ಕನ್ನಡ ಟಾಪ್‌ ಟಿಆರ್‌ಪಿ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾ ರಾಮ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ನಿಜ ಜೀವನದಲ್ಲಿಯೂ ಕಮಿಟೆಡ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಂಗೇಜ್ ಆಗಿರುವ ಫೋಟೋ ಹಂಚಿಕೊಂಡಿದ್ದಾರೆ.

ಬೆಂಗಳೂರು (ಜೂ.05): ಕನ್ನಡದ ಅತಿಹೆಚ್ಚು ಟಿಆರ್‌ಪಿ ಹೊಂದಿರುವ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾರಾಮ ಸೀರಿಯಲ್ ನಟಿ ಪ್ರಿಯಾ ಪಾತ್ರಧಾರಿ (ಮೇಘನಾ ಶಂಕರಪ್ಪ) ಅವರು ನಿಜ ಜೀವನದಲ್ಲಿಯೂ ಕಮಿಟೆಡ್ ಆಗಿದ್ದಾರೆ. ಧಾರಾವಾಹಿಯಲ್ಲಿ ಸೀತಾ ರಾಮ ಮದುವೆಗೂ ಮುನ್ನ ಅಶೋಕ್ ಹಾಗೂ ಪ್ರಿಯಾ ಮದುವೆ ಆಗಿತ್ತು. ಆದರೆ, ಸ್ಟಿಲ್ ಬ್ಯಾಚುಲರ್ ಹುಡುಗಿಗೆ ಮನಸೋತ ಅಭಿಮಾನಿಗಳು ಸಾಕಷ್ಟಿದ್ದರು. ಆದರೆ, ಈಗ ನಟಿ ಮೇಘನಾ ಶಂಕರಪ್ಪ ತನ್ನ ಬಾಯ್‌ಫ್ರೆಂಡ್ ಬರ್ತಡೇ ವಿಶ್ ಮಾಡಿದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಹೌದು, ಸೀತಾರಾಮ ಸೀರಿಯಲ್‌ನಲ್ಲಿ ನಾಯಕ ಪಾತ್ರಧಾರಿಗಳಾದ ಸೀತಾ ಹಾಗೂ ರಾಮ ಪಾತ್ರಗಳನ್ನು ಹೊರತು ಪಡಿಸಿದರೆ ಮತ್ತೆ ಮುನ್ನೆಲೆಗೆ ಕಾಣಿಸಿಕೊಳ್ಳುವ ಪಾತ್ರಗಳಲ್ಲಿ ಸಿಹಿ, ಪ್ರಿಯಾ ಮತ್ತು ಅಶೋಕ್ ಪಾತ್ರಗಳಾಗಿವೆ. ಅದರಲ್ಲಿ ಸೀತಾಳ ಸ್ನೇಹಿತೆಯಾಗಿರುವ ಪ್ರಿಯಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಮದುವೆಗೂ ಮುನ್ನ ಸೀತಾಳ ಸ್ನೇಹಿತೆಯಾಗಿ ಜವಾಬ್ದಾರಿ ಇಲ್ಲದ ಹುಡುಗಿ ಎಂದು ತೋರಿಸಲಾಗಿದ್ದರೂ, ಮದುವೆಯ ನಂತರ ಪ್ರಿಯಾಳಿಗೆ ಜವಾಬ್ದಾರಿಯುತ ಪಾತ್ರಗಳನ್ನು ಕೊಡಲಾಗಿದೆ. ಹೀಗಾಗಿ, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾಳೆ.

ಮಾಲಾ ಟಮ್​ ಟಮ್​ ಎಂದ ಸೀತಾರಾಮ ಪ್ರಿಯಾ: ನಿಮ್​ ನೋಡಿ ಎದೆ ಡಬ್​ ಡಬ್​ ಆಯ್ತು ಎಂದ ಫ್ಯಾನ್ಸ್​

ಸೀತಾರಾಮ ಸೀರಿಯಲ್‌ನ ಹುಡುಗಿ ಮೇಘನಾ ಸೌಂದರ್ಯಕ್ಕೆ ಮನಸೋತ ಹಲವು ಯುವಕರು ಕೂಡ ನಾವೂ ಒಂದು ಕೈ ಟ್ರೈ ಮಾಡೋಣ ಎಂದುಕೊಂಡವರ ಸಂಖ್ಯೆ ಹೆಚ್ಚಾಗಿರುತ್ತದೆ. ಸಿಂಗಲ್ ಮೇಘನಾ ಅವರಿಗೆ ಮಿಂಗಲ್ ಆಗುವಂತೆ ಕಾಮೆಂಟ್‌ಗಳು ಬಂದಿದ್ದಕ್ಕೇನೂ ಕಡಿಮೆಯಿಲ್ಲ. ಆದರೆ, ಈಗ ಸ್ವತಃ ಮೇಘನಾ ತಾವು ಕಮಿಟೆಡ್ ಎನ್ನುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾಳೆ. ಇಂದು ತನ್ನ ಬಾಯ್‌ಫ್ರೆಂಡ್ ಹುಡುಗ ಜನ್ಮದಿನದ ಪ್ರಯುಕ್ತ ಇಬ್ಬರೂ ಒಂದೇ ತರಹದ ಉಂಗುರ ಧರಿಸಿ ಕೈಮೇಲೆ ಕೈ ಇಟ್ಟು ಫೋಟೋ ತೆಗೆದುಕೊಂದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ವಿಶ್ ಮಾಡಿದ್ದಾರೆ. ಇದರಿಂದ ಮೇಘನಾ ಕಮಿಟೆಡ್ ಎಂಬುದು ಈಗ ಶೇ.100 ಸಾಬೀತಾಗಿದೆ.

View post on Instagram

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಮೇಘನಾ ಶಂಕರಪ್ಪ ಹಲವು ರೀಲ್ಸ್ ಮತ್ತು ಫೋಟೋ ಶೂಟ್‌ ಮಾಡಿಸಿ ಅದರ ಸುಂದರ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗೆ ಅಪ್ಲೋಡ್ ಮಾಡಿಕೊಳ್ಳುತ್ತಿದ್ದರು. ಆದರೆ, ಇನ್ನು ಧಾರಾವಾಹಿಯಲ್ಲಿ ಅಶೋಕ್ ಜೊತೆ ಮದುವೆಯಾದ ನಂತರ ನೀವಿಬ್ಬರೂ ರಿಯಲ್ ಲೈಫ್‌ನಲ್ಲೂ ಮದುವೆ ಮಾಡಿಕೊಳ್ತೀರಾ ಎಂದು ಪ್ರಶ್ನೆ ಮಾಡಿದವರ ಸಂಖ್ಯೆ ಹೆಚ್ಚಾಗಿತ್ತು. ಧಾರಾವಾಹಿಯಲ್ಲಿ ಪ್ರಿಯಾ ಮತ್ತು ಅಶೋಕ್ ಮದುವೆಯಾಗಿದ್ದಾರೆ. ಆದರೆ ಅಸಲಿಗೆ ಅಶೋಕ್​ ಅವರು ಪ್ರಿಯಾಗಿಂತ ತುಂಬಾ ದೊಡ್ಡವರು ಹಾಗೂ ಅವರಿಗೆ ಈಗಾಗಲೇ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ.

ಸೀತಾರಾಮ ಪ್ರಿಯಾ-ಅಶೋಕ್​ ಭರ್ಜರಿ ಸ್ಟೆಪ್​ ಹಾಕಿದ್ರೆ ಅಭಿಮಾನಿಗಳು ಹೀಗೆ ಹೇಳೋದಾ?

ಪ್ರಿಯಾ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ‘ಸೀತಾ ರಾಮ’ ಧಾರಾವಾಹಿಯಲ್ಲಿ ಚಿನಕುರಳಿ, ಪಟ ಪಟ ಅಂತ ಮಾತಾಡುವ ಪ್ರಿಯಾ ಪಾತ್ರದಲ್ಲಿ ನಟಿ ಮೇಘನಾ ಶಂಕರಪ್ಪ ಅವರು ಗಮನ ಸೆಳೆಯುತ್ತಿದ್ದಾರೆ. ಮೇಘನಾ, ಪ್ರಿಯಾ ಪಾತ್ರಕ್ಕೂ ಅಷ್ಟು ವ್ಯತ್ಯಾಸ ಏನಿಲ್ಲ. ಕನ್ನಡ ಕಿರುತೆರೆಯಲ್ಲಿ ‘ಸೀತಾರಾಮ’ ಧಾರಾವಾಹಿ ಸದ್ಯ ಟಾಪ್ 5 ಸ್ಥಾನ ಪಡೆದಿದೆ. ಈ ಧಾರಾವಾಹಿಯಲ್ಲಿ ಸೀತಾ-ಪ್ರಿಯಾ ಸ್ನೇಹಿತರಾಗಿರುತ್ತಾರೆ. ತೆರೆ ಹಿಂದೆ ಕೂಡ ಮೇಘನಾ, ವೈಷ್ಣವಿ ಗೌಡ ಅವರು ಸ್ನೇಹಿತರು. ಇವರಿಬ್ಬರು ಯುಟ್ಯೂಬ್ ಚಾನೆಲ್ ಹೊಂದಿದ್ದು, ವಿಡಿಯೋಗೋಸ್ಕರ ಒಟ್ಟಿಗೆ ಸುತ್ತಾಟ ಮಾಡುತ್ತಾರೆ, ಶಾಪಿಂಗ್ ಮಾಡುತ್ತಾರೆ.