ದ್ವೇಷದ ಕಿಚ್ಚಿನಲ್ಲಿ ಪುಟ್ಟಕ್ಕನ ಮೆಸ್ ಸುಟ್ಟು ಭಸ್ಮವಾಗಿದೆ. ಆಸ್ಪತ್ರೆಯಿಂದ ವಾಪಸಾಗಿರುವ ಪುಟ್ಟಕ್ಕ ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ. ಆಕೆಯ ಮುಂದಿನ ನಡೆ ಏನು?
ಪುಟ್ಟಕ್ಕ ಹಾಗೂ ಆಕೆಯ ಮಕ್ಕಳಿಗೆ ಬದುಕು ಕಟ್ಟಿಕೊಟ್ಟ ಮೆಸ್ ಸುಟ್ಟು ಬೂದಿಯಾಗಿದೆ. ಜೀವನ ಕತ್ತಲಾಗಿದೆ, ಬದುಕಿಗೆ ದಿಕ್ಕು ಇಲ್ಲದಾಗಿದೆ. ಯಾರದ್ದೋ ಮಹಾ ದ್ವೇಷಕ್ಕೆ ಪುಟ್ಟಕ್ಕನ ಸಂಸಾರ ಬೀದಿ ಪಾಲಾಗಿದೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ವಾಪಸಾಗಿದ್ದಾಳೆ ಪುಟ್ಟಕ್ಕ. ಆದರೆ ಸುಟ್ಟು ಕರಕಲಾಗಿರುವ ಮೆಸ್ನಲ್ಲಿ ಆಕೆಯ ರೋಧನೆ ನೋಡಲು ಸಾಧ್ಯವಾಗುತ್ತಿಲ್ಲ. ಸುಟ್ಟ ಬಳಿಕ ಇರುವ ಬೂದಿಯ ಮೇಲೆ ಕೈಯಾಡಿಸಿ ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ. ನನಗೆ ಈ ಮೆಸ್ಸೇ ತಾಯಿಯಾಗಿತ್ತು. ಮಕ್ಕಳು ತಾಯಿಯ ಹೊಟ್ಟೆಯಲ್ಲಿದ್ದಾಗ ಹೇಗೆ ಆ ತಾಯಿ ನೂರಾರು ಕನಸು ಕಂಡಿರುತ್ತಾಳೋ ಅದೇ ರೀತಿ ನಾನೂ ಕನಸು ಕಂಡಿದ್ದೆ ಎಂದು ಹಿಂದಿನದ್ದನ್ನು ನೆನೆಪು ಮಾಡಿಕೊಂಡು ಪುಟ್ಟಕ್ಕ ರೋಧಿಸುತ್ತಿದ್ದಾಳೆ. ಆಕೆಯನ್ನು ಸಮಾಧಾನ ಪಡಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಕಂಠಿಯ ತಾಯಿ ಬಂಗಾರಮ್ಮನ ಮೇಲೆ ಈ ಆರೋಪ ಬಂದಿದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಕಂಠಿ ಇದ್ದಾನೆ. ಪುಟ್ಟಕ್ಕನ ಮುಂದಿನ ನಡೆ ಏನು?
ಝೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು (Puttakkana Makkalu) ಸದಾ ಟಿಆರ್ಪಿಯಲ್ಲಿ ಟಾಪ್ಮೋಸ್ಟ್ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ.
SEETARAMA: ನೀವಿರೋ ಮನೆಗೆ ಎಷ್ಟು ಬಾಡಿಗೆ ಕೇಳಿದ ಮಿಡ್ಲ್ಕ್ಲಾಸ್ ಸೀತಾ: ಬಿಲೇನಿಯರ್ ರಾಮ ಕಕ್ಕಾಬಿಕ್ಕಿ- ಮುಂದೆ?
ಆದರೆ ಯಾರದ್ದೋ ದ್ವೇಷದ ಕಿಡಿಗೆ ಪುಟ್ಟಕ್ಕನ ಮೆಸ್ಗೆ (Mess) ಬೆಂಕಿ ಹಚ್ಚಲಾಗಿದೆ. ಈಗ ಪುಟ್ಟಕ್ಕ ಮತ್ತು ಆಕೆಯ ಮಕ್ಕಳಿಗೆ ದಾರಿ ಕಾಣಿಸಲಾಗಿದೆ. ಪುಟ್ಟಕ್ಕೆ ಮುಂದೆ ಏನು ಮಾಡುತ್ತಾಳೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಇದರ ಮಹಾ ಸಂಚಿಕೆ ಇಂದು ಬಿತ್ತರಗೊಳ್ಳಲಿದೆ. ಸಂಜೆ 7.30 ರಿಂದ 8.30ರವರೆಗೆ ಈ ಧಾರಾವಾಹಿ ಇಂದು ಪ್ರಸಾರ ಆಗಲಿದೆ. ಇದರಲ್ಲಿ ಪುಟ್ಟಕ್ಕ ಮೆಸ್ನಲ್ಲಿ ಬಿಕ್ಕಿಬಿಕ್ಕಿ ಅತ್ತು ಆ ಮೆಸ್ ಕಟ್ಟಲು ತಾನು ಪಟ್ಟಿರುವ ಶ್ರಮದ ಬಗ್ಗೆ ರೋದಿಸುತ್ತಿದ್ದಾಳೆ.
ಇದು ಧಾರಾವಾಹಿ (Serial) ಎನ್ನುವುದನ್ನು ಮರೆತು ಅಭಿಮಾನಿಗಳು ಪುಟ್ಟಕ್ಕನಿಗೆ ಸಮಾಧಾನ ಮಾಡುತ್ತಿದ್ದಾರೆ. ನಿನ್ನ ಅಳಿಯ ಕಂಠಿ ಇದ್ದಾನಮ್ಮಾ ಹೆದರಬೇಡ, ಎಲ್ಲವೂ ಸರಿಯಾಗುತ್ತದೆ ಎಂದು ಹಲವರು ಹೇಳುತ್ತಿದ್ದಾರೆ. ಉಮಾಶ್ರೀ ಅಮ್ಮಾ ಹೇಗೆ ನಿಮ್ಮನ್ನ ವರ್ಣಿಸಲಿ ನಾನು ಪದಗಳೇ ಸಾಲದು ಅಮ್ಮಾ ಎಂದು ಪುಟ್ಟಕ್ಕ ಪಾತ್ರಧಾರಿ ಉಮಾಶ್ರೀಯವರ (Umashree)ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನೀವು ಎಷ್ಟೋ ತಾಯಂದಿರಿಗೆ ಸ್ಫೂರ್ತಿ ಕಣಮ್ಮಾ, ನೀವೇ ಹೀಗೆ ಅತ್ತರೆ ಉಳಿದವರ ಗತಿಯೇನು ಎಂದೂ ಕೆಲವು ಕಮೆಂಟ್ ಮೂಲಕ ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಮುಂದಿನ ನಡೆ ಏನು ಎಂಬ ಬಗ್ಗೆ ಫ್ಯಾನ್ಸ್ ಕಾತರರಿಂದ ಕಾಯುತ್ತಿದ್ದಾರೆ.
ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್ನಲ್ಲಿ ಭರ್ಜರಿ ಸ್ಟೆಪ್: ಉಫ್ ಎಂದ ಫ್ಯಾನ್ಸ್!
