Asianet Suvarna News Asianet Suvarna News

ಮನೆಬಿಟ್ಟ ಸಹನಾ- ಪುಟ್ಟಕ್ಕನ ಮನೆಗೆ ಬಂದ ರಾಮ್​: ಫ್ಯಾನ್ಸ್​ ಫುಲ್​ ಕನ್​ಫ್ಯೂಸ್​! ಇದೇನಪ್ಪಾ ಟ್ವಿಸ್ಟ್​?

ಸಹನಾ ಮನೆಬಿಟ್ಟು ಹೋಗಿದ್ದಾಳೆ.  ಆದರೆ ಈ ಸಮಯದಲ್ಲಿಯೇ ಪುಟ್ಟಕ್ಕನ ಮನೆಗೆ ರಾಮ್​ ಎಂಟ್ರಿ ಆಗಿದೆ. ಏನಿದು ವಿಷಯ?
 

Sahana has left home But at this time Ram entered Puttakkas house in Puttakkana Makkalu suc
Author
First Published May 1, 2024, 12:58 PM IST

ಸಹನಾ ಮನೆ ಬಿಡುವ ನಿರ್ಧಾರ ಮಾಡಿದ್ದಾಳೆ.   ತನ್ನನ್ನು ಸಾಯಿಸಲು ಹೊರಟ ಅತ್ತೆ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದಿರುವ ಗಂಡನ ಸಂಬಂಧಿ ವಿರುದ್ಧದ ಸಿಡಿದೆದ್ದು ತವರು ಸೇರಿದ್ದಳು. ತನ್ನ ಪರವಾಗಿ ಇರಬೇಕಾದ ಪತಿ ತನ್ನನ್ನೇ ಹುಚ್ಚಿ ಎಂದು ಹೇಳಿರುವುದು ಆಕೆಗೆ ನುಂಗಲಾಗದ ತುತ್ತಾಗಿದೆ. ಆದರೆ ಪುಟ್ಟಕ್ಕನಿಗೋ ಮಗಳ ಜೀವನವನ್ನು ಹೇಗಾದರೂ ಸರಿ ಮಾಡುವ ಚಿಂತೆ. ತಾಯಿಯ ಸ್ಥಾನದಲ್ಲಿ ನಿಂತು ಪುಟ್ಟಕ್ಕನನ್ನು ನೋಡುವುದಾದರೆ, ಅವಳಿಗೆ ಮಗಳ ಸಂಸಾರ ಸರಿಯಾಗಬೇಕಷ್ಟೇ. ಏಕೆಂದರೆ ಇಲ್ಲಿ ಸಹನಾಳ ಗಂಡ ತನ್ನ ತಾಯಿಯ ಪರ ಇದ್ದಾನೆ ಎನ್ನುವುದು ಬಿಟ್ಟರೆ ಆತ ತುಂಬಾ ಒಳ್ಳೆಯವ. ಸಹನಾಳನ್ನು ತುಂಬಾ ಪ್ರೀತಿಸುತ್ತಾನೆ. ಇದಕ್ಕಾಗಿ ಪುಟ್ಟಕ್ಕನಿಗೆ ಇಬ್ಬರನ್ನೂ ಒಂದು ಮಾಡುವ ಚಿಂತೆ. ಇದಕ್ಕಾಗಿ ಸಹನಾಳಿಗೆ ಬುದ್ಧಿ ಮಾತು ಹೇಳುತ್ತಿದ್ದಾಳೆ. 

ಆದರೆ ತಾಯಿಗೆ ತನ್ನಿಂದ ನೋವಾಗುತ್ತಿದೆ, ತವರು ಸೇರಿರುವುದಕ್ಕೆ ಆಕೆಗೆ ಹಿಂಸೆ ಆಗುತ್ತಿದೆ ಎನ್ನುವ ಸತ್ಯ ಸಹನಾಳಿಗೆ ಆಗಿದೆ. ಇದೇ ಕಾರಣಕ್ಕೆ ಆಕೆ ತನ್ನಿಂದ ತಾಯಿಗೆ ನೋವಾಗಬಾರದು ಎಂದು ಅಂದುಕೊಳ್ಳುತ್ತಿದ್ದಾಳೆ. ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವ ಮನಸ್ಸು ಆಕೆಗಿಲ್ಲ. ಪತಿಯೇ ತನ್ನ ಮೇಲೆ ಸಂದೇಹ ಪಟ್ಟಿದ್ದರಿಂದ ಅವಳ ಮನಸ್ಸು ಜರ್ಜರಿತವಾಗಿದೆ. ಇದರಿಂದ ಮನೆ ಬಿಟ್ಟು ಹೋಗಲು ನಿರ್ಧರಿಸಿ ಅಪ್ಪ-ಅಮ್ಮನ ಕಾಲಿಗೆ ಬಿದ್ದಿದ್ದಾಳೆ.  

ಸೀತಾಳ ವಿರುದ್ಧವೇ ರೊಚ್ಚಿಗೆದ್ದ ಅಭಿಮಾನಿಗಳು: ರಾಮ್​ ಇವಳನ್ನು ಬಿಟ್ಟುಬಿಡು ಪ್ಲೀಸ್​ ಅಂತಿರೋದ್ಯಾಕೆ?

ಮಾರನೆಯ ದಿನ ಸಹನಾಳಿಗಾಗಿ ಎಲ್ಲೆಡೆ ಹುಡುಕಾಟ ನಡೆಯುತ್ತಿದೆ. ಇದರ ನಡುವೆಯೇ ಸೀತಾರಾಮ ಸೀರಿಯಲ್​ ರಾಮ್​ ಎಂಟ್ರಿ ಆಗಿದೆ. ಅಲ್ಲಿ ಸಹನಾ ಕೂಡ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫುಲ್​ ಕನ್​ಫ್ಯೂಸ್​ ಆಗಿದ್ದಾರೆ. ಅಷ್ಟಕ್ಕೂ ರಾಮ್​ ಬಂದಿರುವಾಗ ಸಹನಾ ಕಾಣಿಸಿಕೊಂಡಿರೋ ಹಿಂದೆ ಬೇರೆಯದ್ದೇ ವಿಷಯವಿದೆ. ಅದೇನೆಂದರೆ, ಮನೆ ಬಿಡುವ ಮುನ್ನ ಹಿಂದಿನ ಸಿಹಿ ಘಟನೆಗಳನ್ನು ಸಹನಾ ನೆನಪಿಸಿಕೊಳ್ಳುತ್ತಾಳೆ. ಆ ಸಮಯದಲ್ಲಿ ಅಮ್ಮನ ಕೈಯಿಂದ ಮಾಡಿದ ಮುದ್ದೆಯನ್ನು ತಿನ್ನಲು ರಾಮ್​ ಅಲ್ಲಿಗೆ ಬಂದಿರುವ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಳೆ. ರಾಮ್​ ಯಾರು ಎನ್ನುವುದು ಪುಟ್ಟಕ್ಕ ಮತ್ತು ಸಹನಾಗೆ ಗೊತ್ತಿರುವುದಿಲ್ಲ. ಆದರೆ ಕಿರಿಯ ಮಗಳು ಸುಮಾಳಿಗೆ ಅವನು ದೊಡ್ಡ ಬಿಜಿನೆಸ್​ಮೆನ್​ ಎನ್ನುವುದು ತಿಳಿದಿರುತ್ತದೆ. ಇದೇ ಕಾರಣಕ್ಕೆ ಅವಳು ಖುಷಿಯಾಗುತ್ತಾಳೆ ಅಷ್ಟೇ.

ಇನ್ನು ಸಹನಾ ವಿಷಯಕ್ಕೆ ಬರುವುದಾದರೆ, ಅವಳು ಮನೆಬಿಟ್ಟು ಏನು ಮಾಡುತ್ತಾಳೆ ಎನ್ನುವುದು ಈಗಿರುವ ಪ್ರಶ್ನೆ. ಕಾಳಿ ಹೇಗಾದರೂ ಮಾಡಿ ಸಹನಾಳಿಗೆ ನ್ಯಾಯ ಕೊಡಿಸೋ ಪ್ರಯತ್ನದಲ್ಲಿದ್ದಾನೆ. ಇದಾಗಲೇ ಆತನ ಸಹಾಯದಿಂದ ಸಹನಾ ದೊಡ್ಡ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾಳೆ. ಅತ್ತೆ ವಿರುದ್ಧ ಸುಳ್ಳು ಕೇಸು ಹಾಕಿದ್ದಕ್ಕೆ ಕೋರ್ಟ್​ ಇನ್ನೇನು ಸಹನಾಗೆ ಏಳು ವರ್ಷ ಶಿಕ್ಷೆ ಕೊಡುವ ಹಂತದಲ್ಲಿ ಇದ್ದಾಗ ಕಾಳಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಪಡೆದು ಕೋರ್ಟ್​ಗೆ ಹಾಜರಾಗಿ ಸಹನಾಳನ್ನು ಶಿಕ್ಷೆಯಿಂದ ಬಿಡುಗಡೆಗೊಳಿಸಿದ್ದಾನೆ. ಇತ್ತ ಅವಳ ಗಂಡನಿಗೆ ಬುದ್ಧಿ ಬಂದು ಕ್ಷಮೆ ಕೇಳ್ತಾನಾ? ಒಂದು ವೇಳೆ ಕ್ಷಮೆ ಕೇಳಿದ್ರೂ ಸಹನಾ ಒಪ್ಪಿಕೊಳ್ತಾಳಾ? ಅವಳ ಮುಂದಿನ ನಡೆ ಏನು ಎನ್ನುವುದು ಈಗಿರುವ ಕುತೂಹಲ. 

ಪೆನ್​ಡ್ರೈವ್​ ಪ್ರಕರಣದ ನಡುವೆ ನಟಿ ರಶ್ಮಿ ಗೌತಮ್​ ಪೋಸ್ಟ್​ ವೈರಲ್​: ಸಂಚಲನ ಸೃಷ್ಟಿಸಿರೋ ಹೇಳಿಕೆ...


Latest Videos
Follow Us:
Download App:
  • android
  • ios