ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಪತ್ನಿ ಗೀತಾ ಹುಟ್ಟುಹಬ್ಬ; ನಟಿ ಮಯೂರಿ ಬಯಕೆಯೆ ಸ್ವೀಟ್ ರೆಡಿ!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿಹಿ ಕಹಿ ಚಂದ್ರ ನಡೆಸಿ ಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮ ದಿನದಿಂದ ದಿನಕ್ಕೆ ಕಲರ್‌ಫುಲ್ ಆಗುತ್ತಿದೆ. ದಿನಕ್ಕೊಬ್ಬ ಸ್ಟಾರ್ ಸೆಲೆಬ್ರಿಟಿ ಜೊತೆ ವೆರೈಟಿ ಅಡುಗೆ ರೆಸಿಪಿ ಹೇಳಿಕೊಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ವೀಕ್ಷಕರು ಹೆಚ್ಚಿನ ಮೆಚ್ಚುಗೆ ವ್ಯಕ್ತ ಪಡಿಸಿದ್ದು ಮಯೂರಿ ಹಾಗೂ ಗೀತಾ ಬರ್ತಡೇ ದಿನ......
ಸಿಹಿ ಕಹಿ ಚಂದ್ರು ನೇತೃತ್ವದಲ್ಲಿ ಮೂಡಿ ಬರುತ್ತಿರುವ ಎಮ್ಮಿ ಎಮ್ಮಿ ಕಾರ್ಯಕ್ರಮ 'ಬೊಂಬಾಟ್ ಭೋಜನ'.
ಚಂದ್ರು ಲೈಫ್‌ಗೆ ಸಿಹಿ ತುಂಬಿದ ಸಂಗಾತಿ ಗೀತಾ ಹುಟ್ಟುಹಬ್ಬವನ್ನು ಕಾರ್ಯಕ್ರಮದಲ್ಲಿ ಆಚರಣೆ ಮಾಡಲಾಗಿತ್ತು.
ಹೆಂಡತಿಯ ಫೇವರೆಟ್ ಅಡುಗೆ- ರಾಗಿ ಮುದ್ದೆ, ಸೊಪ್ಪಿನ ಪಲ್ಯ ಹಾಗೂ ಸಾರು ಮಾಡಿಕೊಟ್ಟ ಚಂದ್ರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಸಾರವಾದ ಸಂಚಿಕೆಯಲ್ಲಿ ನಟಿ ಮಯೂರಿ ಭಾಗಿಯಾಗಿದ್ದರು.
ಗರ್ಭಿಣಿ ಮಯೂರಿ ತಮ್ಮಗಾದ ಸಿಹಿ ಬಯಕೆ ಬಗ್ಗೆ ಚಂದ್ರು ಬಳಿ ಹಂಚಿಕೊಂಡರು.
ಹಲ್ವಾ ಹಜರತ್ ಸ್ವೀಟ್ ಮಾಡಿಕೊಟ್ಟ ಚಂದ್ರು, ಸರಳವಾಗಿ ಸೀಮಂತವನ್ನೂ ಮಾಡಿಸಿ ಕಳುಹಿಸಿದ್ದಾರೆ.
ದೀಪಾವಳಿ ಹಬ್ಬದ ದಿನ ಇಡೀ ಚಂದ್ರು ಫ್ಯಾಮಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ಮಗಳು ಹಾಗೂ ಅಳಿಯನ ಜೊತೆ ಆನ್ ಸ್ಕ್ರೀನ್‌ನಲ್ಲಿ ಎಮ್ಮಿ ಅಡುಗೆ ಮಾಡಿ ಎಂಜಾಯ್ ಮಾಡಿದ್ದಾರೆ.