ತೆಲುಗು ಹಾಗೂ ತಮಿಳು ಚಿತ್ರರಂಗದ ಬೇಡಿಕೆಯ ನಟಿ ಸಮಂತಾ ಈಗ ಕಿರುತೆರೆ ಟಾಕ್ ಶೋ 'ಸ್ಯಾಮ್‌ ಜಾಮ್‌' ನಿರೂಪಣೆ ಮಾಡುವ ಮೂಲಕ ಟಾಕ್ ಟಾಫ್‌ ದಿ ಟೌನ್‌ ಆಗಿದ್ದಾರೆ. ಸಿನಿಮಾ ಕ್ಷೇತ್ರದಿಂದ ಕೊಂಚ ದೂರ ಬಂದಿರುವ ಸಮಂತಾಸ ಏನಾದರೂ ಡಿಫರೆಂಟ್ ಆಗಿ ಹೊಸ ಪ್ರಯತ್ನಕ್ಕೆ ಕೈ ಹಾಕಬೇಕೆಂಬ ಕಾರಣಕ್ಕೆ ಈ ನಿರ್ಧಾರ ಮಾಡಿದ್ದಾರಂತೆ. 

ದಕ್ಷಿಣದ ಶ್ರೀಮಂತ ನಟಿ ಸಮಂತಾ ಅಕ್ಕಿನೇನಿಯ ನೆಟ್‌ ವರ್ಥ್‌ ಎಷ್ಟು?

ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಸಮಂತಾ ಪ್ರತಿಯೊಬ್ಬ ಸಹ ಕಲಾವಿದನ ಜೊತೆಯೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಕಾರಣ ಸಮಂತಾ ಶೋನಲ್ಲಿ ಸ್ಟಾರ್ಸ್ ಪಾಲ್ಗೊಳ್ಳಲು 'No'ಎಂದು ಹೇಳುವುದೇ ಇಲ್ಲ. ಸಿನಿಮಾಗಳಿಗೆ ಕೋಟಿಯಲ್ಲಿ ಸಂಭಾವನೆ ಪಡೆಯುತ್ತಿದ್ದ ಸಮಂತಾ ಒಟ್ಟು 8 ಎಪಿಸೋಡ್‌ ಟಾಕ್‌ ಶೋ ನಡೆಸಿಕೊಡುವುದಾಗಿ ಹೇಳಿದ್ದಾರಂತೆ. ಅಂದ್ಮೇಲೆ ಪಡೆಯುತ್ತಿರುವ ಸಂಭಾವನೆ ಅಷ್ಟೇ ಇರಬೇಕಲ್ವಾ?

ಹೌದು. ಕೆಲವು ಮೂಲಗಳ ಪ್ರಕಾರ ಸಮಂತಾ ಸುಮಾರು 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದು ಕೇವಲ 8 ಎಪಿಸೋಡ್‌ಗೆ ಎನ್ನಲಾಗಿದೆ.  ಪ್ರೋಮೋ ವಿಡಿಯೋಗಳ ಮೂಲಕ ಗಮನ ಸೆಳೆಯುತ್ತಿರುವ ಈ ಕಾರ್ಯಕ್ರಮ ಖಂಡಿತಾ ಅತಿ ಹೆಚ್ಚು ಟಿಆರ್‌ಪಿ ಪಡೆಯಲಿದೆ.

ಸಮಂತಾ ಎಲ್ಲೇ ಹೋದರೂ ಈ ಬ್ಯಾಗ್‌ ಜೊತೆಲ್ಲಿದ್ದೇ ಇರುತ್ತೆ; ಬ್ಯಾಗ್ ಬೆಲೆ ಗೊತ್ತಾ? 

ಲಾಕ್‌ಡೌನ್‌ನಲ್ಲಿ ಸಾಕು ನಾಯಿ, ಯೋಗ, ಟೆರೆಸ್‌ ಗಾರ್ಡನಿಂಗ್‌ನಲ್ಲಿ ಸಮಯ ಕಳೆಯುತ್ತಿದ್ದ ಸಮಂತಾ, ಬಿಗ್ ಬಾಸ್‌ ಸೀಸನ್‌ 4ರಲ್ಲಿ ವಿಶೇಷ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಆನ್‌ ಸ್ಕ್ರೀನ್‌‌ಗೆ ಎಂಟ್ರಿ ಕೊಟ್ಟರು. ಸಮಂತಾ ನಿರೂಪಣೆ ಮೆಚ್ಚಿಕೊಂಡ ವೀಕ್ಷರಿಗೆ ಸ್ಯಾಮ್‌ ಜಾಮ್‌ ಶೋ ಬಗ್ಗೆ ಸಾಕಷ್ಟು ಭರವಸೆ ಮೂಡಿಸಿದ್ದರು. ನಿರಾಸೆ ಮಾಡದ ಸಮಂತಾ ಅದ್ಭುತವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಆದರೆ ಏಕಾಏಕಿ ಇಷ್ಟೊಂದು ಹಣ ಪಡೆಯುತ್ತಿರುವುದಕ್ಕೆ ಸಮಂತಾಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೋಟಿಯಲ್ಲಿ ದುಡಿಯುತ್ತೀರಾ, ಕೋಟಿಯಲ್ಲೇ ಖರ್ಚು ಮಾಡುತ್ತೀರಿ. ದುಡ್ಡಿಗೆ ಬೆಲೆ ಇಲ್ವಾ ಎನ್ನುತ್ತಿದ್ದಾರೆ ನೆಟ್ಟಿಗರು. 

ಸಮಂತಾ ಪ್ರತಿಭೆ, ಅವರ ಶ್ರಮ, ಅವರ ದುಡಿಮೆ. ಈ ನೆಟ್ಟಿಗರೇನು ತೊಂದರೆ ಎಂಬುವುದು ಮಾತ್ರ ಅರ್ಥವಾಗುತ್ತಿಲ್ಲ.