'ಸೀತಾರಾಮ' ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಹಾಗೂ ಜಯಂತ್ ಮದುವೆಯ ಫೋಟೋಗಳಿವು!
‘ಸೀತಾರಾಮʼ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರು ಜಯಂತ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಂಗಾರದ ಬಣ್ಣದ ಸೀರೆ..!
ಮೇಘನಾ ಶಂಕರಪ್ಪ ಹಾಗೂ ಜಯಂತ್ ಅವರು ಬಂಗಾರದ ಬಣ್ಣದ ಉಡುಗೆಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಘನಾ ಅವರು ಬಂಗಾರದ ಬಣ್ಣದ ಸೀರೆಯಲ್ಲಿ ಮಿರ ಮಿರ ಮಿಂಚುತ್ತಿದ್ದರು. ಈ ಮದುವೆಯಲ್ಲಿ ಸಿಂಧು ರಾವ್, ಜ್ಯೋತಿ ಕಿರಣ್, ಪದ್ಮಕಲಾ, ಕಲಾಗಂಗೋತ್ರಿ ಮಂಜು, ಕಾವ್ಯ ಶೈವ, ಯಶಸ್ವಿನಿ ಕೆ ಸ್ವಾಮಿ ಮುಂತಾದ ಕಲಾವಿದರು ಆಗಮಿಸಿದ್ದರು. ʼಸೀತಾರಾಮʼ ಧಾರಾವಾಹಿ ತಂಡ ಈ ಮದುವೆಯಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿತ್ತು. ಇನ್ನು ಮೇಘನಾ ಶಂಕರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಮದುವೆಯ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಚಿತ್ರರಂಗದ ಗಣ್ಯರು ಭಾಗಿ!
ಫೆಬ್ರವರಿ 8, 9ರಂದು ಮೇಘನಾ ಅವರ ಮದುವೆ ನಡೆದಿದೆ. ಅದಕ್ಕೂ ಮುನ್ನ ಅವರ ಮನೆಯಲ್ಲಿ ಹಳದಿ ಶಾಸ್ತ್ರ ನೆರವೇರಿತ್ತು. ಇನ್ನು ಮದುವೆಗೂ ಮುನ್ನ ʼಸೀತಾರಾಮʼ ಧಾರಾವಾಹಿ ಕಲಾವಿದರಾದ ಸಿಂಧು ರಾವ್, ಪೂಜಾ ಲೋಕೇಶ್, ವೈಷ್ಣವಿ ಗೌಡ ಅವರು ಸೇರಿಕೊಂಡು ಮೇಘನಾ ಶಂಕರಪ್ಪಗೆ ಬ್ಯಾಚುಲರ್ ಪಾರ್ಟಿ ಕೊಟ್ಟಿದ್ದರು. ಇನ್ನು ʼಕೆಂಡಸಂಪಿಗೆʼ ಧಾರಾವಾಹಿ ಖ್ಯಾತಿಯ ಕಾವ್ಯಶೈವ ಅವರ ಜೊತೆಯೂ ಮೇಘನಾ ಟೂರ್ ಮಾಡಿದ್ದರು. ಇನ್ನು ಮೇಘನಾ ಅವರು ಜಯಂತ್ ಜೊತೆಗೆ ಬೇರೆ ಬೇರೆ ಕಾಸ್ಟ್ಯೂಮ್‌ನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋಗಳನ್ನು, ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ವಯಸ್ಸಿನ ಅಂತರ ಎಷ್ಟು?
ಮೇಘನಾಗೆ ಈಗ 28 ವರ್ಷ ( 1996ರ ಅಕ್ಟೋಬರ್ 14 ). ಮೇಘನಾ ಪತಿ ಜಯಂತ್‌ಗೂ 28 ವರ್ಷ ( 1996 ಜೂನ್ 5 ). ಇವರಿಬ್ಬರ ನಡುವೆ 4 ತಿಂಗಳ ಅಂತರ ಮಾತ್ರ ಇದೆ. ಇವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಮೇಘನಾ ಕೂಡ ಇಂಜಿನಿಯರಿಂಗ್ ಓದಿದ್ದು, ಸದ್ಯ ನಟನೆಯಲ್ಲಿ ಆಕ್ಟಿವ್ ಆಗಿದ್ದಾರೆ. ಇನ್ನು ಜಯಂತ್ ಅವರು ಇಂಜಿನಿಯರ್ ಆಗಿಯೇ ಕೆಲಸ ಮಾಡುತ್ತಿದ್ದಾರೆ. ಜಯಂತ್ ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿದೆ.

ಕನ್ನಡ ಧಾರಾವಾಹಿಗಳಲ್ಲಿ ನಟನೆ!
ಸದ್ಯ ಮೇಘನಾ ಶಂಕರಪ್ಪ ಅವರು 'ಸೀತಾರಾಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಅವರು ಕಲರ್ಸ್ ಕನ್ನಡ ವಾಹಿನಿಯ 'ನಮ್ಮನೆ ಯುವರಾಣಿ', ʼಕಿನ್ನರಿʼ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಧಾರಾವಾಹಿಯಲ್ಲಿ ನಟಿಸಿದ್ದರು. ಇನ್ನು ಖಾಸಗಿ ವಾಹಿನಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಮೇಘನಾ ಸ್ಪರ್ಧಿಯಾಗಿದ್ದಾರೆ. ಮೇಘನಾ ಶಂಕರಪ್ಪ ಅವರು ಅನೇಕ ರೀತಿಯ ಡ್ಯಾನ್ಸ್ ಫಾರ್ಮ್‌ಗಳನ್ನು ಮಾಡಿದ್ದರು. ಮೇಘನಾ ಅವರ ಡ್ಯಾನ್ಸ್ ಬಗ್ಗೆ ಶಿವರಾಜ್‌ಕುಮಾರ್, ವಿಜಯ್ ರಾಘವೇಂದ್ರ, ರಕ್ಷಿತಾ ಪ್ರೇಮ್, ಚಿನ್ನಿ ಪ್ರಕಾಶ್ ಮುಂತಾದವರು ಮೆಚ್ಚುಗೆ ಸೂಚಿಸಿದ್ದರು.

ʼಸೀತಾರಾಮʼ ಧಾರಾವಾಹಿ ಪಾತ್ರ!
ಕನ್ನಡ ಕಿರುತೆರೆಯಲ್ಲಿ ಇಲ್ಲಿಯವರೆಗೆ ನಟಿಸಿದ ಧಾರಾವಾಹಿಗಳಲ್ಲಿ ಮೇಘನಾ ಶಂಕರಪ್ಪ ಅವರು ಪಾಸಿಟಿವ್, ನೆಗೆಟಿವ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ʼಸೀತಾರಾಮʼ ಧಾರಾವಾಹಿಯಲ್ಲಿ ಮೇಘನಾಗೂ ಹಾಗೂ ಪ್ರಿಯಾ ಪಾತ್ರಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ. ಪ್ರಿಯಾ ಪಾತ್ರದ ರೀತಿ ಮೇಘನಾ ಶಂಕರಪ್ಪ ಕೂಡ ಬಬ್ಲಿ ಹುಡುಗಿ.
