ಕನ್ನಡತಿ ಧಾರವಾಹಿಯ ರಂಜನಿ ರಾಘವನ್ ನಟಿ ಅಷ್ಟೇ ಅಲ್ಲ, ಕೇಕ್ ಕೂಡಾ ಚೆನ್ನಾಗಿ ತಯಾರಿಸ್ತಾರೆ. ತಮ್ಮ ಬರ್ತ್‌ಡೇ ದಿನದಂದು ನಟಿ ತಮ್ಮ ಕೇಕ್ ತಾವೇ ತಯಾರಿಸಿದ್ದಾರೆ.

ನನ್ನ ಬರ್ತ್‌ಡೇಗೆ ನಾನೇ ಕೇಕ್ ತಯಾರಿಸುತ್ತಿರುವುದು ಎಂದು ಕ್ಯಾಪ್ಶನ್ ಹಾಕಿ ನಟಿ ಫೋಟೋ ಮತ್ತು ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ. ಫ್ಯಾನ್ಸ್ ಇದನ್ನು ನೋಡಿ ಕಮೆಂಟ್ ಮಾಡಿ ಸೂಪರ್ ರಂಜನಿ ಎಂದಿದ್ದಾರೆ.

ಕನ್ನಡತಿಯಲ್ಲಿ ಭುವಿಯನ್ನು ಕಾಡುವ ತಂಗಿ ಬಿಂದು ಇವರೇ ನೋಡಿ..!

ನಟಿ ಇಸ್ಕಾನ್ ದೇವಸ್ಥಾನದಲ್ಲಿ ಬರ್ತ್‌ಡೇ ಆಚರಿಸಿದ್ದು, ವಿಡಿಯೋವನ್ನು ಶೇರ್ ಮಾಡಿದ್ದಾರೆ. ಚಂದದ ಕೇಕ್ ತಯಾರಿಸಿ ನಂತರ ಪೂಜೆ ಮಾಡಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ ನಟಿ.

ಫ್ಯಾನ್ಸ್ ಎಲ್ರೂ ನಟಿ ತಾವೇ ಕೇಕ್ ತಯಾರಿಸಿದ್ದನ್ನು ನೋಡಿ ಸ್ಪೆಷಲ್ ಬರ್ತ್‌ಡೇ ಎಂದು ಹಾರೈಸಿದ್ದಾರೆ. ಪುಟ್ಟಗೌರಿ ಮದುವೆ ಮೂಲಕ ಫೇಮಸ್ ಆದ ನಟಿ ಈಗ ಕನ್ನಡತಿ ಮೂಲಕ ಮೆಚ್ಚುಗೆ ಗಳಿಸುತ್ತಿದ್ದಾರೆ.