ಸ್ಯಾಂಡಲ್‌ವುಡ್ ನಟಿ ಮಯೂರಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭ ಚಾಟ್ ಕಾರ್ನರ್‌ನಲ್ಲಿ ಭಾಗವಹಿಸಿದ ನಟಿ ತಮ್ಮ ಮದುವೆಯ ಬಗ್ಗೆ ವಿಶೇಷ ಸುದ್ದಿಯೊಂದನ್ನು ರಿವೀಲ್ ಮಾಡಿದ್ದಾರೆ.

ಮಯೂರಿ ಮದುವೆಯಲ್ಲಿ ಅವರನ್ನು ಧಾರೆ ಎರೆದುಕೊಟ್ಟಿದ್ದು ಅವರ ಅಕ್ಕನೋ, ಸಂಬಂಧಿಯೋ ಅಲ್ಲ. ಬದಲಾಗಿ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಮಯೂರಿ ಅವರ ಸಹನಟ ಜೆಕೆ ಅವರ ಪೋಷಕರು.

ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಪತ್ನಿ ಗೀತಾ ಹುಟ್ಟುಹಬ್ಬ; ನಟಿ ಮಯೂರಿ ಬಯಕೆಯೆ ಸ್ವೀಟ್ ರೆಡಿ!

ಇದಕ್ಕೇನು ಕಾರಣ ಗೊತ್ತಾ..? ಮಯೂರಿ ಅವರ ಸಂಬಂಧಿಕರೆಲ್ಲ ಹುಬ್ಬಳ್ಳಿಯಲ್ಲಿದ್ದರು. ಕೊರೋನಾವಾದ್ದರಿಂದ ಯಾರೊಬ್ಬರೂ ಮದುವೆಗೂ ಬರುವ ಧೈರ್ಯ ತೋರಿಸಲಿಲ್ಲ. ಇನ್ನು ಕಾರಣಾಂತರಗಳಿಂದ ಅವರ ಅಕ್ಕನೂ ತಂಗಿಯನ್ನು ಧಾರೆ ಎರೆಯುವ ಸ್ಥಿತಿಯಲ್ಲಿರಲಿಲ್ಲ.

ಅಂತಹ ಸಂದರ್ಭದಲ್ಲಿ ಮಯೂರಿ ಅವರಿಗೆ ನೆನಪಾಗಿದ್ದು, ಬೆಂಗಳೂರಿನಲ್ಲಿ ತಮಗೆ ಆತ್ಮೀಯರಾದ ಜೆಕೆ ಪೋಷಕರು. ಫೋನ್ ಮಾಡಿ ಕೇಳಿದ ಕೂಡಲೇ ಒಪ್ಪಿಕೊಂಡಿದ್ದರಂತೆ. ಮಯೂರಿಯನ್ನು ತಮ್ಮ ಸ್ವಂತ ಮಗಳಂತೆ ಧಾರೆ ಎರೆದು ಕೊಟ್ಟಿದ್ದರು.