ಫ್ರೆಂಡ್‌ ರಾಮ್‌ನ ನೋಡಲು ಯಾರಿಗೂ ಹೇಳದೇ ಹೊರಟೇಬಿಟ್ಟಿದ್ದಾಳೆ ಸಿಹಿ. ಅತ್ತ ರಾಮ್‌ನನ್ನು ಕಾಣದೇ ಸೀತೆ ಚಡಪಡಿಸುತ್ತಿದ್ದಾಳೆ. ಮುಂದೇನು?  

ಈ ಮುದ್ದು ಸಂಬಂಧಕ್ಕೆ ಸ್ನೇಹದ ಹೆಸರು ಕೊಟ್ಟಿದ್ದರೂ, ಅದು ಅದಕ್ಕಿಂತಲೂ ಮಿಗಿಲಾದುದು. ಅಪ್ಪ-ಮಗಳ ಸಂಬಂಧಕ್ಕಿಂತಲೂ ಬಹುದೊಡ್ಡ ಸಂಬಂಧವದು. ಇದು ಸೀತಾರಾಮ ಸೀರಿಯಲ್‌ನ ಸಿಹಿ ಮತ್ತು ರಾಮ್‌ನ ಸಂಬಂಧ. ಫ್ರೆಂಡ್‌ ಫ್ರೆಂಡ್‌ ಅನ್ನುತ್ತಲೇ ರಾಮ್‌ನ ಮನದಲ್ಲಿ ನೆಲೆಯೂರಿಬಿಟ್ಟಿದ್ದಾಳೆ ಮುದ್ದು ಕಂದ. ಇನ್ನು ಸಿಹಿಗೋ ರಾಮ್‌ನನ್ನು ಬಿಟ್ಟುಬಿಡಲಾಗದ ಅನುಬಂಧ. ಅತ್ತ ರಾಮ್‌ ಆಸ್ಪತ್ರೆಗೆ ಸೇರಿದ್ದಾನೆ. ಆತನನ್ನು ನೋಡಲು ಸಿಹಿ ಚಡಪಡಿಸುತ್ತಿದ್ದಾರೆ. ಅಮ್ಮ ಸೀತಾಳಿಗೆ ಹೇಳಿದರೆ ಮತ್ತೆ ಕರೆದುಕೊಂಡು ಹೋಗುವುದಿಲ್ಲ ಎನ್ನುವ ಭಯ. ಆದರೆ ಏನಾದರೂ ಮಾಡಿ ರಾಮ್‌ನನ್ನು ನೋಡಲೇಬೇಕು ಎನ್ನುವ ಛಲ.

ಅತ್ತ ರಾಮ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ. ಅದಕ್ಕಾಗಿ ಹೇಗಾದರೂ ಮಾಡಿ ರಾಮ್‌ನ ಮನೆಗೆ ಹೋಗುವ ಪ್ಲ್ಯಾನ್‌ ಮಾಡಿದ್ದಾಳೆ ಸಿಹಿ. ಆದರೆ ಆಕೆಗೆ ದಾರಿ ಗೊತ್ತಿಲ್ಲ. ಶಾಲೆಗೆ ಹೋಗಬೇಕಿದ್ದ ಸಿಹಿ ಯಾರಿಗೂ ಹೇಳದೇ ಶಾಲೆ ತಪ್ಪಿಸಿ ರಾಮ್‌ನನ್ನು ಹುಡುಕಿ ಹೊರಟಿದ್ದಾಳೆ. ದಾರಿಯಲ್ಲಿ ಸಿಗುವ ಡೆಲವರಿ ಬಾಯ್‌ಗೆ ಅಡ್ರೆಸ್‌ ಕೇಳಿದ್ದಾಳೆ. ಆದರೆ ಆತ ತನಗೆ ಗೊತ್ತಿಲ್ಲ ಎಂದಿದ್ದಾನೆ. ರಾಮ್‌ನನ್ನು ಹುಡುಕುವ ಭರದಲ್ಲಿ ಸಿಹಿಗೆ ಏನು ಆಗುತ್ತದೋ ಎನ್ನುವ ಆತಂಕ ಅಭಿಮಾನಿಗಳಲ್ಲಿ.

View post on Instagram

ಅಯ್ಯೋ ಶ್ರೇಷ್ಠಾ ಮದ್ವೆಯಾದವನ ಹಿಂದೆ ಹೋಗೋದು ಬೇಕಿತ್ತಾ ನಿಂಗೆ ಅಂತಿದ್ದಾರೆ ಫ್ಯಾನ್ಸ್‌!

ಇದಾಗಲೇ ಎರಡು ಬಾರಿ ಸಿಹಿ ಕಿಡ್ನ್ಯಾಪ್‌ ಆಗಿದ್ದಾಳೆ. ರಾಮ್‌ನ ಚಿಕ್ಕಮ್ಮ ಭಾರ್ಗವಿಯ ಕುತಂತ್ರದಿಂದ ಸಿಹಿಯನ್ನು ಅಪಹರಿಸಲಾಗಿತ್ತು. ಆದರೆ ಇದೀಗ ಸಿಹಿ ಯಾರಿಗೂ ಹೇಳದೇ ಹೋಗಿಬಿಟ್ಟಿದ್ದಾಳೆ. ಅದೇ ಇನ್ನೊಂದೆಡೆ, ಕಚೇರಿಗೆ ರಾಮ್‌ ಮಾಜಿ ಲವರ್‌ ಚಾಂದನಿ ಎಂಟ್ರಿ ಆಗಿದೆ. ಸೀತಾಳನ್ನು ಉದ್ದೇಶಿಸಿ ತನಗೆ ಮೇಡಂ ಎಂದು ಕರೆಯುವಂತೆ ಹೇಳಿದ್ದಾಳೆ. ಇವಳು ಯಾರು ಎಂದು ಸೀತಾಗಾಗಲೀ, ಪ್ರಿಯಾಗಾಗಲೀ ಗೊತ್ತಿಲ್ಲ. 

ಅದೇ ಇನ್ನೊಂದೆಡೆ, ರಾಮ್‌ನನ್ನು ನೋಡದೇ ಸೀತಾ ಚಿಂತಾಕ್ರಾಂತಳಾಗಿದ್ದಾಳೆ. ರಾಮ್‌ಗಾಗಿ ಮನಸ್ಸು ಚಡಪಡಿಸುತ್ತಿದೆ. ಮೊಬೈಲ್‌ನಲ್ಲಿ ಆತನ ಫೋಟೋ ನೋಡಿ ಭಾವುಕಳಾಗಿದ್ದಾಳೆ. ಮನಸ್ಸಿನಲ್ಲಿ ಪ್ರೀತಿ ಚಿಗುರುತ್ತಿದೆ. ಹತ್ತಿರ ಇದ್ದಾಗ, ಮನೆಗೆ ಬಂದಾಗ, ಮಾತನಾಡಲು ಬಂದಾಗ ನಾನು ಏನೆಲ್ಲಾ ಹೇಳಿ ದೂರ ಮಾಡಿದೆ ಎಂದು ನೊಂದುಕೊಳ್ಳುತ್ತಿದ್ದಾಳೆ. ಪ್ರೀತಿ ಇನ್ನೇನು ಚಿಗುರುವ ಹಂತದಲ್ಲಿಯೇ ಚಾಂದನಿಯ ಎಂಟ್ರಿ ಕೂಡ ಆಗಿದ್ದು, ಚಾಂದನಿಯನ್ನು ಮುಂದೆ ಮಾಡಿಕೊಂಡು ಚಿಕ್ಕಮ್ಮ ಭಾರ್ಗವಿ ಸೀತಾ ಮತ್ತು ರಾಮ್‌ನನ್ನು ದೂರ ಮಾಡಲು ನೋಡುತ್ತಿದ್ದಾಳೆ. ಇತ್ತ ಈ ಲವ್‌ಸ್ಟೋರಿ ಏನಾಗುವುದು ಎನ್ನುವ ಚಿಂತೆಯಾದರೆ, ಇನ್ನೊಂದೆಡೆ ಸಿಹಿಗೆ ಏನಾಗುವುದೋ ಎನ್ನುವ ಆತಂಕ.

ಅನಂತ್‌ ಅಂಬಾನಿ ಮದ್ವೆಯಲ್ಲಿ ರಾಮ್‌ಚರಣ್‌ಗೆ ಶಾರುಖ್‌ ಖಾನ್‌ ಇದೆಂಥ ಇನ್‌ಸಲ್ಟ್‌? ಫ್ಯಾನ್ಸ್‌ ಕಿಡಿಕಿಡಿ

View post on Instagram