Silli Lalli Kannada Serial Artist Real Story: ʼಸಿಲ್ಲಿ ಲಲ್ಲಿʼ ಧಾರಾವಾಹಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈ ಸೀರಿಯಲ್‌ ತೆರೆಕಂಡು ಎಷ್ಟೋ ವರ್ಷಗಳು ಉರುಳಿವೆ. ಇನ್ನೂ ಈ ಧಾರಾವಾಹಿಯ ಪಾತ್ರಗಳು ಜನರಿಗೆ ನೆನಪಿವೆ. ಈ ಸೀರಿಯಲ್‌ನಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದ ಜೋಡಿಯಿಂದ ರಿಯಲ್‌ ಲೈಫ್‌ನಲ್ಲಿ ಸತಿ-ಪತಿಯಾಗಿ ಜೀವನ ಮಾಡುತ್ತಿದೆ. 

ತೆರೆ ಮೇಲೆ ಅತ್ತೆ-ಅಳಿಯ, ತಾಯಿ-ಮಗ, ಅಣ್ಣ-ತಂಗಿಯಾಗಿ ನಟಿಸಿದ ಕೆಲ ಕಲಾವಿದರು, ತೆರೆ ಹಿಂದಿ ಸತಿ-ಪತಿಗಳಾದ ಎಷ್ಟೋ ಉದಾಹರಣೆ ಇದೆ. ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿಯೂ ಕೂಡ ಅಣ್ಣ-ತಂಗಿಯಾದವರು ತೆರೆ ಹಿಂದೆ ಪತಿ-ಪತ್ನಿಯಾಗಿದ್ದಾರೆ. ಈ ವಿಷಯ ಕೆಲವರಿಗೆ ಗೊತ್ತಿರಬಹುದು.

ಸಾವಿರ ಕಂತು ಪೂರೈಸಿದ್ದ ಸೀರಿಯಲ್‌
ಯಶಸ್ವಿಯಾಗಿ 1162 ಕಂತುಗಳನ್ನು ಪೂರೈಸಿದ್ದ ʼಸಿಲ್ಲಿ ಲಲ್ಲಿʼ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ದೊಡ್ಡ ರೆಕಾರ್ಡ್‌ ಕ್ರಿಯೇಟ್‌ ಮಾಡಿತ್ತು. ಈ ಸೀರಿಯಲ್‌ ಶುರು ಆಗುವ ಸಮಯಬಂದಕೂಡಲೇ ಚಿಕ್ಕ ವಯಸ್ಸಿನಿಂದ ವೃದ್ಧರವರೆಗೆ ಎಲ್ಲರೂ ಬಂದು ಟಿವಿ ಮುಂದೆ ಕೂರುತ್ತಿದ್ದರು. ಅಷ್ಟರಮಟ್ಟಿಗೆ ಈ ಸೀರಿಯಲ್‌ ವೀಕ್ಷಕರನ್ನು ಹಿಡಿದಿಟ್ಟಿತ್ತು. 

ಖಡಕ್‌ ಬಂಗಾರಮ್ಮ, ಸಾಫ್ಟ್‌ ಅಶೋಕ ಇಬ್ರೂ ಹುಟ್ಟಿದ್ದು ಇವತ್ತೇ! ಇಬ್ಬರೂ ತಾರೆಯರ ಇಂಟರೆಸ್ಟಿಂಗ್‌ ವಿಷ್ಯ ಇಲ್ಲಿದೆ

ಪಾತ್ರಧಾರಿಗಳು ಯಾರು?
ಈ ಧಾರಾವಾಹಿಯಲ್ಲಿ ಡಾ ವಿಠ್ಠಲ್‌ ರಾವ್‌ ವೈದ್ಯರಾದರೆ, ಇವರ ಪತ್ನಿ ಲಲಿತಾಂಬಾ ಸಮಾಜಸೇವಕಿ. ಇನ್ನು ವಿಶಾಲಾಕ್ಷಿ, ರಂಗನಾಥ್‌ ಪಕ್ಕದಮನೆಯವರು. ಕಾದಂಬರಿ ಬರೆಯುವ ಹುಚ್ಚು ಸಿಲ್ಲಿಗೆ ( ಕಥಾಲೇಖಕಿ ಶ್ರೀಲತಾ). ಸಿಲ್ಲಿ ವಿಠ್ಠಲನ ತಂಗಿ. ಇನ್ನು ಸೂಜಿ ಪಾತ್ರದಲ್ಲಿ ಜ್ಯೋತಿ ಕಿರಣ್‌ ನಟಿಸುತ್ತಿದ್ದಾರೆ. ಸಿಲ್ಲಿ ಪಾತ್ರದಲ್ಲಿ ಪ್ರಶಾಂತ್‌ ಅವರು ನಟಿಸುತ್ತಿದ್ದರು. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿಗೆ ಮಗ ಕೂಡ ಇದ್ದಾನೆ. 

ಸೀರಿಯಲ್‌ನಲ್ಲಿ ಅಣ್ಣ-ತಂಗಿ
ಅಂದು ಈ ಧಾರಾವಾಹಿಯಲ್ಲಿ ಪ್ರಹ್ಲಾದ್‌ ಪಾತ್ರದಲ್ಲಿ ಪ್ರಶಾಂತ್‌, ಶ್ರೀಲತಾ ಪಾತ್ರದಲ್ಲಿ ರೂಪಾ ನಟಿಸಿದ್ದರು. ಅಂದು ಇವರಿಬ್ಬರ ಮಧ್ಯೆ ಸ್ನೇಹ ಶುರುವಾಗಿ, ಈಗ ಸತಿ-ಪತಿಗಳಾಗಿ ಬದುಕುತ್ತಿದ್ದಾರೆ. ರೂಪಾ ಆ ಧಾರಾವಾಹಿಯಲ್ಲಿ ರೈಟರ್‌ ಪಾತ್ರ ಮಾಡುತ್ತಿದ್ದರು. ಆಗ ಅವರಿಗೆ ರೈಟಿಂಗ್‌ ಬರುತ್ತಿರಲಿಲ್ಲವಂತೆ. ಆದರೆ ಈಗ ಅವರು ಧಾರಾವಾಹಿ, ಸಿನಿಮಾಗಳಿಗೆ ಕಥೆ, ಸಂಭಾಷಣೆ ಕೂಡ ಬರೆದಿದ್ದಾರಂತೆ. ಇನ್ನು ʼರಾಜ ರಾಣಿʼ ರಿಯಾಲಿಟಿ ಶೋನಲ್ಲಿ ರೂಪಾ-ಪ್ರಶಾಂತ್‌ ಭಾಗವಹಿಸಿದ್ದರು. 

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಮಿತ್ರ, ಕನ್ನಡಿಗರ ಮನಸಿನ ಹತ್ರ 'ಪಂಚರಂಗಿ' ಶಿನು ಜಾರ್ಜ್!

ಮಗ ಕೂಡ ನಟ! 
ಇನ್ನು ಇವರ ಏಕೈಕ ಪುತ್ರ ಆಲಾಪ್‌ ಕೆಲ ಧಾರಾವಾಹಿ, ಡ್ರಾಮಾ ಜ್ಯೂನಿಯರ್ಸ್‌ ಶೋನಲ್ಲಿ ಕೂಡ ಭಾಗವಹಿಸಿದ್ದನು. ಸದ್ಯ ಯುಟ್ಯೂಬ್‌ ಚಾನೆಲ್‌ ಹೊಂದಿರುವ ರೂಪಾ ಪ್ರಭಾಕರ್‌ ಅವರು ಮನೆಗಳು, ಹೋಟೆಲ್‌, ರೆಸಾರ್ಟ್‌ ಎಂದು ವಿಭಿನ್ನವಾದ ವಿಡಿಯೋಗಳನ್ನು ಮಾಡಿ ಅಪ್‌ಲೋಡ್‌ ಮಾಡುತ್ತಿರುತ್ತಾರೆ. 

ಇವರಿಬ್ಬರು ಎಷ್ಟೇ ಪ್ರಾಜೆಕ್ಟ್‌ಗಳನ್ನು ಮಾಡಿದರೂ ಕೂಡ ಇಂದಿಗೂ ಜನರು ಇವರನ್ನು ʼಸಿಲ್ಲಿ ಲಲ್ಲಿʼ ಧಾರಾವಾಹಿಯ ಪಾತ್ರಗಳಿಂದಲೇ ಗುರುತಿಸಿ ಕರೆಯುತ್ತಾರಂತೆ. ಈ ಧಾರಾವಾಹಿಯ ಎಲ್ಲ ಪಾತ್ರಗಳು ಸಖತ್‌ ಪಾಪುಲರ್‌ ಆಗಿತ್ತು. 

View post on Instagram