ಸಂತೋಷ್ ಹೋದ್ರು, ತಾರಾ ಬಂದ್ರು: ಕುತೂಹಲ ಕೆರಳಿಸಿದ ಬಿಗ್‌ಬಾಸ್- ಸ್ಪರ್ಧಿಗಳ ಭರ್ಜರಿ ಡ್ಯಾನ್ಸ್
ವರ್ತೂಲು ಸಂತೋಷ್ ಅವರು ಅರೆಸ್ಟ್ ಆಗಿರುವ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮನೆಯಿಂದ ಹೋದ ಬೆನ್ನಲ್ಲೇ ನಟಿ ತಾರಾ ಆಗಮನವಾಗಿದ್ದು, ಕುತೂಹಲ ಕೆರಳಿಸುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಬಿಗ್‌ಬಾಸ್ ಎರಡನೆಯ ವಾರವನ್ನೂ ಪೂರೈಸಿದ್ದು, ಮೂರನೆಯ ವಾರಕ್ಕೆ ಕಾಲಿಟ್ಟಿದೆ. ಇದಾಗಲೇ ಸ್ನೇಕ್ ಶ್ಯಾಮ್ ಮತ್ತು ಪತ್ರಕರ್ತ ಗೌರೀಶ್ ಅಕ್ಕಿ ಅವರು ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಅದೇ ಇನ್ನೊಂದೆಡೆ ಶಾಕಿಂಗ್ ಘಟನೆಯಲ್ಲಿ, ಬಿಗ್ ಬಾಸ್ ಮನೆಯಲ್ಲಿರುವಾಗ್ಲೆ ವರ್ತೂರ್ ಸಂತೋಷ್ (Varturu Santhosh) ನಿನ್ನೆ ಅರೆಸ್ಟ್ ಆಗಿದ್ದಾರೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ನೇರವಾಗಿ ಕರೆದುಕೊಂಡು ಹೋಗಲಾಗಿದೆ. ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಎಸಿಜೆಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಇದೀಗ ವರ್ತೂರು ಸಂತೋಷ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಸಂತೋಷ್ ಅವರ ಬಂಧನದಿಂದ ಉಳಿದ ಸ್ಪರ್ಧಿಗಳು ನೋವಿನಿಂದ ಇರುವಾಗಲೇ, ಕುತೂಹಲ ಘಟ್ಟದಲ್ಲಿ, ನಟಿ ತಾರಾ ಅನುರಾಧಾ ಅವರು ಬಿಗ್‌ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಬ್ಬದ ಬೆನ್ನಲ್ಲೇ ದೊಡ್ಮನೆಗೆ ನಟಿ ಭೇಟಿ ಕೊಟ್ಟಿದ್ದು, ಬಿಗ್‌ಬಾಸ್‌ನಲ್ಲಿ ಭರ್ಜರಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಬಿಗ್‌ಬಾಸ್ ಮನೆಯೊಳಗಿನ ಸ್ಪರ್ಧಿಗಳು ದಸರಾ ಸಂಭ್ರಮದಲ್ಲಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಹಿರಿಯ ನಟಿ ತಾರಾ ಪ್ರವೇಶಿಸಿದ್ದು, ದಸರಾ ದರ್ಬಾರ್ ನಡೆಸಿಕೊಟ್ಟಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಬಿಗ್‌ಬಾಸ್ ಎಪಿಸೋಡ್‌ನಲ್ಲಿ ಮನೆಯೊಳಗಿನ ದಸರಾ ಸಂಭ್ರಮ ಪ್ರಸಾರವಾಗಲಿದೆ.
ಅಪ್ಪನ ವಯಸ್ಸಿನ ಹೀರೋ ಜತೆ ರೊಮ್ಯಾನ್ಸ್, ಲಿಪ್‌ಲಾಕ್‌ಗೆ ನಯನತಾರಾ ರೆಡಿ? ಅಯ್ಯೋ ಅಂತಿದ್ದಾರೆ ಫ್ಯಾನ್ಸ್
ಅಷ್ಟಕ್ಕೂ ಇವರು ಸಂತೋಷ್ ಬದಲಿಗೆ ಸ್ಪರ್ಧಿಯಾಗಿ ಬಂದಿರಬಹುದು ಎಂದು ಹಲವರು ಊಹಿಸುತ್ತಿದ್ದಾರೆ. ಆದರೆ ಇವರು ಸ್ಪರ್ಧಿಯಾಗಿ ಅಲ್ಲ ಬದಲಿಗೆ ಹಬ್ಬದ ನಿಮಿತ್ತ ಅತಿಥಿಯಾಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಸ್ಪರ್ಧಿಗಳ ಜೊತೆಯಲ್ಲಿ ಹಬ್ಬ ಆಚರಿಸಿ ನಿರ್ಗಮಿಸಲಿದ್ದಾರೆ. ಅವರು ಮನೆಯೊಳಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಕುತೂಹಲಗೊಂಡ ಸ್ಪರ್ಧಿಗಳು ಸಂತೋಷದಿಂದ ನಟಿಯನ್ನು ಬರಮಾಡಿಕೊಂಡಿದ್ದಾರೆ. ಹಲವಾರು ಆಟೋಟಗಳು ಈ ಸಂದರ್ಭದಲ್ಲಿ ನಡೆದಿದ್ದು, ಎಲ್ಲರೂ ಸಕತ್ ಡ್ಯಾನ್ಸ್ ಮಾಡಿದ್ದಾರೆ.
ಇದರ ಪ್ರೊಮೋ ಬಿಡುಗಡೆಯಾಗಿದ್ದು, ಇಂದು ರಾತ್ರಿ ಇದರ ಎಪಿಸೋಡ್ ಪ್ರಸಾರ ಆಗಲಿದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಬಿಗ್‌ಬಾಸ್ ಮನೆಯ ಬಾಗಿಲು ತೆರೆದುಕೊಳ್ಳುತ್ತದೆ. ಅದರಿಂದ ನಟಿ ತಾರಾ ಮನೆ ಪ್ರವೇಶಿಸುವುದನ್ನು ನೋಡಬಹುದು. ಮನೆಯೊಳಗಿನ ಸದಸ್ಯರು ಅಚ್ಚರಿಯಿಂದ ಇರುವುದನ್ನು ನೋಡಬಹುದು. ಇದಾದ ಬಳಿಕ ಬಿಗ್‌ಬಾಸ್ ಹಾಡುಗಳನ್ನು ಪ್ಲೇ ಮಾಡುತ್ತದೆ. ಇದಕ್ಕೆ ಒಬ್ಬರೊಬ್ಬರೇ ಬಿಗ್‌ಬಾಸ್ ಸ್ಪರ್ಧಿಗಳು ಕುಣಿದು ಈ ಹಾಡನ್ನು ಮನೆಯ ಯಾವ ಸದಸ್ಯರಿಗೆ ಅರ್ಪಿಸುತ್ತೇವೆ ಎಂದು ಹೇಳುತ್ತಾರೆ. ಇದೇ ವೇಳೆ ಸ್ಪರ್ಧಿಗಳ ದೂರನ್ನು ನಟಿ ಆಲಿಸಿದ್ದಾರೆ. ಕಾರ್ತಿಕ್ ಫ್ಲರ್ಟ್ ಮಾಡುತ್ತಾರೆ ಎಂದು ಮನೆಯವರು ದೂರಿದಾಗ ನಟಿ ತಾರಾ, ನೀನೂ ಫ್ಲರ್ಟ್ ಕೂಡ ಮಾಡ್ತಿಯಾ ಎಂದು ತಾರಾ ಪ್ರಶ್ನಿಸುತ್ತಾರೆ. ಅದಕ್ಕೆ ಉಳಿದವರು ಹೌದು ಎನ್ನುತ್ತಾರೆ. ಹೀಗೆ ಹಾಸ್ಯದಿಂದ ನಗುವಿನ ವಾತಾವರಣ ಮನೆಯಲ್ಲಿ ಇರುವುದನ್ನು ನೋಡಬಹುದು.
ಹಾಟ್ ವಿಡಿಯೋ ಶೇರ್ ಮಾಡಿ ಬಿಗ್‌ಬಾಸ್ ಮನೆಯೊಳಕ್ಕೆ ಕಾಲಿಡ್ತಿದ್ದಾರೆ ಮಾಜಿ ಮಿಸ್ ಇಂಡಿಯಾ!