ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಅರ್ಜುನ್ ಮತ್ತು ನೇಹಾ ತಮ್ಮ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಮಾತನಾಡಿದ್ದಾರೆ.  

ಲೆಫ್ಟ್‌ ರೈಟ್‌ ಲೆಫ್ಟ್‌ ಮಿಲೀ ಜಬ್ ಹಮ್ ತುಮ್ ಮತ್ತು ನಾಗಿನಿ ಧಾರಾವಾಹಿಯಲ್ಲಿ ಅಭಿನಯಿಸಿ ಮನೆ ಮಾತಾಗಿರುವ ನಟ ಅರ್ಜುನ್ ಬಿಜ್ಲಾನಿ ಮತ್ತು ಪತ್ನಿ ನೇಹಾ ಸ್ವಾಮಿ ಸ್ಟಾರ್ ಪ್ಲಸ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಈ ಜೋಡಿ ತಮ್ಮ ಲವ್, ಫ್ಯಾಮಿಲಿ ಮತ್ತು ಕೆಲಸ ಬಗ್ಗೆ ಫೋಸ್ಟ್ ಮಾಡುವ ಮೂಲಕ ಫಾಲೋವರ್ಸ್‌ನ ಎಂಗೇಜ್ ಆಗಿಟ್ಟುಕೊಂಡಿರುತ್ತಾರೆ. ಇವರಿಬ್ಬರು ಹ್ಯಾಪಿ ಕಪಲ್ ಎಂದು ಹೇಳುವ ಜನರಿಗೆ ಶೋನಲ್ಲಿ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.

ಹೌದು! ಅರ್ಜುನ್ ಬಿಜ್ಲಾನಿ ಮತ್ತು ನೇಹಾ ಸ್ವಾಮಿ ಅರ್ಥಿಕ ಸಂಕಷ್ಟದಿಂದ ಮಗುವನ್ನು ತೆಗೆಸುವ ನಿರ್ಧಾರ ಮಾಡಿದ್ದು ಯಾಕೆಂದು ಹೇಳಿದ್ದಾರೆ. 'ನಾವು ಮದುವೆಯಾದ ಒಂದು ವರ್ಷದಲ್ಲಿ ನೇಹಾ ಸ್ವಾಮಿ ಗರ್ಭಿಣಿ ಅನ್ನುವ ವಿಚಾರ ತಿಳಿಯಿತ್ತು. ನನಗೆ ಕಳೆದ ಒಂದು ವರೆ ವರ್ಷದಿಂದ ಕೆಲಸವಿರಲಿಲ್ಲ. ಹೀಗಾಗಿ ಮಗುವನ್ನು ಉಳಿಸಿಕೊಳ್ಳುವುದು ಬೇಡ ಎಂದು ನಿರ್ಧಾರ ಮಾಡಿಕೊಂಡೆವು. ಆಗ ನನ್ನ ಬ್ಯಾಂಕ್ ಅಕೌಂಟಲ್ಲಿ ಕೇವಲ 40-50000 ಸಾವಿರ ಹಣವಿತ್ತು. ಇಷ್ಟೇ ಹಣದಲ್ಲಿ ಮಗುವನ್ನು ನೋಡಿಕೊಳ್ಳುವುದಕ್ಕೆ ಆಗೋಲ್ಲ ಮಗುವನ್ನು ತೆಗೆಸಿ ಬಿಡೋಣ ಅಂತ ನಾವು ಆಸ್ಪತ್ರೆಗೆ ಹೋದೆವು' ಎಂದು ಅರ್ಜುನ್ ಹೇಳಿದ್ದಾರೆ. 

ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಇಷ್ಟೇ ರಿವೀಲ್ ಮಾಡಿರುವುದು. ಅರ್ಜುನ್ ಮತ್ತು ನೇಹಾ ಹೇಳಿಕೆಗೆ ವೀಕೆಂಡ್‌ನಲ್ಲಿ ಪ್ರಸಾರವಾಗುವ ಎಪಿಸೋಡ್ ನೋಡಬೇಕು. ಅರ್ಜುನ್ ಈ ಘಟನೆ ಬಗ್ಗೆ ಹೇಳುವಾಗ ನೇಹಾ ಬಿಕ್ಕಿಬಿಕ್ಕಿ ಅಳುತ್ತಿದ್ದರು. ರೋಹಿತ್ ಶೆಟ್ಟಿ ನೇತೃತ್ವದಲ್ಲಿ ಮೂಡಿ ಬಂದ ಖತ್ರೋನ್ ಕೆ ಕಿಲಾಡಿ 11 ಶೋ ವಿನ್ನರ್ ಟ್ರೋಫಿ ಅರ್ಜುನ್ ಕೈ ಸೇರಿದ ದಿನದಿಂದಲೂ ಹೆಡ್‌ಲೈನ್ಸ್‌ನಲ್ಲಿದ್ದಾರೆ. 

ಮದುವೆಯ ನಂತರ ಪತಿ ಜೊತೆ ಅಂಕಿತಾ ಲೋಖಂಡೆಯ ರೊಮ್ಯಾಂಟಿಕ್ ಹೋಳಿ!

ಕಳೆದ ಗುರುವಾರ ಅರ್ಜುನ್ 'Forever is a lie' ಎಂದು ಬರೆದುಕೊಂಡು ಹಾರ್ಟ್‌ಬ್ರೇಕ್ ಸಿಂಬಲ್‌ನ ಫೋಸ್ಟ್‌ ಮಾಡಿದ್ದರು. ಅರ್ಜುನ್ ಮತ್ತು ನೇಹಾ ನಡುವೆ ಏನೋ ಆಗಿದೆ ಎಂದು ನೆಟ್ಟಿಗರು ಕಾಲ್ ಮತ್ತು ಮೆಸೇಜ್ ಮಾಡಿದ್ದಾರೆ. ಗೊಂದಲ ಮತ್ತು ಗಾಸಿಪ್ ಹೆಚ್ಚಾಗುತ್ತಿದ್ದಂತೆ ಅರ್ಜುನ್ ಕ್ಲಾರಿಟಿ ಕೊಟ್ಟಿದ್ದಾರೆ. 'ಜೀವನದಲ್ಲಿ ಪ್ರೀತಿ ಶಾಶ್ವತ. ನಾನು ನಿನ್ನೆ ಮಾಡಿದ ಪೋಸ್ಟ್‌ ನನ್ನ ವೈಯಕ್ತಿಕ ಜೀವನದ ಬಗ್ಗೆ ಅಲ್ಲ. ನಾನು ತುಂಬಾನೇ ಕಾಲ್ ಮತ್ತು ಮೆಸೇಜ್‌ಗಳನ್ನು ಪಡೆಯುತ್ತಿರುವೆ. ತುಂಬಾ ಖುಷಿಯಾಗುತ್ತಿದೆ ಏಕೆಂದರೆ ಅಷ್ಟು ಜನರು ನನ್ನ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ನಿಮ್ಮನ್ನ ನಾನು ಸದಾ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದರು.

2013 ಮೇ 20ರಂದು ಅರ್ಜುನ್ ಮತ್ತು ನೇಹಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು , 2015 ಜನವರಿ 21 ಅವರಿಗೆ ಪುತ್ರ ಹುಟ್ಟಿದ. ಅಯಾನ್‌ನ ಅನೇಕ ಬಾರಿ ರಿಯಾಲಿಟಿ ಶೋಗಳಲ್ಲಿ ತೋರಿಸಿದ್ದಾರೆ.

Saif Ali Khanಗೆ ದಶಕಕ್ಕೊಂದು ಮಗು , 60ನೇ ವಯಸ್ಸಿನಲ್ಲಾದರೂ ಸುಮ್ಮನಿರಲಿ ಎಂದ Kareena Kapoor

ನೇಹಾ ಭೇಟಿ:

'ನಾನು 18-19 ವರ್ಷಗಳ ಹಿಂದೆ ನೇಹಾ ಸ್ವಾಮಿನ ಭೇಟಿ ಮಾಡಿದ್ದು. ಆಗ ಕಷ್ಟ ದಿನಗಳನ್ನು ಎದುರಿಸುತ್ತಿದ್ದೆ. ನನ್ನ ಫಸ್ಟ್‌ ಶೋ ಕೂಡ ಸಹಿ ಮಾಡಿರಲಿಲ್ಲ. ಜುಹೂನ 5 star ಹೋಟೆಲ್‌ನಲ್ಲಿ ಪಾರ್ಟಿ ಇತ್ತು ಏನೋ ಒಂದು ಕಿತಾಪತಿ ಮಾಡಿ ಎಂಟ್ರಿ ಪಡೆದುಕೊಂಡಿದ್ದು. ನೇಹಾ ಲಕ್ನವ್ ಹುಡುಗಿ ಅವರ ಸ್ನೇಹಿತೆ ಆಹ್ವಾನ ನೀಡಿದ್ದರು. ಆಕೆ ಒಂದು ಕಡೆ ಕುಳಿತುಕೊಂಡಿದ್ದರು ನಾನು ಆಕೆಯ ಮಂಡಿ ಉದ್ದ ಕೂದಲನ್ನು ನೋಡಿದೆ. ಒಂದೊಂದು ಸಲ ಹಿಂದೆಯಿಂದ ನೋಡಿನೇ ನಾವು ಅವರು ಎಷ್ಟು ಸುಂದರವಾಗಿದ್ದಾರೆ ಎಂದು ಹೇಳಬಹುದು. ನಾನು ಆಕೆಯ ಮುಂದೆ ನಡೆದುಕೊಂಡು ಹೋದೆ ಆಗ ನಾವು ಮಾತನಾಡುವುದಕ್ಕೆ ಶುರು ಮಾಡಿದ್ದು' ಎಂದು ಅರ್ಜುನ್ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.