ಮೇಘನಾ ಶಂಕರಪ್ಪ (ಸೀತಾರಾಮ ಧಾರಾವಾಹಿಯ ಪ್ರಿಯಾ) ಇತ್ತೀಚೆಗೆ ಸಾಫ್ಟ್‌ವೇರ್ ಎಂಜಿನಿಯರ್ ಜಯಂತ್ ಅವರನ್ನು ವಿವಾಹವಾದರು. ಅರೇಂಜ್ಡ್ ಮ್ಯಾರೇಜ್ ಆದ ಇವರು, ನಂದಿಬೆಟ್ಟ ಮತ್ತು ಕಬಿನಿಗೆ ಹನಿಮೂನ್ ಹೋಗಿದ್ದರು. ಕ್ಯಾಮೆರಾಮನ್ ಪತಿಯ ಮೇಲೆ ತಮಾಷೆಯಾಗಿ ಮುನಿಸಿಕೊಂಡ ಮೇಘನಾ, ಪತಿಯಿಂದ ಕಾಂಪ್ಲಿಮೆಂಟ್ಸ್ ಬಾರದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಈ ಕ್ಯೂಟ್ ಜಗಳ ಅಭಿಮಾನಿಗಳಿಗೆ ಮುದ ತಂದಿದೆ.

ಸೀತಾರಾಮದ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಅವರು ಇದೇ 9ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸಾಫ್ಟ್​ವೇರ್​ ಎಂಜಿನಿಯರ್​ ಜಯಂತ್​ ಅವರ ಕೈಹಿಡಿದಿದ್ದಾರೆ ಮೇಘನಾ. ಇದಾಗಲೇ ನಟಿ, ಪ್ರೀ ವೆಡ್ಡಿಂಗ್​ ಶೂಟ್​ ಮಾಡಿಸಿದ್ದು ಅಂದು ನಡೆದ ಘಟನೆಗಳನ್ನು ವಿವರಿಸಿದ್ದರು. ಬಳಿಕ ನಟಿ ಫೈನಲ್​ ವಿಡಿಯೋ ಶೇರ್​ ಮಾಡಿದ್ದರು. ಈ ವಿವಾಹ ಪೂರ್ವ ವಿಡಿಯೋ ಶೂಟ್​ ಯಾವ ಸಿನಿಮಾಗಿಂತಲೂ ಕಮ್ಮಿಯಿರಲಿಲ್ಲ. ಈಗಿನ ಕಾಲದಲ್ಲಿ ಅರೇಂಜ್ಡ್​ ಮ್ಯಾರೇಜ್​ ಎನ್ನುವುದು ಅಪರೂಪ. ಅದರಲ್ಲಿಯೂ ಸೆಲೆಬ್ರಿಟಿ ಎಂದರೆ ಲವ್​ ಮ್ಯಾರೇಜೇ ಇರುತ್ತದೆ. ಆದರೆ ಮೇಘನಾ ಅವರದ್ದು ಅರೇಂಜ್ಡ್​ ಮ್ಯಾರೇಜ್​. ಕೆಲ ದಿನಗಳ ಹಿಂದೆ ವಿಡಿಯೋ ಶೇರ್​ ಮಾಡಿದ್ದ ನಟಿ, ನೆಲಮಂಗಲದ ಬಳಿಯ ನಿರ್ಜನ ಪ್ರದೇಶದಲ್ಲಿ ಪ್ರೀ ವೆಡ್ಡಿಂಗ್​ ವಿಡಿಯೋ ಶೂಟ್​ ಮಾಡಿಸಿರುವುದಾಗಿ ಹೇಳಿದ್ದರು. ಇದೀಗ ಹನಿಮೂನ್​ ಮೂಡ್​ನಲ್ಲಿದ್ದಾರೆ ಸೀತಾರಾಮ ಪ್ರಿಯಾ.

ಆದರೆ ನಂದಿಬೆಟ್ಟ, ಕಬಿನಿಗೆ ಹನಿಮೂನ್​ಗೆ ಹೋಗಿರುವ ಮೇಘನಾ, ಅಲ್ಲಿಯೇ ಪತಿಯ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ಪತಿ ಜಯಂತ್ ಅವರ ಅಕ್ಕ-ಭಾವ ತಮಗೆ ನಂದಿ ಹೀಲ್ಸ್​ ಟ್ರಿಪ್​ ಅರೇಂಜ್​ ಮಾಡಿರುವುದಾಗಿ ಹೇಳಿರುವ ಮೇಘನಾಗೆ ಕ್ಯಾಮೆರಾಮೆನ್​ ಪತಿ ಜಯಂತ್​ ಅವರೇ. ಆದರೆ ಮೊದಲಿಗೆ ಪತಿಯ ಮೇಲೆ ಮುನಿಸು ಮಾಡಿಕೊಳ್ಳಲು ಕಾರಣ, ಅವರು ಕ್ಯಾಮೆರಾ ಅನ್ನು ಸರಿ ಹಿಡಿಯಲಿಲ್ಲ ಎನ್ನುವ ಕಾರಣಕ್ಕೆ! ತಿಂಡಿ ತಿನ್ನುತ್ತಾ ಎಲ್ಲೆಲ್ಲೋ ಕ್ಯಾಮೆರಾ ಹೈಲೈಟ್​ ಮಾಡ್ತೀರಾ ಎಂದು ಹುಸಿ ಮುನಿಸು ತೋರಿರುವ ಮೇಘನಾ, ಸರಿಯಾಗಿ ಕ್ಯಾಮೆರಾ ಹಿಡಿಯುವಂತೆ ತಾಕೀತು ಮಾಡಿದರು.

ಇಬ್ರು ಮಕ್ಕಳಿಗೆ ಅಮ್ಮ ಸ್ವೀಟ್​ ಮಾಡಿಕೊಟ್ರೆ ಹೆಸ್ರೇನು? ಮೇಘನಾ ತರ್ಲೆ ಪ್ರಶ್ನೆಗೆ ತಲೆಕೆಡಿಸಿಕೊಂಡ ತೀರ್ಪುಗಾರರು!

ಬಳಿಕ, ತಾವು ಹೇಗೆ ಕಾಣಿಸುತ್ತಿದ್ದೇವೆ ಎಂದು ಕೇಳಿದಾಗ, ಪತಿ ಜಯಂತ್​ ಚೆನ್ನಾಗಿ ಕಾಣಿಸುತ್ತಿದ್ದಿಯಾ ಎಂದರು. ಅವರು ಹೇಳಿದ್ದು ನೋಡಿ ಮೇಘನಾ ಪುನಃ ಸಿಟ್ಟು ಮಾಡಿಕೊಂಡರು. ಮುಖದಲ್ಲಿ ನಗುವೇ ಇಲ್ವಲ್ಲಾ, ಮದ್ವೆಯಾದ ಮೂರೇ ದಿನದಲ್ಲಿ ಹೀಗೆ ಆದ್ರಾ ಕೇಳಿದಾಗ, ಜಯಂತ್​ ಅವ್ರು ಎಲ್ಲಾ ಗಂಡುಮಕ್ಕಳ ಹಣೆಬರಹವೇ ಇಷ್ಟು ಎಂದು ತಮಾಷೆ ಮಾಡಿದರು. ಆಗ ಮೇಘನಾ, ಇವರು ನನ್ನನ್ನು ಒಂದು ಚೂರೂ ಕಾಂಪ್ಲಿಮೆಂಟ್​ ಮಾಡಲ್ಲ. ನನ್ನ ಮುಖನೇ ನೋಡಲ್ಲ. ಮದ್ವೆ ದಿನವೂ ಮುಖವನ್ನು ನೋಡಿಲ್ಲ. ಪಕ್ಕದಲ್ಲಿ ಊಟ ಮಾಡಿಕೊಂಡು ಹೋದರಷ್ಟೇ. ಎಂಥ ಗಂಡನಪ್ಪ ಇವರು ಎಂದು ಮತ್ತೆ ಮುನಿಸುಕೊಂಡರು. ಇದುವರೆಗೂ ನನ್ನ ರೂಪದ ಬಗ್ಗೆ ಕಾಂಪ್ಲಿಮೆಂಟ್​ ಕೊಟ್ಟಿಲ್ಲ ಎಂದು ತುಸು ಬೇಸರವನ್ನೂ ಹೊರಕ್ಕೆ ಹಾಕಿದರು. ಈ ಕ್ಯೂಟ್​ ಕೋಪಕ್ಕೆ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಹೀಗೆ ಪರಸ್ಪರ ಕಾಲೆಳೆದುಕೊಳ್ಳುತ್ತಾ ಲೈಫ್​ ಎಂಜಾಯ್​ ಮಾಡಿ ಎಂದು ಹಾರೈಸುತ್ತಿದ್ದಾರೆ. 

ಇನ್ನು, ಮೇಘನಾ ಶಂಕರಪ್ಪ ಅವರ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ಸೀತಾರಾಮ ಸಿರಿಯಲ್‌ ರಾತ್ರಿ ಶೂಟಿಂಗ್‌ ಮಾಡುವಾಗ ಏನೆಲ್ಲಾ ಆಯ್ತು? ನಟಿ ಮೇಘನಾ ರಿವೀಲ್‌

YouTube video player