Asianet Suvarna News Asianet Suvarna News

ಚಂದನ್ ಶೆಟ್ಟಿಗೆ ಹೊಸ ಪಾರ್ಟನರ್ ಸಿಕ್ಕಾಯ್ತು, ನಿವಿ ಬಿಟ್ಮೇಲೆ ಅದೃಷ್ಟ ಬದಲಾಯ್ತು..!

ರ್ಯಾಪರ್ ಚಂದನ್ ಶೆಟ್ಟಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿ. ಒಂದಾದ್ಮೇಲೆ ಒಂದು ಸಿನಿಮಾ ಮಾಡ್ತಿರೋ ಚಂದನ್ ಹೊಸ ಪಾರ್ಟನರ್ ಪಡೆದಿದ್ದಾರೆ. ಈ ಖುಷಿ ವಿಷ್ಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

rapper chandan shettys new partner roo
Author
First Published Sep 3, 2024, 6:45 PM IST | Last Updated Sep 4, 2024, 8:49 AM IST

ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ನಿವೇದಿತಾ (Big Boss contestant and actress Nivedita) ಗೆ ಡಿವೋರ್ಸ್ ನೀಡಿದ್ಮೇಲೆ ರ್ಯಾಪರ್ ಚಂದನ್ ಶೆಟ್ಟಿ (Rapper Chandan Shetty) ಒಂಟಿಯಾಗಿದ್ರು. ಈಗ ಅವರಿಗೊಂದು ಪಾರ್ಟನರ್ ಸಿಕ್ಕಿದ್ದಾರೆ. ಇನ್ಮೆಲೆ ಚಂದನ್ ಹಿಡಿಯೋದು ಕಷ್ಟ. ನಿವಿ ಬಿಟ್ಮೇಲೆ ಚಂದನ್ ಅದೃಷ್ಟ ಬದಲಾದಂತಿದೆ. ಸೋಶಿಯಲ್ ಮೀಡಿಯಾ (Social Media)ದಲ್ಲಿ ಸಖತ್ ಸುದ್ದಿ ಮಾಡ್ತಿರುವ ಚಂದನ್ ಶೆಟ್ಟಿ ಈಗ ಹೊಸ ಪಾರ್ಟನರ್ ಜೊತೆ ಸುತ್ತಾಡಲಿದ್ದಾರೆ. ಅದರ ಫೋಟೋ ಹಂಚಿಕೊಂಡ ಚಂದನ್, ಅಭಿಮಾನಿಗಳಿಗೆ ಗುಡ್ ನ್ಯೂಸ್ (Good News) ನೀಡಿದ್ದಾರೆ. 

ಅಷ್ಟಕ್ಕೂ ಚಂದನ್ ಶೆಟ್ಟಿ ಮತ್ತೆ ಯಾವುದೋ ಗೊಂಬೆ ಹಿಂದಿ ಬಿದ್ದಿಲ್ಲ. ಚಂದನ್ ಶೆಟ್ಟಿ ಪಾರ್ಟನರ್, ದುಬಾರಿ ಟೊಯೋಟಾ ಲೆಜೇಂಡರ್ ಕಾರ್ (Toyota Legender Car). ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹೊಸ ಕಾರಿನ ಫೋಟೋ ಹಂಚಿಕೊಂಡಿರುವ ಚಂದನ್ ಶೆಟ್ಟಿ, ನನ್ನ ಲಿಟಲ್ ಎಲಿಫಂಟ್ (Little Elephant) ಮೊದಲ ಫೋಟೋ ಪೋಸ್ಟ್ ಮಾಡ್ತಿದ್ದೇನೆ ಎಂದು ಶೀರ್ಷಿಕೆ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಚಂದನ್ ಶೆಟ್ಟಿಗೆ ಕಂಗ್ರಾಜ್ಯುಲೇಷನ್ ಹೇಳಿರುವ ಅಭಿಮಾನಿಗಳು, ಎಲಿಫಂಟ್ ಎಂದಿದ್ದಕ್ಕೆ ಸೊಂಡಿಲೆಲ್ಲಿ ಅಂತ ಕೇಳಿದ್ದಾರೆ. 

ಕಮೋಡ್ ಕೊಳ್ಳಲೂ ದರ್ಶನ್ ಟ್ರೆಂಡ್ ಸೆಟ್, ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಹವಾ!

ಅಷ್ಟೇ ಅಲ್ಲ ಕಾರ್ ನಂಬರ್ ಇಟ್ಕೊಂಡು ಚಂದನ್ ಕಾಲೆಳೆಯುವ ಪ್ರಯತ್ನವನ್ನು ನೆಟ್ಟಿಗರು ಮಾಡಿದ್ದಾರೆ. ಕಾರಿನ ನಂಬರ್ ಪ್ಲೇಟ್ ನಲ್ಲಿ ಎನ್ ಸಿ ನೋಡ್ತಿದ್ದಂತೆ ಚಂದನ್ – ನಿವೇದಿತಾ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ಕಾರ್ ತಗೊಂಡು ಎರಡು ವರ್ಷವಾಗಿದೆ. ಈಗ ಪೋಸ್ಟ್ ಮಾಡ್ತಿದ್ದಾರೆ. ಇದ್ರಲ್ಲಿ ಎನ್ ಸಿ ಅಂದ್ರೆ ನಿವೇದಿತಾ ಚಂದನ್ ಅಂತ ಇನ್ನೊಬ್ಬ ಅಭಿಮಾನಿ ಕೂಡ ಕಮೆಂಟ್ ಮಾಡಿದ್ದಾರೆ.

ಚಂದನ್ ಕಾರ್ ಫೋಟೋ ಹಾಕ್ತಿದ್ದಂತೆ, ನಿವೇದಿತಾಗೆ ನೀಡ್ತಿದ್ದ ಮೇಕಪ್ ದುಡ್ಡನ್ನು ಸೇವ್ ಮಾಡಿ ಚಂದನ್ ಕಾರ್ ಖರೀದಿ ಮಾಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಚಂದನ್ 1414 ಫ್ಯಾನ್ಸಿ ನಂಬರನ್ನು ತಮ್ಮ ಕಾರಿಗೆ ಪಡೆದಿದ್ದಾರೆ. ಚಂದನ್ ಕಾರಿನ ಬೆಲೆ 60 ಲಕ್ಷ ಎಂದು ಅಂದಾಜಿಸಲಾಗಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದು ಎರಡು ತಿಂಗಳಾಗ್ತಾ ಬಂದಿದೆ. ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ದಿಢೀರ್ ಅಂತ  ಚಂದನ್ – ನಿವೇದಿತಾ ಬೇರೆಯಾಗ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ರು. ಮೀಡಿಯಾ ಮುಂದೆ ಬಂದು ಡಿವೋರ್ಸ್ ವಿಷ್ಯವನ್ನು ಹೇಳಿದ್ದ ಜೋಡಿ ಆ ನಂತ್ರ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಸದ್ಯ ಇಬ್ಬರೂ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದು, ಅಭಿಮಾನಿಗಳು ಅವರನ್ನು ನೋಡುವ ದೃಷ್ಟಿಕೋನ ಕೂಡ ಬದಲಾಗ್ತಿದೆ.

ಬಿಗ್ ಬಾಸ್ ಸ್ಪರ್ಧೆಗೆ ಬಂದು ಕಣ್ಣು ತಂಪು ಮಾಡ್ತಾರಾ ಜ್ಯೋತಿ ರೈ ? ನಟಿಯ ಸೌಂದರ್ಯ ಹಾಡಿಹೊಗಳಿದ ನಿರಂಜನ್,

ಚಂದನ್ ಶೆಟ್ಟಿ ಒಂದಾದ್ಮೇಲೆ ಒಂದು ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಅವರ ಅಭಿನಯದ ವಿದ್ಯಾರ್ಥಿ ವಿದ್ಯಾರ್ಥಿನಿಯರೆ ಸಿನಿಮಾ ರಿಲೀಸ್ ಆಗಿದ್ದು, ಈಗ ಚಂದನ್ ಶೆಟ್ಟಿ ಮತ್ತೊಂದು ಸಿನಿಮಾದಲ್ಲಿ ಮಾಜಿ ಪತ್ನಿ ನಿವೇದಿತಾ ಜೊತೆ ಕಾಣಿಸಿಕೊಳ್ತಿದ್ದಾರೆ. ಕೆಲ ದಿನಗಳ ಹಿಂದೆ ಚಂದನ್ ಹಾಗೂ ನಿವೇದಿತಾ ತಮ್ಮ ಹೊಸ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದರು. ಅವರ ಮುದ್ದು ರಾಕ್ಷಿಸಿ ಸಿನಿಮಾ ಪೋಸ್ಟರ್ ನೋಡಿದ ಜನರು, ವಿಚ್ಛೇದನವಾದ್ಮೇಲೂ ಸಿನಿಮಾ ಮಾಡ್ತೀರಾ ಅಂತ ಪ್ರಶ್ನೆ ಮಾಡಿದ್ದರು. ಚಂದನ್ ನಟನೆಯ ಮುದ್ದು ರಾಕ್ಷಸಿ (Muddu Rakshasi)  ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆದಿದ್ದು, ಇದೊಂದು ಸೈಕೋ ಥ್ರಿಲ್ಲರ್ ಎನ್ನಲಾಗ್ತಿದೆ. ರಿಯಲ್ ಲೈಫ್ ನಲ್ಲಿ ಬೇರೆ ಆಗಿರುವ ಜೋಡಿಯನ್ನು ಅಭಿಮಾನಿಗಳು ರೀಲ್ ನಲ್ಲಿ ನೋಡಲು ಬಯಸ್ತಾರಾ ಎಂಬುದನ್ನು ಕಾದು ನೋಡ್ಬೇಕಿದೆ. 

Latest Videos
Follow Us:
Download App:
  • android
  • ios