ಸೀತಾರಾಮ: ರಾಮನ ಮಾಜಿ ಗೆಳತಿ ಸಿಹಿ ಚಿಕ್ಕಮ್ಮ; ಹಾಗಾದ್ರೆ ಸೀತಮ್ಮಗೂ ಚಾಂದಿನಿಗೆ ಏನು ಸಂಬಂಧ!
ಸೀತಾರಾಮ ಧಾರಾವಾಹಿಯಲ್ಲಿ ಸಿಹಿಯ ಜನ್ಮರಹಸ್ಯ ಬಯಲಾಗುವ ಸಮಯ ಸನ್ನಿಹಿತವಾಗಿದೆ. ರಾಮನ ಮಾಜಿ ಪ್ರೇಯಸಿ ಚಾಂದಿನಿ ಸಿಹಿಗೆ ಚಿಕ್ಕಮ್ಮ ಎಂಬ ಸತ್ಯ ಬೆಳಕಿಗೆ ಬರಲಿದೆ.
ಬೆಂಗಳೂರು (ಸೆ.04): ಸೀತಾರಾಮ ಧಾರಾವಾಹಿ ಪ್ರಸ್ತುತ ಸಿಹಿಯ ಜನ್ಮರಹಸ್ಯದ ಸುತ್ತಲೂ ಗಿರಕಿ ಹೊಡೆಯುತ್ತಿದೆ. ಆದರೆ, ಸೀತಾ, ರಾಮ, ಚಾಂದಿನಿ, ಭಾರ್ಗವಿ, ರುದ್ರಪ್ರತಾಪ್, ಡಾ. ಮೇಘಶ್ಯಾಮ, ಡಾ. ಅನಂತ ಲಕ್ಷ್ಮೀ ಎಲ್ಲರೂ ಸಿಹಿಯ ಜನ್ಮರಹಸ್ಯ ತಿಳಿಯಲು ಹಾಗೂ ಮುಚ್ಚಿಡಲು ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಸೀತಾಳನ್ನು ಮದುವೆಯಾಗಿ ಸಿಹಿಗೆ ಅಪ್ಪನಾಗಿರುವ ರಾಮನ ಮಾಜಿ ಪ್ರೇಯಸಿ ಸಿಹಿಗೆ ಚಿಕ್ಕಮ್ಮ ಆಗಿದ್ದಾಳೆ ಎಂಬ ಸತ್ಯಾಂಶವೂ ಹೊರಬೀಳಲಿದೆ.]
ಸೀತಾರಾಮ ಧಾರಾವಾಹಿಯಲ್ಲಿ ಸೀತಾ, ರಾಮನಿಗೆ ಮದುವೆ ಮಾಡಿಸಿದ ರಾಮನ ಚಿಕ್ಕಮ್ಮ ಭಾರ್ಗವಿ ದೇಸಾಯಿ ಅವರಿಬ್ಬರ ಸಂತೋಷ ಕಿತ್ತುಕೊಳ್ಳಲು ಕುಮ್ಮಕ್ಕು ಮಾಡಿ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಿದ್ದಳು. ಅಲ್ಲಿ ಕೆಲವೇ ದಿನಗಳು ಇದ್ದ ಸಿಹಿ ಅಪ್ಪ ಅಮ್ಮನನ್ನು ಬಿಟ್ಟಿರಲಾಗದೇ ವಾಪಸ್ ಬಂದಿದ್ದಾಳೆ. ಇನ್ನು ರಾಮನ ಹೆಸರಲ್ಲಿರುವ ಆಸ್ತಿಯನ್ನು ಹೊಡೆದುಕೊಳ್ಳಲು ಭಾರಿ ಸಂಚು ರೂಪಿಸಿದ್ದ, ಭಾರ್ಗವಿಗೆ ಅದೂ ಕೈಕೊಟ್ಟಿದೆ. ಇನ್ನು ರಾಮನನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಮಾನಸಿಕವಾಗಿ ಹಿಂಸೆ ಕೊಡಲು ಛೂ.. ಬಿಟ್ಟಿದ್ದ ಚಾಂದಿನಿ ಈಗ ರಾಮನ ಪ್ರೀತಿ ಮತ್ತು ದೇಸಾಯಿ ಕುಟುಂಬ ಆಸ್ತಿ ಸಿಗದೇ ಬಾಲ ಸುಟ್ಟ ಬೆಕ್ಕಿನಂತಾಗಿದ್ದಾಳೆ. ಈಗ ಪುನಃ ಸೀತಾಳನ್ನು ಮನೆಯಿಂದ ಓಡಿಸಿ ತಾನು ಮನೆ ಸೇರಿಕೊಳ್ಳಬೇಕೆಂಬ ಉದ್ದೇಶದಿಂದ ಸೀತಾಳ ಮಗಳು ಸಿಹಿಯ ಜನ್ಮರಹಸ್ಯ ತಿಳಿದುಕೊಳ್ಳಲು ಡಾ.ಅನಂತಲಕ್ಷ್ಮಿ ಬೆಂಬಿದ್ದಿದ್ದಾಳೆ. ಆದರೆ, ಇದೀಗ ಅವಳೇ ಸಿಹಿಯ ಚಿಕ್ಕಮ್ಮ ಎನ್ನುವ ಸತ್ಯ ಹೊರಬೀಳುವ ಕಾಲ ಸನ್ನಿಹಿತವಾಗಿದೆ.
ಸಿಹಿಯ ಜನ್ಮರಹಸ್ಯ ಬಯಲು: ಡಾ.ಮೇಘಶ್ಯಾಮನೇ ಸಿಹಿಯ ಅಪ್ಪ, ಆದ್ರೆ ಸೀತಾಳ ಮೊದಲ ಗಂಡನಲ್ಲ!
ಹೌದು, ಇದೇನಿದು ಒಂದಕ್ಕೊಂದು ಸಂಬಂಧವೇ ಅರ್ಥವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳುವುದು ಬೇಡ. ಸಿಹಿ ಬೋರ್ಡಿಂಗ್ ಸ್ಕೂಲ್‌ನಲ್ಲಿ ಇದ್ದಾಗ ಯಾವುದೇ ಮಕ್ಕಳೊಂದಿಗೂ ಬೆಸೆಯದ ಬಾಂಧವ್ಯವನ್ನು ಹೊಂದಿದ್ದ ಹಾಗೂ ವಿಶೇಷ ಪ್ರೀತಿ ತೋರಿಸುತ್ತಿದ್ದ ಡಾ. ಮೇಘಶ್ಯಾಮನೇ ಸಿಹಿಯ ತಂದೆ ಆಗಿದ್ದಾನೆ. ಡಾ. ಮೇಘಶ್ಯಾಮನ ಹೆಂಡತಿಯ ತಂಗಿಯೇ ರಾಮನ ಮಾಜಿ ಪ್ರೇಯಸಿ ಚಾಂದಿನಿ ಆಗಿದ್ದಾಳೆ. ಅಂದರೆ ಸಿಹಿಯ ಜನ್ಮರಹಸ್ಯವೂ ಕೂಡ ಹೋಗಿಬಂದು ರಾಮನ ಸುತ್ತಲೂ ಗಿರಕಿ ಹೊಡೆಯುತ್ತಿದೆ. ಇಲ್ಲಿ ಡಾ.ಮೇಘಶ್ಯಾಮನೇ ಸಿಹಿಯ ಅಪ್ಪನಾಗಿದ್ದಾನೆ. ಆದರೆ, ಮೇಘಶ್ಯಾಮನ ಹೆಂಡತಿ ಮಗುವಿಗೆ ಜನ್ಮನೀಡಲು ನಿರಾಕರಿಸಿದ್ದರಿಂದ ಇಬ್ಬರೂ ಸೇರಿ ಬಾಡಿಗೆ ತಾಯಿ ಮೂಲಕ ಸೀತಾಳಿಂದ ಮಗು ಪಡೆಯಲು ಮುಂದಾಗುತ್ತಾರೆ. ಆದರೆ, ಹುಟ್ಟಿನಿಂದಲೇ ಸಕ್ಕರೆ ಕಾಯಿಲೆ ಇದ್ದ ಮಗುವನ್ನು ಪಡೆಯಲು ನಿರಾಕರಿಸಿದ್ದರಿಂದ ಈ ಮಗುವನ್ನು ಸೀತಾಳೇ ಸಾಕುತ್ತಾಳೆ. ಸಿಹಿಗೆ ತಾಯಿ ಇದ್ದರೂ ತಂದೆ ಯಾರೆಂಬುದೇ ಗೊತ್ತಿರಲಿಲ್ಲ. ಇದೀಗ ಸಿಹಿಗೆ ಡಾ.ಮೇಘಶ್ಯಾಮನೇ ತಂದೆ ಎಂಬ ಸತ್ಯಾಂಶ ಬಯಲಿಗೆಳೆಯಲು ನಿರ್ದೇಶಕರು ಹಲವು ಸುಳಿವನ್ಉ ವೀಕ್ಷಕರ ಮುಂದಿಟ್ಟಿದ್ದಾರೆ.
ನನಗೆ ತಮ್ಮ ಬೇಕು ಎಂದ ಸಿಹಿ, ಕುತಂತ್ರ ಮಾಡಿದ ಭಾರ್ಗವಿ: ಸೀತಾ ರಾಮನೊಂದಿಗೆ ಮದುವೆ ಮಾಡಿಕೊಳ್ಳುವ ಮುನ್ನವೇ ನಾನು ಸಿಹಿ ಬಿಟ್ಟು ಇನ್ನೊಂದು ಮಗು ಮಾಡಿಕೊಳ್ಳುವುದಿಲ್ಲ ಎಂಬ ಸತ್ಯವನ್ನು ಭಾರ್ಗವಿ ಮುಂದೆ ಹೇಳಿದ್ದರೂ ಅದನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದರು. ಇದೀಗ ಮದುವೆಯಾದ ನಂತರ ರಾಮನ ತಾತ ಮಗು ಬೇಕೆಂಬ ಹಠವನ್ನು ಮುಂದಿಟ್ಟ ಕೂಡಲೇ ಸೀತಾ ಮಗು ಮಾಡಿಕೊಳ್ಳಲು ಒಪ್ಪಿಕೊಳ್ಳದೇ ಮನೆ ಬಿಟ್ಟು ಹೋಗುತ್ತಾಳೆ ಎಂಬ ನಿರೀಕ್ಷೆಯೂ ಸುಳ್ಳಾಗಿತ್ತು. ಇದರ ನಂತರ ಸಿಹಿಯನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸಿದ ಭಾರ್ಗವಿ ದೇಸಾಯಿ ಕುತಂತ್ರ ಹೆಚ್ಚು ದಿನ ಫಲಿಸಲಿಲ್ಲ. ಕೇವಲ ಒಂದು ತಿಂಗಳ ಅಂತರದಲ್ಲಿ ಸಿಹಿ ಬೋರ್ಡಿಂಗ್ ಶಾಲೆ ಬಿಟ್ಟು ಮನೆಗೆ ಬಂದಿದ್ದಾಳೆ. ಇನ್ನು ಮನೆಗೆ ಬಂದವಳೇ ನನಗೆ ತಮ್ಮ ಬೇಕು ಎಂದು ಅಪ್ಪ-ಅಮ್ಮನ ಮುಂದೆ ಬೇಡಿಕೆ ಇಟ್ಟಿದ್ದಾಳೆ. ಈ ಮಾತನ್ನು ಸೀತಾ ಭಾರ್ಗವಿ ದೇಸಾಯಿ ಮುಂದೆ ಹೇಳಿದ್ದು, ಆಕೆ ಶಾಕ್ ಆಗಿದ್ದಾಳೆ. ಇದೀಗ ಸಿಹಿ ಜನ್ಮರಹಸ್ಯ ಬಿಚ್ಚಿಡಲು ಸ್ವತಃ ಡಾ. ಅನಂತಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿದ್ದಾಳೆ.
ಸೀತಾರಾಮ: ದೇಸಾಯಿ ಮನೆಗೆ ಬಂದ ಡಾ. ಅನಂತಲಕ್ಷ್ಮಿ ಸಿಹಿ ಜನ್ಮ ರಹಸ್ಯ ಬಿಚ್ಚಿಡುತ್ತಾರಾ?
ದೇಸಾಯಿ ಮನೆಗೆ ಬಂದ ಡಾ. ಅನಂತಲಕ್ಷ್ಮಿ: ಸೀತಾ ಮತ್ತು ರಾಮನನ್ನು ದೂರ ಮಾಡಲು ಹಾಗೂ ಸಿಹಿಯನ್ನು ಮನೆಯಿಂದ ಹೊರಗೆ ಹಾಕಿ ಸೀತಾ ರಾಮನ ನೆಮ್ಮದಿ ಹಾಳು ಮಾಡಲು ಭಾರ್ಗವಿ ದೇಸಾಯಿ ಪ್ರಯೋಗಿಸಿದ ಎಲ್ಲ ಕುತಂತ್ರಗಳು ವಿಫಲವಾದ ಕೂಡಲೇ ಇದೀಗ ಡಾ.ಅನಂತಲಕ್ಷ್ಮಿಯನ್ನು ತಾನೇ ಮನೆಗೆ ಕರೆಸಿ ಸಿಹಿ ಜನ್ಮರಹಸ್ಯವನ್ನು ಮನೆಯವರ ಮುಂದೆ ಹೇಳಿಸಲು ಮುಂದಾಗಿದ್ದಾಳೆ. ಹೀಗಾಗಿ, ಸೂರ್ಯಪ್ರಕಾಶ ದೇಸಾಯಿ ಜನ್ಮದಿನಕ್ಕೆ ವಿಶ್ ಮಾಡಲು ಡಾ. ಅನಂತಲಕ್ಷ್ಮಿ ಬಂದಿದ್ದು, ಸೀತಾ ಮತ್ತು ಸಿಹಿಯನ್ನು ನೋಡಿದ ಡಾ.ಅನಂತಲಕ್ಷ್ಮಿ ಶಾಕ್ ಆಗಿದ್ದಾರೆ. ಜೊತೆಗೆ, ಸಿಹಿಯನ್ನು ಮಾತನಾಡಿಸಿದ್ದು, ಸತ್ಯ ಹೇಳುತ್ತಾರಾ ಎಂಬ ಕುತೂಹಲ ಮೂಡಿಸಿದೆ. ಒಂದು ವೇಳೆ ಸತ್ಯ ಹೇಳಿದರೂ ಚಾಂದಿನಿ ಅವರ ಚಿಕ್ಕಮ್ಮ ಎಂಬ ಸತ್ಯವೂ ರಿವೀಲ್ ಆಗುತ್ತದೆ. ಆಗ ಸೀತಾ ಮತ್ತು ರಾಮನನ್ನು ನೆಮ್ಮದಿಯಾಗಿ ಜೀವನ ಮಾಡಲು ಬಿಟ್ಟು ದೂರ ಹೋಗುತ್ತಾಳಾ ಎಂಬುದನ್ನು ಕಾದು ನೊಡಬೇಕಿದೆ.