ಸರಿಗಮಪ ಲಿಟಲ್ ಚಾಂಪ್ಸ್‌ ರಿಯಾಲಿಟಿ ಶೋಗೆ ಗಾಯಕ ಹೇಮಂತ್ ತೀರ್ಪುಗಾರರು.  ಹೊಸ ತೀರ್ಪುಗಾರರ ಆಗಮನಕ್ಕೆ ಸಂತಸ ವ್ಯಕ್ತ ಪಡಿಸಿದ ನೆಟ್ಟಿಗರು...

ಕನ್ನಡ ಕಿರುತೆರೆ ಜನ ಮೆಚ್ಚಿದ ರಿಯಾಲಿಟಿ ಶೋ 'ಸರಿಗಮಪ'. ಪುಟ್ಟ ಮಕ್ಕಳು ಕೂಡ ಈ ಸಂಗೀತ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಾರೆ. ಅವರಿಗಂತಲೇ ಲಿಟಲ್ ಚಾಂಪ್ಸ್‌ ಸೀಸನ್ ನಡೆಸಲಾಗುತ್ತದೆ. ಇಡೀ ಕರ್ನಾಟಕದ ಮೂಲೇ ಮೂಲೆಗಳಿಂದಲೂ ಪುಟ್ಟ ಮಕ್ಕಳು ಬಂದು ಸ್ಪರ್ಧಿಸುತ್ತಾರೆ. ಈ ಸಲ ಪ್ರಸಾರವಾಗುತ್ತಿರುವ ಸೀಸನ್‌ಗೆ ಹೊಸ ತೀರ್ಪುಗಾರರು ಇರಲಿದ್ದಾರೆ.

ಹೌದು! ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಯಕ ಹೇಮಂತ್ ಸರಿಗಮಪ ಲಿಟಲ್ ಚಾಂಪ್ಸ್‌ ಸೀಸನ್‌ನ ತೀರ್ಪುಗಾರರಾಗಿ ಮತ್ತೆ ಕಿರುತೆರೆಗೆ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. ಈ ಮೂಲಕ ಫ್ರೆಶ್ ತೀರ್ಪುಗಾರರನ್ನು ಕಾಣಲು ವೀಕ್ಷಕರು ಕೂಡ ಕುತೂಹಲದಲ್ಲಿದ್ದಾರೆ. 

ಕನ್ನಡದ ಗಾಯಕ ಹೇಮಂತ್ ಮತ್ತು ಕೃತಿಕ ಮದುವೆ ವಿಡಿಯೋ!

ಹೇಮಂತ್ ಅವರ ಜೊತೆ ನಾದಬ್ರಹ್ಮ ಹಂಸಲೇಖ ಗುರು, ವಿಜಯ್ ಪ್ರಕಾಶ್ ಹಾಗೂ ಮ್ಯೂಸಿಕಲ್ ಕಂಪೋಸರ್ ಅರ್ಜುನ್ಯ ಜನ್ಯ ತೀರ್ಪುಗಾರರಾಗಿರುತ್ತಾರೆ. ಎಂಥಾ ಪ್ರಕಾರ ಈ ಸೀಸನ್‌ಗೂ ಅನುಶ್ರೀ ನಿರೂಪಕಿಯಾಗಿರುತ್ತಾರೆ. ಸುಮಾರು ಎರಡು-ಮೂರು ತಿಂಗಳ ಕಾಲ ನಡೆಯುವ ಸಂಗೀತ ರಿಯಾಲಿಟ ಶೋನಲ್ಲಿ ಒಬ್ಬ ಪುಟಾಣಿ ವಿಜೇತರು ಕ್ಯಾಶ್ ಪ್ರೈಸ್ ಅಂದ್ರೆ ಹಣ ಹಾಗೂ ಟ್ರೋಫಿ ಗಳಿಸಲಿದ್ದಾರೆ. 

ಇಷ್ಟು ದಿನಗಳ ಕಾಲ ಸರಿಗಮಪ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಕೂಡ ಒಬ್ಬರಾಗಿದ್ದರು. ಆದರೆ ಅವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನಡೆಸಿಕೊಡುತ್ತಿರುವ ಕಾರಣ ಈ ಸೀಸನ್ ಸರಿಗಮಪದಲ್ಲಿ ಕಾಣಿಸಿಕೊಳ್ಳುವುದಿಲ್ಲ.