರಶ್ನಿಸಿದ್ದಾರೆ. ಈಕೆಯ ಡ್ಯಾನ್ಸ್ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಹಲವು ಅಭಿಮಾನಿಗಳು ಡ್ಯಾನ್ಸ್ ಸ್ಟೆಪ್ಸ್ ಮೆಚ್ಚಿಕೊಂಡಿದ್ದಾರೆ. ಅದ್ಭುತ ಡ್ಯಾನ್ಸ್‌ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಇದೇ ವೇಳೆ ಕೆಲವರು ಹಳೆ ಎಂಎಂಎಸ್ ಲೀಕ್ ಕುರಿತು ಪ್ರತಿಕ್ರಿಯೆ ನೀಡಿ ಕೆರಳಿಸಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಗುಪ್ತಾ ಡ್ಯಾನ್ಸ್ ವಿಡಿಯೋ ಹರಿದಾಡುತ್ತಿದೆ.

 

 

ದೆಹಲಿ ಮೂಲದ ಗುನ್ಗುನ್ ಗುಪ್ತಾ ಸೋಶಿಯಲ್ ಮಿಡಿಯಾ ಸೆನ್ಸೇಶನ್ ಆಗಿದ್ದಾರೆ. 19 ವರ್ಷದ ಡ್ಯಾನ್ಸರ್, ಶಾರ್ಟ್ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಾಲಿವುಡ್, ಬೋಜ್‌ಪುರಿ ಸೇರಿದಂತೆ ಹಲವು ಭಾಷೆಗಳ ಹಾಡಿಗೆ ಹೆಜ್ಜೆ ಹಾಕುತ್ತಾ ಶಾರ್ಟ್ ವಿಡಿಯೋ ಪೋಸ್ಟ್ ಮಾಡುವ ಗುಪ್ತಾ ಕೆಲ ತಿಂಗಳ ಗ್ಯಾಪ್ ಬಳಿಕ ಡ್ಯಾನ್ಸ್ ಮೂಲಕ ಮತ್ತೆ ಪ್ರತ್ಯಕ್ಷರಾಗಿದ್ದಾರೆ.

80 ವರ್ಷದ ಈ ಅಜ್ಜಿಯ ಮುಖದಲ್ಲಿ ಒಂದೇ ಒಂದು ಸುಕ್ಕಿಲ್ಲ, ಕಾರಣವೇನು?

Follow Us:
Download App:
  • android
  • ios