ವಿನಯ್ ಗೌಡ ಕ್ಯಾಪ್ಟನ್; ತಕ್ಷಣವೇ ಜೈಲು ಸೇರಿದ ಹಳ್ಳಿ ಮನೆ ಯಜಮಾನಿ ಸಂಗೀತಾ ಶೃಂಗೇರಿ
ಆದರೆ ಸಂಗೀತಾ ಮಾತ್ರ, ಮೊದಲು ತಪ್ಪಾಗಿದ್ದು ನನ್ನಿಂದಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ‘ಇಡೀ ಮನೆ ನನ್ನ ಅಗೇನಸ್ಟ್ ಇರೋ ಹಾಗಿದೆ ಅನಿಸ್ತಿದೆ’ ಎಂದೂ ಹೇಳಿದ್ದಾರೆ. ಅಂತಿಮವಾಗಿ ಜೈಲಿನ ಉಡುಗೆ ತೊಟ್ಟುಕೊಂಡು ಸಂಗೀತಾ ಜೈಲಿನೊಳಗೆ ಇಳಿದಿದ್ದಾರೆ. ವಿನಯ್ ಜೈಲಿನ ಬಾಗಿಲಿಗೆ ಬೀಗ ಹಾಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಅಧ್ಯಾಯಗಳು ತೆರೆದುಕೊಳ್ಳುತ್ತವೆ. ಯಾರಿಗೆ ಯಾವಾಗ ಯಾಕೆ ಯಾವುದೋ ಪಟ್ಟ ಸಿಗುತ್ತದೆ ಎಂದು ಹೇಳೋದಕ್ಕೆ ಸಾಧ್ಯವಾಗುವುದಿಲ್ಲ. ವಿನಯ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಮರುಕ್ಷಣವೇ ಎದುರಾಳಿ ತಂಡದ ನಾಯಕಿ ಸಂಗೀತಾ ಶೃಂಗೇರಿ ಅವರಿಗೆ ಏನೋ ಕಾದಿದೆ ಎಂಬುದು ನಿಕ್ಕಿಯಾಗಿಹೋಗಿತ್ತು. ಅವರಿಗೆ ಒದಗಿಬಂದಿದ್ದು ಏನು ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಗಜ್ಜಾಹೀರಾಗಿದೆ.
ಈ ವಾರ ಕಳಪೆ ಪ್ರದರ್ಶನ ನೀಡಿದವರು ಯಾರು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗಳಿಗೆಯಲ್ಲಿ ರಕ್ಷಕ್, ತುಕಾಲಿ ಅವರು, ನಮ್ರತಾ, ಸ್ನೇಹಿತ್, ವಿನಯ್ ಎಲ್ಲರೂ ಸಂಗೀತಾ ಅವರ ಹೆಸರು ಹೇಳಿದ್ದಾರೆ. ಎಲ್ಲರ ಮಾತಿನಲ್ಲಿಯೂ ಸಂಗೀತಾ ವ್ಯಕ್ತಿತ್ವದ ಬಗ್ಗೆ, ಅವರು ಉಳಿದ ಸ್ಫರ್ಧಿಗಳಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎನ್ನುವುದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಸ್ನೇಹಿತ್ ಅವರಂತೂ, ‘ಇಡೀ ಮನೆಯ ವಾತಾವರಣವೇ ಹಾಳಾಗಿದೆ’ ಎಂದೂ ಹೇಳಿದ್ದಾರೆ.
ಸಲ್ಮಾನ್ ಖಾನ್ 'ಟೈಗರ್ 3' ದೀಪಾವಳಿಗೆ ಬಿಡುಗಡೆ; ಭಾರೀ ಹೈಪ್ ಆಗಲು ಕಾರಣವೇನು?
ಆದರೆ ಸಂಗೀತಾ ಮಾತ್ರ, ಮೊದಲು ತಪ್ಪಾಗಿದ್ದು ನನ್ನಿಂದಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ‘ಇಡೀ ಮನೆ ನನ್ನ ಅಗೇನಸ್ಟ್ ಇರೋ ಹಾಗಿದೆ ಅನಿಸ್ತಿದೆ’ ಎಂದೂ ಹೇಳಿದ್ದಾರೆ. ಅಂತಿಮವಾಗಿ ಜೈಲಿನ ಉಡುಗೆ ತೊಟ್ಟುಕೊಂಡು ಸಂಗೀತಾ ಜೈಲಿನೊಳಗೆ ಇಳಿದಿದ್ದಾರೆ. ವಿನಯ್ ಜೈಲಿನ ಬಾಗಿಲಿಗೆ ಬೀಗ ಹಾಕಿದ್ದಾರೆ. ಕಾರ್ತಿಕ್ ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದಾರೆ.
ಸಲ್ಮಾನ್ ಖಾನ್ 'ಟೈಗರ್ 3' ದೀಪಾವಳಿಗೆ ಬಿಡುಗಡೆ; ಭಾರೀ ಹೈಪ್ ಆಗಲು ಕಾರಣವೇನು?
ಕಾರ್ತಿಕ್ ಮೌನದ ಹಿಂದಿರುವ ಕೋಪ, ಸಂಗೀತಾ ನೋವಿನ ಪರಿಣಾಮ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.