Asianet Suvarna News Asianet Suvarna News

ಕಾಳಿಯಾಗಿ, ಮಹಾಶಕ್ತಿಯಾಗಿ ಕಾಣಿಸಿಕೊಂಡ ಸತ್ಯ ಸೀರಿಯಲ್​ ಕೀರ್ತನಾ: ದೈವ ಸ್ವರೂಪಿಸಿ ಎಂದ ಫ್ಯಾನ್ಸ್​

ಸತ್ಯ ಸೀರಿಯಲ್​ ವಿಲನ್​ ಕೀರ್ತನಾ ಅವರು ದಸರಾ ನಿಮಿತ್ತ ಕಾಳಿ ಹಾಗೂ ಮಹಾಶಕ್ತಿ ಸ್ವರೂಪಿಣಿಯಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ನಿಜವಾಗಿಯೂ ದೇವತೆ ಎನ್ನುತ್ತಿದ್ದಾರೆ.
 

Satya Serial Villain Keertana  as Kali and Mahashakti  on the occasion of Dussehra suc
Author
First Published Oct 25, 2023, 1:15 PM IST

ಈಗ ತಾನೇ ದಸರಾ ಹಬ್ಬದ ಸಡಗರ ಮುಗಿದು ದೀಪಾವಳಿಯ ಆಗಮನಕ್ಕೆ ಜನರು ಕಾಯುತ್ತಿದ್ದಾರೆ. ದಸರಾ ಸಂದರ್ಭದಲ್ಲಿ ಸಿನಿ ತಾರೆಯರಾದಿಯಾಗಿ ಸಂಭ್ರಮದ ಸುರಿಮಳೆಯೇ ಆಗಿದೆ. ಎಷ್ಟೋ ಮಕ್ಕಳು, ಮಹಿಳೆಯರು ಶಿವಶಕ್ತಿ ಸ್ವರೂಪಿಣಿಯಾಗಿ ಈ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದಾರೆ. ದಸರಾ ಹಬ್ಬವನ್ನು ಸೆಲೆಬ್ರಿಟಿಗಳು ವಿಶೇಷ ರೂಪದಲ್ಲಿ ಸೆಲೆಬ್ರೇಟ್​ ಮಾಡಿದ್ದು, ಅವುಗಳನ್ನು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅವರದಲ್ಲಿ ಒಬ್ಬರು ಸತ್ಯ ಸೀರಿಯಲ್​ ವಿಲನ್​ ಕೀರ್ತನಾ ಅಲಿಯಾಸ್​ ಅನು ಜನಾರ್ದನ.  ಕೀರ್ತನಾ ಎಂದೇ ಫೇಮಸ್​ ಆಗಿರೋ ನಟಿ, ಅನು ಜನಾರ್ದನ (Anu Janardhana). ಇವರು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ದಿನನಿತ್ಯವೂ ಚಿಕ್ಕ ಚಿಕ್ಕ ರೀಲ್ಸ್​ ಮಾಡಿ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ.   

ಇದೀಗ ಕಾಳಿ ಸ್ವರೂಪಿಣಿಯಾಗಿ, ಶಿವಶಕ್ತಿ ಸ್ವರೂಪಿಣಿಯಾಗಿ ಮೇಕ್​ ಓಪರ್​ ಮಾಡಿಸಿಕೊಂಡು ಅದರ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಥೇಟ್​ ದೇವಿಯಂತೆಯೇ ಕಂಗೊಳಿಸುವ ಅನು ಅವರ ಮೇಕಪ್​ಗೆ ಫ್ಯಾನ್ಸ್​ ಮನಸೋತಿದ್ದಾರೆ. ವ್ಹಾವ್​ ಎನ್ನುತ್ತಿದ್ದಾರೆ. ನೀವು ಯಾವ ನಟನೆ ಮಾಡಿದರೂ ಅದು ಸೂಪರ್​ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

 
ಅಂದಹಾಗೆ, ಜೀ ಟಿ.ವಿಯಲ್ಲಿ ನಿತ್ಯ ಪ್ರಸಾರವಾಗ್ತಿರೋ ಸತ್ಯ (Sathya) ಧಾರಾವಾಹಿಯಲ್ಲಿ ಕೀರ್ತನಾ ವಿಲನ್​ ಪಾತ್ರಧಾರಿ.  ಗಂಡುಬೀರಿಯಂತಿದ್ದ ನಾಯಕಿ ಸತ್ಯ ಅನಿವಾರ್ಯವಾಗಿ ಮದುವೆಯಾಗಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹೊಂದಿಕೊಳ್ಳಲು ಹೆಣಗಾಡುವುದು, ಇವಳು ಹೊಂದಿಕೊಳ್ಳಲು ನೋಡಿದರೂ ಅತ್ತೆಗೆ ಇವಳನ್ನು ಕಂಡರೆ ಆಗಿರುವುದು, ಪತ್ನಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿರುವ ಗಂಡ ಕಾರ್ತೀಕ್​ಗೆ ಕೊನೆಗೂ ಪತ್ನಿ ಮೇಲೆ ಲವ್​ ಆಗುವುದು... ಹೀಗೆ ಒಂದು ಸಂಸಾರದ ಸುತ್ತಲೂ ಹೆಣೆದಿರುವ ಈ ಕಥೆಯಲ್ಲಿ ನಾಯಕಿಯಂತೆಯೇ ಎಲ್ಲರ ಗಮನ ಸೆಳೆಯುವುದು ವಿಲನ್​ ಪಾತ್ರಧಾರಿ ಕೀರ್ತನಾ.  ತಮ್ಮ ಅದ್ಭುತ ನಟನೆಯಿಂದ ಥೇಟ್​ ಮನೆಹಾಳಿಯಂತೆಯೇ ಕಾಣಿಸಿಕೊಳ್ಳುತ್ತಿದ್ದಾರೆ ಕೀರ್ತನಾ. ಮದುವೆಯಾದರೂ ತವರಿನಲ್ಲಿಯೇ ಇದ್ದು, ತಮ್ಮನ ಪತ್ನಿಯ (ನಾಯಕಿ ಸತ್ಯ) ಮೇಲೆ ಸದಾ ಕುತಂತ್ರ ಹೆಣೆಯುತ್ತಾ ಇರುವುದು ಈಕೆಯ ಕೆಲಸ.

 

 ಭಾರತನಾಟ್ಯ ಕಲಾವಿದೆಯೂ ಆಗಿರುವ ಅನು ಅವರಿಗೆ ಕಲೆಯಲ್ಲಿ ಮೊದಲಿನಿಂದಲೂ  ಆಸಕ್ತಿ.  ಶ್ರೀ ವಿಷ್ಣು, ಜೈ ಹನುಮಾನ್​ ಪೌರಾಣಿಕ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಬಳಿಕ 'ರಂಗನಾಯಕಿ' ಧಾರಾವಾಹಿಗೆ ಎಂಟ್ರಿ ಕೊಟ್ಟ ಅನು,  ಬ್ರಹ್ಮಗಂಟ, ಅಮ್ನೋರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಸತ್ಯ ಅವರಿಗೆ ಸಕತ್​ ಹೆಸರು ತಂದುಕೊಟ್ಟಿದೆ. ಸತ್ಯ ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಅನು ಬಳಕುವ ಬಳ್ಳಿಯಂತೆ ಇರುವುದನ್ನು ನೋಡಬಹುದು. ಆದರೆ ಅನು ಮೊದಲು ಹೀಗಿರಲಿಲ್ಲವಂತೆ. ನಟನಾ ಕ್ಷೇತ್ರಕ್ಕೆ ಬರುವ ಮೊದಲು ತಾವು ದಪ್ಪ ಆಗಿದ್ದು, ಆಮೇಲೆ ಸಕತ್​ ಡಯಟ್​ ಮಾಡಿ ಒಂದು ವರ್ಷಗಳ ಸತತ ಪರಿಶ್ರಮದ ನಂತರ ತೆಳ್ಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.
 

Follow Us:
Download App:
  • android
  • ios