ಸುವರ್ಣ 'ಜಾಕ್‌ಪಾಟ್'ನಲ್ಲಿ ಶೈನ್ ಶೆಟ್ಟಿ-ಕಿಶನ್ ರೊಮ್ಯಾಂಟಿಕ್ ಡಾನ್ಸ್; ಮಸ್ತ್ ಆಗಿದ್ಯಲ್ಲಾ ಎನ್ನುತ್ತಿರುವ ನೆಟ್ಟಿಗರು!
ಸದ್ಯ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ಶೈನ್ ಶೆಟ್ಟಿ ಹಾಗೂ ಕಿಶನ್ ಬಿಳಗಲಿ ಅವರುಗಳ ಸ್ಟೇಜ್ ಪರ್ಪಾರ್ಮೆನ್ಸ್ ತುಣುಕನ್ನು ನೋಡಬಹುದು. ಕಿಶನ್ ಅವರನ್ನು ಎತ್ತಿ ಮುದ್ದಾಡಿ ನೆಲಕ್ಕೆ ತಾಗಿಸಿ ಮತ್ತೆ ಎತ್ತುವ ಶೈನ್ ಶೆಟ್ಟಿ ಆಟ-ಹುಡುಗಾಟವನ್ನು ಪ್ರೋಮೋ ನೋಡಿದ ಹಲವರು ಕಣ್ತುಂಬಿಕೊಂಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ನವೆಂಬರ್ 26ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ 'ಜಾಕ್ ಪಾಟ್ (Jackpot)ಗೇಮ್ ಶೋ ಪ್ರಸಾರವಾಗಲಿದೆ. ಈ ಶೋವನ್ನು ಹೋಸ್ಟ್ ಮಾಡುತ್ತಿರುವವರು ಜನಪ್ರಿಯ ನಿರೂಪಕಿ ಅನುಪಮಾ ಗೌಡ. ಈಗಾಗಲೇ ಗ್ರಾಂಡ್ ಓಪನಿಂಗ್ ಫಂಕ್ಷನ್ ನಡೆದಿದ್ದು ಆ ಸಂಚಿಕೆ ಭಾನುವಾರ ಟೆಲೆಕಾಸ್ಟ್ ಆಗಲಿದ್ದು, ಈ ಎಪಿಸೋಡ್ ಪ್ರೊಮೋ ಸ್ಟಾರ್ ಸುವರ್ಣ ಚಾನೆಲ್‌ನ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಈಗಾಗಲೇ ಬಹಳಷ್ಟು ಶೇರ್ ಆಗಿರುವ ಈ ಪ್ರೊಮೋ, ಹಲವರು ತೀವ್ರ ಕುತೂಹಲದಿಂದ ಸಂಚಿಕೆಗಾಗಿ ಕಾಯುವಂತೆ ಮಾಡಿದೆ.
ಸದ್ಯ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ಶೈನ್ ಶೆಟ್ಟಿ ಹಾಗೂ ಕಿಶನ್ ಬಿಳಗಲಿ ಅವರುಗಳ ಸ್ಟೇಜ್ ಪರ್ಪಾರ್ಮೆನ್ಸ್ ತುಣುಕನ್ನು ನೋಡಬಹುದು. ಕಿಶನ್ ಅವರನ್ನು ಎತ್ತಿ ಮುದ್ದಾಡಿ ನೆಲಕ್ಕೆ ತಾಗಿಸಿ ಮತ್ತೆ ಎತ್ತುವ ಶೈನ್ ಶೆಟ್ಟಿ ಆಟ-ಹುಡುಗಾಟವನ್ನು ಪ್ರೋಮೋ ನೋಡಿದ ಹಲವರು ಕಣ್ತುಂಬಿಕೊಂಡಿದ್ದಾರೆ. ಕೆಲವರು ಈ ಬಗ್ಗೆ ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. 'ಅದ್ಯಾಕೆ ಕಿಶನ್ ಎಲ್ಲಾ ಟೈಮ್ ನಗುತ್ತಾರೆ ಚೈಲ್ಡಿಶ್ ಥರ' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಇನ್ನೊಬ್ಬರು 'ಸೆಕ್ಸಿ ಬಾಯ್' ಎಂದು ಬರೆದಿದ್ದಾರೆ.
ಅನುಪಮಾ ಗೌಡ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳೇ (celebrities)ಇರುತ್ತಾರೆ. ಈ ಶೋದಲ್ಲಿ 50 ಲಕ್ಷ ಬಹುಮಾನ ಕೂಡ ಇರುತ್ತದೆ. ಇಡೀ ಶೋದಲ್ಲಿ ಸಾಕಷ್ಟು ವಿಶೇಷ ಗೇಮ್ಸ್ ಇರುತ್ತವೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಈ ಮನರಂಜನಾ ಶೋ (Suvarna Jackpot) ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರಂತೂ ತುಂಬಾ ಖುಷಿಯಾಗಿದ್ದಾರೆ. ಯಾಕಂದ್ರೆ ಬಿಗ್ ಬಾಸ್ 7ರ ಸ್ಪರ್ಧಿಗಳು ಮತ್ತೆ ಈ ಕಾರ್ಯಕ್ರಮದ ಮೂಲಕ ಒಂದಾಗಿದ್ದಾರೆ.
ಪ್ರತಾಪ್ ಕಂಟ್ರೋಲ್ ವಿರುದ್ಧ ತೊಡೆ ತಟ್ಟಿದ ಸ್ನೇಹಿತ್, ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ಇನ್ನೆಷ್ಟು ದಿನ?
ಹಲವು ವರ್ಷಗಳ ಬಳಿಕ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಅವರನ್ನು ಜೊತೆಯಾಗಿ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಶೈನಿಕಾ ಬಿಗ್ ಬಾಸ್ 7ರ (Bigg Boss season 7) ಮೋಸ್ಟ್ ಫೆವರಿಟ್ ಜೋಡಿ. ಈ ಇಬ್ಬರ ಜೋಡಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ. ಸುವರ್ಣ 'ಜಾಕ್ಪಾಟ್' ಪ್ರೋಮೊದಲ್ಲಿ ಸ್ಪರ್ಧಿಗಳ ಮಸ್ತಿ, ಶೈನ್ ದೀಪಿಕಾ ಜೋಡಿ, ಕಿಶನ್ ಬಿಳಗಲಿ ಹಾಗೂ ಶೈನ್ ಶೆಟ್ಟಿ ಮಸ್ತ್ ಡ್ಯಾನ್ಸ್ ಜೊತೆಗೆ ಸ್ಯಾಂಡಲ್ ವುಡ್ ನ ಫೇವರೆಟ್ ಕಪಲ್ಸ್ ಕೃಷ್ಣ ಮಿಲನಾ ಜೋಡಿಯ ಮಸ್ತಿ ಎಲ್ಲವೂ ಸಖತ್ ಮನೋರಂಜನೆ ನೀಡುವಂತಿದೆ.
ಸೂಪರ್ ಸ್ಟಾರ್ ಶ್ರೀದೇವಿಗೆ ಅಮೆರಿಕಾದಲ್ಲಿ ಅನ್ಯಾಯ; ಭಾರೀ ಪರಿಹಾರ ಕೊಡಿಸಿದ್ದ ಅಧ್ಯಕ್ಷ ಬಿಲ್ ಕ್ಲಿಂಟನ್
ಜಾಕ್‌ಪಾಟ್ ಏಮ್ ಶೋದಲ್ಲಿ ಬಿಗ್ ಬಾಸ್ ಸೆಲೆಬ್ರಿಟಿಗಳು ಭಾಗಿ ಆಗುತ್ತಿದ್ದಾರೆ. ಸೆಲೆಬ್ರಿಟಿಗಳು ಎರಡು ತಂಡದಲ್ಲಿ ಆಡ್ತಿದ್ದಾರೆ. ವಿಶೇಷವಾಗಿ ಇಲ್ಲಿ ಸೆಲೆಬ್ರಿಟಿಗಳ ನೆನಪಿನ ಶಕ್ತಿಯ ಪರೀಕ್ಷೆ ಕೂಡ ನಡೆಯುತ್ತೆ ಅಂತ ಚಾನೆಲ್ ತಿಳಿಸಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 50 ಲಕ್ಷ ಬೆಲೆ ಬಾಳುವ ಫ್ರಿಡ್ಜ್, ಟಿವಿ, ವಾಷಿಂಗ್ ಮಷಿನ್, ಲ್ಯಾಪ್‌ಟಾಪ್, ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನ ಗೆಲ್ಲುವ ಅವಕಾಶ ಸೆಲೆಬ್ರಿಟಿಗಳಿಗೆ ದೊರೆಯುತ್ತಿದೆ. ಅಂದಹಾಗೆ, ಈ ಗೇಮ್ ಶೋ ಇದೇ ಭಾನುವಾರದಿಂದ (26 ನವೆಂಬರ್ 2023) ಸಂಜೆ 7.00 ಗಂಟೆಗೆ ಪ್ರಸಾರವಾಗಲಿದೆ.