ನಂಗೆ ಆ ಸಮಸ್ಯೆ ಇತ್ತು, ಅದಿದ್ರೆ ಮಕ್ಕಳಾಗಲ್ಲ ಅಂತಾನೂ ಗೊತ್ತಿತ್ತು: ಸಂಗೀತ ಶೃಂಗೇರಿ ಹೇಳಿದ ಆ ಸಮಸ್ಯೆ ಯಾವುದು?
ಸಂಗೀತ ಶೃಂಗೇರಿ ಬಿಗ್‌ಬಾಸ್ ಮನೆಯಲ್ಲಿ ಸಖತ್ತಾಗಿ ಆಟ ಆಡ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರ ಒಂದು ಮಾತು ಭಾರೀ ವೈರಲ್ ಆಗ್ತಿದೆ. ಸಂಗೀತಾಗಿರೋ ಆ ಗಂಭೀರ ಸಮಸ್ಯೆ ಯಾವುದು?
777 ಚಾರ್ಲಿ ಮೂಲಕ ಕನ್ನಡಿಗರಿಗೆ ಪರಿಚಿತಳಾದ ಲವಲವಿಕೆಯ ಹುಡುಗಿ ಸಂಗೀತಾ ಶೃಂಗೇರಿ. ಈ ಹುಡುಗಿಯನ್ನ ಮಾತನಾಡಿಸಿದವರಿಗೆ ಈಕೆ ಎಲ್ಲರಂತಲ್ಲ ಅನ್ನೋದು ಬಹಳ ಬೇಗ ಅರ್ಥ ಆಗುತ್ತೆ. ಗ್ಲಾಮರ್, ಬಬ್ಲಿನೆಸ್ ಅಂತೆಲ್ಲ ಬುದ್ದುತನದ ಹಿಂದೆ ಹೋಗದೇ ಬುದ್ಧಿವಂತಿಕೆಯಿಂದ ಯೋಚಿಸೋ ಹುಡುಗಿ ಈಕೆ. ಸೆನ್ಸಿಟಿವ್ ಆಗಿ ಮಾತಾಡ್ತಾರೆ. ಇತ್ತೀಚೆಗೆ ಈ ಹೆಣ್ಣುಮಗಳು ಸಿಕ್ಸ್‌ಪ್ಯಾಕ್ ಮಾಡಿರೋದು ಸಖತ್ ಸುದ್ದಿಯಾಗಿತ್ತು. ಆ ಹೊತ್ತಿಗೆ ಇವರ ಒಂದು ಮಾತೂ ವೈರಲ್ ಆಗಿತ್ತು. ನಾನು ಸಿಕ್ಸ್‌ಪ್ಯಾಕ್ ಮಾಡ್ತಿರೋದು ಪಿಸಿಓಡಿಯಿಂದ ಹೊರಬರೋದಕ್ಕೂ ಸಹಾಯಕವಾಯ್ತು ಅಂದಿದ್ರು. ಇದೀಗ ಅವರು ಪಿಸಿಓಡಿ ಬಗ್ಗೆ ಹೇಳಿರೋ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
'ನಮ್ಮ ಭಾರತೀಯ ಹೆಣ್ಣುಮಕ್ಕಳಿಗೆ ಅವರ ದೇಹದ ಬಗ್ಗೆಯೇ ಸರಿಯಾದ ಮಾಹಿತಿ ಇರಲ್ಲ. ಆ ಬಗೆಗಿನ ತಿಳಿವಳಿಕೆ ನೀಡದೇ ಅವರನ್ನು ಅಜ್ಞಾನಿಗಳನ್ನಾಗಿಯೇ ಉಳಿಸಲಾಗುತ್ತೆ. ಆ ಓಪನ್‌ನೆಸ್ ಇಲ್ಲದೇ ಹೆಣ್ಣುಮಕ್ಕಳು ತಮ್ಮ ಎಷ್ಟೋ ಸಮಸ್ಯೆ ಹೇಳಿಕೊಳ್ಳಲಾಗದೇ ಒದ್ದಾಡುತ್ತಾರೆ. ಆಮೇಲೆ ಅದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ನನಗೂ ಪೀರಿಯೆಡ್ಸ್ ಶುರುವಾದಾಗಿಂದ ಪಿಸಿಓಡಿ ಸಮಸ್ಯೆ ಇದೆ. ಆದರೆ ಈ ಬಗ್ಗೆ ತಿಳಿವಳಿಕೆ ಇರಲಿಲ್ಲ. ಇದು ನಮ್ಮ ಲೈಫ್‌ಸ್ಟೈಲಿಂದ, ಆಧುನಿಕ ಆಹಾರ ಕ್ರಮದಿಂದ ಬರೋ ಸಮಸ್ಯೆ. ಎಷ್ಟೊ ಮಂದಿ ಹುಡುಗಿಯರು ಇದನ್ನು ಫೇಸ್ ಮಾಡ್ತಿದ್ದಾರೆ. ಇದರಿಂದ ಹೊರಬರೋ ದಾರಿ ಗೊತ್ತಾಗದೇ ಒದ್ದಾಡುತ್ತಾರೆ.
ಸಂತೋಷ್ ಹೋದ್ರು, ತಾರಾ ಬಂದ್ರು: ಕುತೂಹಲ ಕೆರಳಿಸಿದ ಬಿಗ್‌ಬಾಸ್- ಸ್ಪರ್ಧಿಗಳ ಭರ್ಜರಿ ಡ್ಯಾನ್ಸ್
ಆರಂಭದಿಂದಲೂ ನನಗೆ ಪಿಸಿಓಡಿ ಸಮಸ್ಯೆ ಇತ್ತು. ಶುರುವಲ್ಲಿ ಈ ಪ್ರಾಬ್ಲಮ್ ಇರೋದೇ ಖುಷಿ ಅನಿಸ್ತಿತ್ತು. ಕಾಟ ಕೊಡೋ ಪೀರಿಯೆಡ್ಸ್ ಅಪರೂಪಕ್ಕೆ ಬರ್ತಿತ್ತು. ಮದುವೆ, ಮಕ್ಕಳ ಬಗ್ಗೆ ಎಲ್ಲ ಯಾವತ್ತೂ ತಲೆಕೆಡಿಸಿಕೊಂಡವಳಲ್ಲ. ಹಾಯಾಗಿದ್ದೆ. ನಮ್ಮ ಫಿಟ್‌ನೆಸ್ ಗುರುಗಳಿಗೂ ಅದನ್ನೇ ಹೇಳಿದ್ದೆ. ಆದರೆ ಅವರು ನನಗೆ ಒಬ್ಬ ನಟಿಯಾಗಿ ಪೀರಿಯೆಡ್ಸ್ ನಿಯಮಿತವಾಗಿ ಆರೋದು ಎಷ್ಟು ಮುಖ್ಯ ಅನ್ನೋದನ್ನು ಮನದಟ್ಟು ಮಾಡಿದರು. ಆ ಬಳಿಕ ಅವರು ಹೇಳಿದ ರೂಲ್ಸ್ ಫಾಲೋ ಮಾಡತೊಡಗಿದೆ. ಹೀಗಾಗಿ ಅದರಿಂದ ಹೊರಬರೋದು ಸಾಧ್ಯ ಆಯ್ತು'
ಹೀಗೆ ಸಂಗೀತಾ ಶೃಂಗೇರಿ ತಮ್ಮ ಸಮಸ್ಯೆಯನ್ನೂ ಹೇಳಿಕೊಂಡು ಅದರಿಂದ ಹೊರಬರುವ ಉಪಾಯಗಳನ್ನೂ ಸೂಚಿಸಿದ್ದಾರೆ. ನಿಯಮಿತ ವ್ಯಾಯಾಮದ ಮೂಲಕ, ಆಹಾರ ಪದ್ಧತಿಯನ್ನು ಕಟ್ಟು ನಿಟ್ಟಾಗಿ ಅನುಸರಿಸುವ ಮೂಲಕ ಹಾಗೂ ಸರಿಯಾದ ಚಿಕಿತ್ಸೆ ಪಡೆಯುವ ಮೂಲಕ ಹೆಣ್ಣುಮಕ್ಕಳು ಈ ಸಮಸ್ಯೆಯಿಂದ ಹೇಗೆ ಹೊರಬರಬಹುದು ಅನ್ನೋದನ್ನು ಅವರು ತಿಳಿಸಿಕೊಟ್ಟಿದ್ದಾರೆ.
ಲಕ್ಷ್ಮೀ ಬಾರಮ್ಮ ಕಾವೇರಿಗೆ ಹಿಡಿಶಾಪ ಹಾಕ್ತಿದ್ದಾರೆ ವೀಕ್ಷಕರು!
ಎಷ್ಟೋ ಸೆಲೆಬ್ರಿಟಿಗಳು (celebrities) ಅಂದ ಚೆಂದದ ಬಗ್ಗೆ ಮಾತಾಡ್ತಾರೆ. ಎಷ್ಟೋ ಮಂದಿ ಟೂರ್, ಜಾಲಿ ರೈಡ್ ಅಂತೆಲ್ಲ ಹೇಳ್ತಿರುತ್ತಾರೆ. ಆದರೆ ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳೋ ಸೆಲೆಬ್ರಿಟಿಗಳು ಬಹಳ ಕಡಿಮೆ. ಆದರೆ ಸಂಗೀತ ಶೃಂಗೇರಿ ಇಂಥಾ ಸೂಕ್ಷ್ಮ ವಿಚಾರಗಳ ಬಗ್ಗೆ ಬೆಳಕು ಚೆಲ್ಲೋ ಪ್ರಯತ್ನ ಮಾಡಿದ್ದಾರೆ. ತಾವು ಆರಂಭದಿಂದಲೇ ಈ ಸಮಸ್ಯೆ (problem) ಫೇಸ್ ಮಾಡಿ, ಆ ಬಳಿಕ ಪ್ರಯತ್ನಪೂರ್ವಕವಾಗಿ ಇದರಿಂದ ಹೊರಬಂದು ಇತರರಿಗೆ ಮಾದರಿಯಾಗಿದ್ದಾರೆ.
ಸದ್ಯ ಬಿಗ್‌ಬಾಸ್‌ನಲ್ಲಂತೂ (big boss) ಇವರ ಬಗ್ಗೆಯೇ ಮಾತು. ಇವರ ಆಟ, ತುಂಟಾಟ ನೋಡ್ತಿದ್ರೆ ಇವರೇ ಗೆಲ್ಲೋ ಕಂಟೆಸ್ಟೆಂಟ್ ಇರಬಹುದೇನೋ ಅನ್ನೋ ಅನುಮಾನ (doubt) ಒಂದಿಷ್ಟು ಜನರಿಗೆ ಇದೆ. ಅದನ್ನು ಕಾದು ನೋಡಬೇಕು. ಸದ್ಯಕ್ಕಂತೂ ಪಿಸಿಓಡಿ ಬಗ್ಗೆ ಸಂಗೀತ ಅವರ ಮಾತೇ ಎಲ್ಲೆಲ್ಲೂ ಹರಿದಾಡ್ತಿದೆ. ಇವರ ಮ್ಯಾನರಿಸಂಗೆ ಸುದೀಪ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.