ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಸೀತಾರಾಮ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರ ಮುಖದ ಕಾಂತಿ ನೋಡಿ ಅನೇಕರಿಗೆ ಇದರ ಹಿಂದಿನ ಗುಟ್ಟು ಏನು ಎಂದು ಡೌಟ್ ಇರಬಹುದು.
‘ಸೀತಾರಾಮ’ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರ ಚರ್ಮದ ಕಾಂತಿಯ ಬಗ್ಗೆ ಅನೇಕರು ಹೊಗಳೋದುಂಟು. ವೈಷ್ಣವಿ ಗೌಡ ಅವರು ನ್ಯಾಚುರಲ್ ಆಗಿ ಇಷ್ಟು ಚೆನ್ನಾಗಿ ಕಾಣಲು ಒಂದು ರಹಸ್ಯ ಕೂಡ ಇದೆ.
ನಿತ್ಯವೂ ಗಮನ ಕೊಡಬೇಕು!
ಕೊರಿಯನ್ ಮಾದರಿಯಲ್ಲಿ ವೈಷ್ಣವಿ ಗೌಡ ಅವರ ಮುಖ ಗ್ಲಾಸ್ ಮಾದರಿ ಇದೆ ಅಂತ ಹೇಳಲಾಗುತ್ತದೆ. ಈ ರೀತಿ ಚರ್ಮ ಹೊಂದಲು ನಿತ್ಯವೂ ಒಂದಷ್ಟು ಸಮಯ ಕೊಡಬೇಕಾಗುತ್ತದೆ. ಈ ಬಗ್ಗೆ ವೈಷ್ಣವಿ ಗೌಡ ಅವರು ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ.
ಹೆಚ್ಚು ನೀರು ಕುಡಿಯುತ್ತಾರೆ!
ವೈಷ್ಣವಿ ಗೌಡ ಅವರು ನಿತ್ಯ ಮಿನಿಮಮ್ ಮೂರು ಲೀಟರ್‌ಗೂ ಜಾಸ್ತಿ ನೀರು ಕುಡಿಯುತ್ತಾರೆ. ನೀರು ಕುಡಿಯುವದರಿಂದ ತೂಕ ಇಳಿಕೆಯೂ ಆಗುತ್ತದೆ, ದೇಹದಲ್ಲಿನ ಉಷ್ಣತೆ ಕಡಿಮೆ ಆಗುತ್ತದೆ, ದೇಹದಲ್ಲಿನ ಕಲ್ಮಶ ಕೂಡ ಹೋಗುವುದು. ಹೀಗಾಗಿ ನೀರು ಕುಡಿಯಲೇಬೇಕು. ಇಷ್ಟೆಲ್ಲ ಪ್ರಯೋಜನಗಳು ಇರೋದರಿಂದ ಸಹಜವಾಗಿ ಚರ್ಮ ಚೆನ್ನಾಗಿ ಇರುವುದು.
ಸಮತೋಲನ ಆಹಾರ
ವೈಷ್ಣವಿ ಗೌಡ ಅವರು ಹೆಚ್ಚು ತರಕಾರಿ, ಹಣ್ಣುಗಳನ್ನು ಸೇವಿಸುತ್ತಾರೆ. ಅಷ್ಟೇ ಅಲ್ಲದೆ ದೇಹಕ್ಕೆ ಬೇಕಾದ ಪೌಷ್ಠಿಕಾಂಶ ಇರುವ ಆಹಾರಗಳನ್ನು ಅವರು ಸೇವನೆ ಮಾಡುತ್ತಾರೆ. ಸೀರಿಯಲ್ ಶೂಟಿಂಗ್ ಇದ್ದಾಗಲೂ ಕೂಡ ಅವರು ಮನೆಯ ಊಟವನ್ನೇ ಜಾಸ್ತಿ ಮಾಡುತ್ತಾರೆ. ಬೆಳಗ್ಗೆಯಿಂದ ರಾತ್ರಿವರೆಗೆ ಬೇಕಾಗುವಷ್ಟು ಊಟ, ತಿಂಡಿ ಎಲ್ಲವನ್ನು ಅವರು ತೆಗೆದುಕೊಂಡು ಹೋಗುತ್ತಾರೆ. ಮನೆ ಊಟ ಮಾಡಿದಷ್ಟು ಆರೋಗ್ಯ ಚೆನ್ನಾಗಿರುತ್ತದೆ, ಈ ಮೂಲಕ ತೂಕ ಇಳಿಕೆ ಆಗುತ್ತದೆ, ಚರ್ಮದ ಕಾಂತಿ ಹೆಚ್ಚುತ್ತದೆ.
ರಾಮನ್ ತೇಡಿಯ ಸೀತೈ ಆಗಿ ತಮಿಳಿಗೆ ಡಬ್ ಆಗ್ತಿದೆ ‘ಸೀತಾ -ರಾಮ’ ಧಾರಾವಾಹಿ
ಹೆಚ್ಚು ಮೇಕಪ್ ಹಾಕೋದಿಲ್ಲ
ವೈಷ್ಣವಿ ಗೌಡ ಅವರು ಆದಷ್ಟು ಕಡಿಮೆ ಮೇಕಪ್ ಮಾಡುತ್ತಾರೆ. ರಾತ್ರಿ ನಿದ್ದೆ ಮಾಡುವಾಗ ಅವರು ಮೇಕಪ್ ತೆಗೆಯೋಕೆ ಮರೆಯೋದಿಲ್ಲ. ಇನ್ನು ಲಿಪ್ ಬಾಮ್ ಬಳಕೆ ಮಾಡ್ತಾರೆ, ನಿತ್ಯವೂ ಮಾಯಿಶ್ಚರೈಸ್ ಮಾಡೋದು ಮರೆಯೋದಿಲ್ಲ.
ಯೋಗ
ಈ ಹಿಂದೆ ವೈಷ್ಣವಿ ಗೌಡ ಅವರು ದಪ್ಪಗಿದ್ದರಂತೆ. ಸಾಕಷ್ಟು ಬಾಡಿಶೇಮಿಂಗ್ ಆದಬಳಿಕ ಅವರು ಯೋಗ, ಡಯೆಟ್ ಮಾಡಿ ಸಣ್ಣಗಾಗಿದ್ದಾರೆ.
ಧ್ಯಾನ
ವೈಷ್ಣವಿ ಗೌಡ ಅವರು ಧ್ಯಾನ ಮಾಡುತ್ತಾರೆ. ಈ ಧ್ಯಾನದಿಂದ ಒಂದಿಷ್ಟು ಸಮಾಧಾನ, ಏಕಾಗ್ರತೆ, ತಾಳ್ಮೆ ಕೂಡ ಸಿಗುವುದು, ಒಟ್ಟಾರೆಯಾಗಿ ಮಾನಸಿಕ ಆರೋಗ್ಯ ಚೆನ್ನಾಗಿರುವುದು.
ವೈಷ್ಣವಿ ಗೌಡ ಅವರು ಈ ಹಿಂದೆ ‘ದೇವಿ’, ‘ಪುನರ್‌ವಿವಾಹ’, ‘ಅಗ್ನಿಸಾಕ್ಷಿ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ವೈಷ್ಣವಿ ಗೌಡ ಅವರು ಮದುವೆ ಆಗಲಿದ್ದಾರಂತೆ.
