ಸೀತಾರಾಮ ಸೀರಿಯಲ್​ ಸೀತಾ ವೈಷ್ಣವಿ ಗೌಡ ಅವರು ಬುಗುರಿಯಾಡಿದ್ದು ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ನೆಟ್ಟಿಗರು ಏನೆಂದ್ರು ನೋಡಿ... 

ಸದ್ಯ ಸೀತಾರಾಮ ಸೀರಿಯಲ್​ನಲ್ಲಿ ಕೊನೆಗೂ ವೀಕ್ಷಕರು ಕಾಯುತ್ತಿದ್ದ ಕ್ಷಣಗಳು ಬಂದೇ ಬಿಟ್ಟಿವೆ. ಸೀತೆ ಮತ್ತು ರಾಮ ಮದುವೆಯಾಗುವ ಕಾಲ ಕೂಡಿ ಬಂದಿದ್ದು, ಅದು ಯಾವುದೇ ವಿಘ್ನ ಇಲ್ಲದೆಯೇ ನಡೆಯಲಿ ಎಂದು ಪ್ರೇಕ್ಷಕರು ಹಾರೈಸುತ್ತಿದ್ದಾರೆ. ಸೀರಿಯಲ್​ ಏನೇ ಇದ್ದರೂ ಸೀರಿಯಲ್​ ತಾರೆಯರು ಬಿಜಿ ಷೆಡ್ಯೂಲ್​ ಮಧ್ಯೆಯೂ ಸೋಷಿಯಲ್​ ಮೀಡಿಯಾಗಳಲ್ಲಿ ಆ್ಯಕ್ಟೀವ್​ ಇರುವುದು ಇದೆ. ರೀಲ್ಸ್​ ಮಾಡುತ್ತಾ ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ. ಅದರಲ್ಲಿ ಒಬ್ಬರು ಸೀತಾರಾಮ ಸೀರಿಯಲ್​ ಸೀತಾ. ಇವರ ನಿಜವಾದ ಹೆಸರು ವೈಷ್ಣವಿ ಗೌಡ. ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿ ಎಂದೇ ಫೇಮಸ್​ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್​ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. ಆಗಾಗ್ಗೆ ಸಕತ್​ ಪೋಸ್​ ಕೊಟ್ಟು ಫೋಟೋ, ವಿಡಿಯೋ ಶೂಟ್​ಗಳನ್ನು ಮಾಡಿಸಿಕೊಳ್ಳುತ್ತಾರೆ.

ಇದೀಗ ಷಾರ್ಟ್​ ರೀಲ್ಸ್​ನಲ್ಲಿ ವೈಷ್ಣವಿ ಅವರು ಬುಗುರಿ ಬಿಟ್ಟಿದ್ದಾರೆ. ವಿಶೇಷ ಎಂದರೆ ಅದು ಗರಗರನೆ ತಿರುಗಿದೆ. ಈಗಿನ ನಗರದ ಮಕ್ಕಳಿಗೆ ಬುಗುರಿ ಆಟವೆಲ್ಲಾ ದೂರವೆಂದೇ ಹೇಳಬಹುದು. ಪಟ್ಟಣ, ಹಳ್ಳಿಗಳಲ್ಲಿ ಇಂಥ ಆಟಗಳನ್ನು ಇಂದಿಗೂ ಮಕ್ಕಳು ಆಡುವುದು ಇದೆ. ಆದರೆ ನಗರ ಪ್ರದೇಶಗಳಲ್ಲಿ ಇವುಗಳನ್ನು ಆಡುವ ಭಾಗ್ಯದಿಂದ ಹಲವು ಮಕ್ಕಳು ವಂಚಿತರಾಗಿರುವುದಂತೂ ದಿಟ. ಅದರಲ್ಲಿಯೂ ಇದೀಗ ಚಿಕ್ಕಪುಟ್ಟ ಮಕ್ಕಳ ಕೈಯಲ್ಲೂ ಮೊಬೈಲ್​ ಬಂದಿರುವಾಗ ಇಂಥ ಆಟಗಳನ್ನು ಮೊಬೈಲ್​ನಲ್ಲಿ ನೋಡಿ ಖುಷಿಪಡುವುದಷ್ಟೇ ಅವರ ಕೆಲಸವಾಗಿದೆ. ಇದೀಗ ನಟಿ ವೈಷ್ಣವಿ ಅವರು ಬುಗುರಿ ಆಡುವ ಮೂಲಕ ಬಾಲ್ಯದ ನೆನಪು ಮಾಡಿಕೊಂಡಿದ್ದಾರೆ. 

ಹಾರಿಸಿ ಹಾರಿಸಿ ತೋರಿಸ್ತಿರೋದೇನು? ಸೀತಾರಾಮ ಸೀತಾಳ ರೀಲ್ಸ್​ಗೆ ಸಕತ್​ ಕಮೆಂಟ್​!

ಇವರು ಯಾವುದೇ ರೀಲ್ಸ್​ ಮಾಡಿದರೂ ಅದಕ್ಕೆ ಸಕತ್​ ಕಮೆಂಟ್ಸ್​ ಬರುತ್ತಲೇ ಇರುತ್ತವೆ. ಕೆಲವರು ತರ್ಲೆ ಕಮೆಂಟ್​ ಹಾಕಿದರೆ ಮತ್ತೆ ಕೆಲವರು ಸೀತಾ ಪಾತ್ರದ ಬಗ್ಗೆ ಒಂದಿಷ್ಟು ನಟಿಗೆ ಟಿಪ್ಸ್​ ಕೊಡುವುದು ನಡೆದಿರುತ್ತದೆ. ಮತ್ತೆ ಕೆಲವರು ಅವರ ಆ್ಯಕ್ಟಿಂಗ್​ ಕುರಿತು ಮಾತನಾಡುತ್ತಾರೆ. ಇದೀಗ ನಟಿ ಬುಗುರಿಯಾಡಿದ್ದನ್ನು ನೋಡಿ ಕೂಡ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗಿದೆ. ನೀನ್ ಬಿಡಮ್ಮಾ ತಾಯೇ ರಾಮ್​ನನ್ನೇ ತಿರುಗಿಸಿದವಳು, ಇನ್ನು ಬುಗುರಿ ತಿರುಗಿಸದೇ ಇರುತ್ತಿಯಾ ಎಂದು ತರ್ಲೆ ನೆಟ್ಟಿಗರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ನೀವು ನಮ್ಮ ಹಳೆಯ ದಿನಗಳನ್ನು ನೆನಪಿಸಿದಿರಿ ಎಂದು ಹೇಳಿದರೆ, ಅರೆ ವ್ಹಾವ್​ ತುಂಬಾ ಚೆನ್ನಾಗಿ ಬುಗುರಿ ತಿರುಗಿಸಿದ್ದೀರಿ, ನಿಜಕ್ಕೂ ನೀವೇ ತಿರುಗಿಸಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. 

ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ, ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್‌ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ.

ತಿಳಿಯದೇ ತಪ್ಪಾಗೋಯ್ತು, ಪ್ಲೀಸ್​ ಕ್ಷಮಿಸಿ ಬಿಡಿ... ಅಭಿಮಾನಿಗಳ ಕ್ಷಮೆ ಕೋರಿದ ಸೀತಾರಾಮ ನಟಿ ವೈಷ್ಣವಿ ಗೌಡ


ಕಣ್ಣ ಮುಚ್ಚೆ , ಬುಗುರಿ, ಲಗೋರಿ 😍 such fun times 🤍 revisiting childhood! 😬#vaisshnavi #shorts