ಶಂಕರ್‌ನಾಗ್ 'ಮಾಲ್ಗುಡಿ ಡೇಸ್‌'ನ್ನು ಯಾರು ಮರೆಯೋಕೆ ಸಾಧ್ಯ ಹೇಳಿ. ಅದರಲ್ಲಿ ಸ್ವಾಮಿ ಎನ್ನುವ ಪುಟ್ಟ ಹುಡುಗನನ್ನು ಮರೆಯೋಕೆ ಸಾಧ್ಯವೇ ಇಲ್ಲ.  ಅದ್ಭುತವಾದ ಅಭಿನಯದ ಮೂಲಕ ಮಾಲ್ಗುಡಿ ಡೇಸ್ ಉದ್ದಕ್ಕೂ ಗಮನ ಸೆಳೆಯುವ ಸ್ವಾಮಿ ಅಲಿಯಾಸ್ ಮಾಸ್ಟರ್‌ ಮಂಜುನಾಥ್ 29 ವರ್ಷಗಳಿಂದ ಚಿತ್ರರಂಗದಿಂದ ಕಾಣೆಯಾಗಿದ್ದರು. ಇದೀಗ ಬಹುಜನರ ಕೋರಿಕೆ ಮೇಲೆ ಜೀ ಕನ್ನಡದ 'ಜೀನ್ಸ್' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಕೊನೆಗೂ ಬಯಲಾಯ್ತು ಅಮೀರ್‌ - ಪ್ರೀತಿ 'Secret Wedding'; ಈಗೇಕೆ ಬಯಲಾಯಿತು ಸತ್ಯ?

ಇದೇ ಶನಿವಾರ ಅಂದರೆ ಮಾರ್ಚ್ 28 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಶೋನಲ್ಲಿ ಮಾಸ್ಟರ್ ಆನಂದ್ ಹಾಗೂ ಮಾಸ್ಟರ್ ಮಂಜುನಾಥ್ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರ ಕಾಮಿಡಿಯನ್ನೂ ಎಂಜಾಯ್ ಮಾಡಬಹುದಾಗಿದೆ. 

'ಜೀನ್ಸ್‌'ನಲ್ಲಿ ಕಳೆದ 29 ಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದಕ್ಕೆ ಮಂಜುನಾಥ್ ಕಾರಣಗಳನ್ನು ನೀಡಿ, ಶಂಕರ್‌ನಾಗ್ ಜೊತೆಗಿನ ಒಡನಾಟ, ಮಾಲ್ಗುಡಿ ಡೇಸ್‌ನ ನೆನಪುಗಳನ್ನು ಬಿಚ್ಚಿಡಲಿದ್ದಾರೆ. ಶಂಕರ್‌ನಾಗ್ ದಿಢೀರನೇ ಸಾವನ್ನಪ್ಪಿದಾಗ ನಾನು ವಿದೇಶದಲ್ಲಿದ್ದೆ. ಆಗ ಈಗಿನ ರೀತಿ ಮೇಲ್, ಮೊಬೈಲ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಸಾವಿನ ಸುದ್ದಿ ಗೊತ್ತಾಗಲಿಲ್ಲ. ಬಂದ ಮೇಲೆ ತಿಳಿದು ಬಹಳ ಬೇಸರವಾಯಿತು ಎಂದು ಭಾವುಕರಾದರು. ಜೊತೆಗೆ ಮಗ ಹಾಗೂ ಪತ್ನಿಯನ್ನು ವೀಕ್ಷಕರಿಗೆ ಪರಿಚಯಿಸಲಿದ್ದಾರೆ. ಪತ್ನಿಗೆ ಪ್ರೇಮ ನಿವೇದನೆಯನ್ನೂ ಮಾಡಲಿದ್ದಾರೆ. 

 

ಚಿತ್ರರಂಗದ 3 ಸಾವಿರ ಕಾರ್ಮಿಕರ ನೆರವಿಗೆ ಧಾವಿಸಿದ ನಿಖಿಲ್

ಮಂಜುನಾಥ್ ಹಾಗೂ ಆನಂದ್ ಇಬ್ಬರೂ ಒಟ್ಟಿಗೆ ಸೇರಿದರೆ ಅಲ್ಲಿ ಮಮನರಂಜನೆಗೇನೂ ಬರಲಿಲ್ಲ. ಇಬ್ಬರೂ ಒಂದಷ್ಟು ತಮಾಷೆ, ಕಾಮಿಡಿ, ಪಂಚಿಂಗ್ ಡೈಲಾಗ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಯಾವಾಗಲೂ ಸಂಜೆ 6.30 ಕ್ಕೆ ಪ್ರಸಾರವಾಗುವ ಜೀನ್ಸ್ ಇಂದು ರಾತ್ರಿ 9 ಕ್ಕೆ ಪ್ರಸಾರವಾಗಲಿದೆ.