ನವ​ದೆ​ಹ​ಲಿ(ಮಾ.19):  ಹಿರಿಯ ಬಿಜೆಪಿ ಮುಖಂಡ ಅರುಣ್‌ ಸಿಂಗ್‌ ಅವರ ಸಮ್ಮು​ಖ​ದಲ್ಲಿ ಗುರು​ವಾರ ಅರುಣ್‌ ಗೋವಿಲ್‌ ಅವ​ರನ್ನು ಪಕ್ಷಕ್ಕೆ ಬರ​ಮಾ​ಡಿ​ಕೊ​ಳ್ಳ​ಲಾ​ಯಿತು. ಅಲ್ಲದೆ ಬಂಗಾ​ಳ​ದಲ್ಲಿ ದೀದಿ ಆಡ​ಳಿ​ತಕ್ಕೆ ಕೊನೇ ಆಡಲು ಯತ್ನಿ​ಸು​ತ್ತಿ​ರುವ ಬಿಜೆಪಿ ಪರ​ವಾಗಿ ಗೋವಿಲ್‌ ಅವರು 100 ರಾರ‍ಯಲಿ​ಗ​ಳಲ್ಲಿ ಭಾಗಿಯಾಗಿ, ಮತ​ದಾ​ರ​ರನ್ನು ಸೆಳೆ​ಯ​ಲಿ​ದ್ದಾರೆ ಎನ್ನಲಾ​ಗಿದೆ. 

ಮಮತಾ ಆಟಕ್ಕೆ ಅಂತಿಮ ದಿನಾಂಕ ಫಿಕ್ಸ್ ಮಾಡಿದ ಮೋದಿ 

ಬಿಜೆಪಿ ಸೇರ್ಪಡೆ ಬಳಿಕ ಮಾತ​ನಾ​ಡಿದ ನಟ ಅರುಣ್‌ ಗೋವಿಲ್‌, ‘ನನಗೆ ಮೊದ​ಲಿಂದಲೂ ರಾಜ​ಕೀ​ಯ​ದಲ್ಲಿ ಆಸಕ್ತಿ ಇರ​ಲಿ​ಲ್ಲ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ​ವೈ​ಖರಿ ಮತ್ತು ಜೈ ಶ್ರೀ ರಾಮ್‌ ಘೋಷ​ಣೆಗೆ ಮಮತಾ ಬ್ಯಾನರ್ಜಿ ಅವರ ಆಕ್ಷೇಪ ವಿಚಾ​ರ​ಗಳು ನನ್ನನ್ನು ರಾಜ​ಕೀ​ಯ​ದತ್ತ ಸೆಳೆ​ದ​ವು. ಜೈ ಶ್ರೀ ರಾಮ್‌ ಘೋಷ​ಣೆಯು ರಾಜ​ಕೀಯ ಘೋಷ​ವಾ​ಕ್ಯ​ವಲ್ಲ. ಬದ​ಲಿಗೆ ಇದೊಂದು ಜೀವನ ಪದ್ಧ​ತಿ​ಯಾ​ಗಿದ್ದು, ನಮ್ಮ ಸಂಸ್ಕೃ​ತಿ​ಯನ್ನು ಪ್ರತಿ​ಬಿಂಬಿ​ಸು​ತ್ತದೆ’ ಎಂದು ಹೇಳಿ​ದರು.