ಹೊಸ ಹೊಸ ಬಯಕೆಯು ನಿನ್ನಿಂದ... ಎಂದ ಪೂರ್ಣಿ- ಅಪೇಕ್ಷಾ: ಯಾರಿಂದ ಹೇಳ್ರಪ್ಪ ಅಂತಿರೋ ಕಮೆಂಟಿಗರು...
ಶ್ರೀರಸ್ತು ಶುಭಮಸ್ತು ಸೀರಿಯಲ್ ಪೂರ್ಣಿ ಮತ್ತು ಅಮೃತಧಾರೆ ಅಪೇಕ್ಷಾ ಒಲವು-ಗೆಲುವು ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದಾರೆ. ನೆಟ್ಟಿಗರು ಏನು ಹೇಳಿದ್ರು ನೋಡಿ...
ಸೀರಿಯಲ್ ನಟ-ನಟಿಯರು ತಮ್ಮ ಬಿಜಿ ಷೆಡ್ಯೂಲ್ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುತ್ತಾರೆ. ಇವರು ರೀಲ್ಸ್ ಮಾಡಿದರೆ ಸಹಜವಾಗಿಯೇ ಅದಕ್ಕೆ ವ್ಯೂಸ್ಗಳು ಹೆಚ್ಚಾಗುತ್ತವೆ. ಅದರಲ್ಲಿಯೂ ಕೆಲವು ನಟಿಯರಂತೂ ರೀಲ್ಸ್ ಮೂಲಕವೇ ಸೀರಿಯಲ್ಗಿಂತಲೂ ಹೆಚ್ಚು ಫೇಮಸ್ ಆಗುವವರು ಇದ್ದಾರೆ. ಶ್ರೀರಸ್ತು ಶುಭಮಸ್ತು ಸೀರಿಯಲ್ ಪೂರ್ಣಿ ಮತ್ತು ಅಮೃತಧಾರೆ ಅಪೇಕ್ಷಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದಾರೆ. ಇದಾಗಲೇ ಇವರಿಬ್ಬರೂ ಬೇರೆ ಬೇರೆ ನಟ-ನಟಿಯರ ಜೊತೆ ಸೇರಿ ರೀಲ್ಸ್ ಮಾಡಿದ್ದರೂ, ಇದೀಗ ಇಬ್ಬರೂ ಒಟ್ಟಾಗಿ 1977ರಲ್ಲಿ ಬಿಡುಗಡೆಯಾದ ಒಲವು-ಗೆಲುವು ಚಿತ್ರದ ನನ್ನೆದೆ ಕೋಗಿಲೆಯ, ಒಲವಿನ ಪಲ್ಲವಿಯ, ದನಿಯಲಿ ವಿನೂತನ ಜೀವ ಭಾವ ನೀ ತಂದೆ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದರ ಕೊನೆಯಲ್ಲಿ ಹೊಸ ಹೊಸ ಬಯಕೆಯು ನಿನ್ನಿಂದ ಎಂಬ ಸಾಲು ಕೇಳಿರುವ ನೆಟ್ಟಿಗರು ಯಾರಿಂದ ಎಂದು ಹೇಳ್ರಪ್ಪಾ ಎಂದು ತಮಾಷೆ ಮಾಡುತ್ತಿದ್ದಾರೆ.
ಇನ್ನು ಅಮೃತಧಾರೆಯ ಅಪ್ಪಿ ಉರ್ಫ್ ಅಪೇಕ್ಷಾ ಬಗ್ಗೆ ಹೇಳುವುದೇ ಬೇಡ. ಇದ್ದರೆ ನಿಮ್ಮಂಥ ಅಕ್ಕ-ತಂಗಿ ಇರಬೇಕು ಎಂದು ಹಿಂದೊಮ್ಮೆ ಅಮೃತಧಾರೆಯ ಅಪ್ಪಿ ಉರ್ಫ್ ಅಪೇಕ್ಷಾ ಮತ್ತು ಭೂಮಿಕಾ ಸಹೋದರಿಯನ್ನು ತೋರಿಸಿ ಹೇಳುತ್ತಿದ್ದರು. ಆದರೆ ಈಗ ಈ ಅಕ್ಕ-ತಂಗಿ ವಾರೆಗಿತ್ತಿಯರಾಗಿದ್ದಾರೆ. ಭೂಮಿಕಾ ಈಗಲೂ ಅದೇ ಒಳ್ಳೆಯತನ ಉಳಿಸಿಕೊಂಡಿದ್ದರೆ, ಅಪೇಕ್ಷಾ ಸಂಪೂರ್ಣ ಬದಲಾಗಿದ್ದಾಳೆ. ವಿಲನ್ ಅತ್ತೆ ಜೊತೆ ಸೇರಿಕೊಂಡು ಖುದ್ದು ಅಕ್ಕನ ಬಗ್ಗೆ ತಪ್ಪು ತಿಳಿದುಕೊಂಡು ವಿಲನ್ ಆಗಿಬಿಟ್ಟಿದ್ದಾಳೆ. ಅದೇ ಇನ್ನೊಂದೆಡೆ ಅತ್ತೆಗೂ, ಮನೆಯವರಿಗೂ ಒಳ್ಳೆಯದ್ದನ್ನೇ ಬಯಸುತ್ತಾ ನೋವು ಉಣ್ಣುತ್ತಿರುವ ಕ್ಯಾರೆಕ್ಟರ್ ಶ್ರೀರಸ್ತು ಶುಭಮಸ್ತುವಿನ ಪೂರ್ಣಿಯದ್ದು.
ಬಿಗ್ಬಾಸ್ ಗೌತಮಿ ಜಾಧವ್ ಮದ್ವೆಯಾಗಿ ಐದು ವರ್ಷ: ಸಿನೆಮಾ ಸೆಟ್ನಲ್ಲಿ ಶುರುವಾದ ಲವ್ ಸ್ಟೋರಿ ಕೇಳಿ...
ಅಪ್ಪಿ ಪಾತ್ರಧಾರಿಯ ರಿಯಲ್ ಹೆಸರು ಅಮೃತಾ ನಾಯಕ್. ಇವರು ಒಂದು ಮೊಟ್ಟೆ ಕಥೆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಟೀಚರ್ ಪಾತ್ರ ಮಾಡಿದ್ದಾರೆ. ಅಲ್ಲದೇ ಇವು ಶಿವರಾಜ್‌ಕುಮಾರ್ ಅವರ ಕವಚ ಸಿನಿಮಾದಲ್ಲಿ ತಂಗಿ ಪಾತ್ರ ಮಾಡಿದ್ದಾರೆ. ಅಮೃತಧಾರೆಗೂ ಮೊದಲು ಇವರು ರಾಜಿ ಸೇರಿ ಕೆಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ. 'ಒಂದು ಮೊಟ್ಟೆಯ ಕಥೆ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ತುಂಬಾ ಭಯ ಆಗಿತ್ತು. ನನ್ನಿಂದ ನಟಿಸಲು ಸಾಧ್ಯವಾ ಎಂಬ ಆತಂಕವೂ ಕೂಡಾ ಆಕೆಗೆ ಕಾಡಿತ್ತು ಎಂದಿದ್ದರು ಅಮೃತಾ. ಆದರೆ ಮೊದಲ ಸಿನಿಮಾದಲ್ಲಿಯೇ ಒಂದು ಒಳ್ಳೆಯ ತಂಡ ಸಿಕ್ಕ ಕಾರಣ ನಟಿಸಲು ಖುಷಿಯಾಯಿತು ಎಂದಿದ್ದರು. 'ಕಥಾ ಸಂಗಮ' ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಇವರು, 'ಕವಚ' ಸಿನಿಮಾದಲ್ಲಿಯೂ ಭೇಷ್ ಎನಿಸಿಕೊಂಡರು.
ಇನ್ನು ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್ ಪತಿಯ ಹೆಸರು ಶಶಿ. ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಶಶಿ ಅವರು ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾ ಸಹೋದರನ ಪಾತ್ರ ಮಾಡುತ್ತಿದ್ದಾರೆ. ರಿಯಾಲಿಟಿ ಷೋ ಒಂದರಲ್ಲಿ ಲಾವಣ್ಯ ಅವರ ಹುಟ್ಟಿನ ಬಗ್ಗೆ ಅಪ್ಪ ಹೇಳಿಕೊಂಡಿದ್ದರು. ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!
ಥೂ... ಈ ವಯಸ್ಸಲ್ಲಿ ಗರ್ಭಿಣಿನಾ ಎನ್ನೋರಿಗೆ ಸೀರಿಯಲ್ ಮೂಲಕವೇ ನಿರ್ದೇಶಕರ ತಿರುಗೇಟು! ಭೇಷ್ ಅಂತಿರೋ ನೆಟ್ಟಿಗರು