Asianet Suvarna News Asianet Suvarna News

ಧರ್ಮ, ಪ್ರೇಮ ಮತ್ತು ಸಮರ್ಪಣೆಯ 'ರಾಮಾಯಣ' ಪ್ರಸಾರದ ದಿನಾಂಕ ಘೋಷಿಸಿದ ಡಿಡಿ!

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಷ್ಟ್ರೀಯ ವಾಹಿನಿ ಡಿಡಿ ನ್ಯಾಷನಲ್‌ ರಮಾನಂದ್‌ ಸಾಗರ್‌ ಅವರ ನಿರ್ದೇಶನದ ರಾಮಾಯಣವನ್ನು ಮತ್ತೆ ಪ್ರಸಾರ ಮಾಡುವುದಾಗಿ ಘೋಷಣೆ ಮಾಡಿತ್ತು.
 

Ramanand Sagar directorial Divne saga Ramayan To Return To Doordarshan From february 5 san
Author
First Published Feb 1, 2024, 7:37 PM IST

ಬೆಂಗಳೂರು (ಫೆ.1): 37 ವರ್ಷಗಳ ಹಿಂದೆ ಪ್ರಸಾರವಾಗಿ ದೇಶದ ಜನಮನ ಗೆದ್ದಿದ್ದ ರಮಾನಂದ್‌ ಸಾಗರ್‌ ಅವರ ನಿರ್ದೇಶನದ ರಾಮಾಯಣವನ್ನು ಮತ್ತೆ ಪ್ರಸಾರ ಮಾಡುವುದಾಗಿ ರಾಷ್ಟ್ರೀಯ ವಾಹಿನಿ ಡಿಡಿ ನ್ಯಾಷನಲ್‌ ಘೋಷಣೆ ಮಾಡಿತ್ತು. ಅದರಂತೆ ಈ ಧಾರಾವಾಹಿಯ ಪ್ರಸಾರದ ದಿನಾಂಕ ಹಾಗೂ ಸಮಯವನ್ನು ಡಿಡಿ ಪ್ರಕಟಿಸಿದೆ. ಪೌರಾಣಿಕ ಟಿವಿ ಸಿರೀಯಲ್‌ಗಳ ಪೈಕಿ ರಾಮಾಯಣದ ಕಥಾ ಹಂದರ ಹೊಂದಿರುವ ಸಾಕಷ್ಟು ಧಾರವಾಹಿಗಳು ಬಂದಿವೆ. ಆದರೆ, ರಮಾನಂದ್‌ ಸಾಗರ್‌ ಅವರ ನಿರ್ದೇಶನದ ರಾಮಾಯಣದಷ್ಟು ಜನಪ್ರಿಯತೆ ಮತ್ತೆ ಯಾವ ಸೀರಿಯಲ್‌ಗೂ ಸಿಕ್ಕಿರಲಿಲ್ಲ. ಈ ಮೆಗಾ ಸೀರಿಯಲ್‌ನಲ್ಲಿ ರಾಮನಾಗಿ ನಟಿಸಿದ್ದ ಅರುಣ್‌ ಗೋವಿಲ್‌, ಸೀತೆಯಾಗಿ ನಟಿಸಿದ್ದ ದೀಪಿಕಾ ಚಿಕಾಲಿಯಾ ಹಾಗೂ ಲಕ್ಷ್ಮಣ ಪಾತ್ರದಲ್ಲಿ ನಟಿಸಿದ್ದ ಸುನೀಲ್‌ ಲೆಹ್ರಿ ಅವರನ್ನು ಇಂದಿಗೂ ದೇಶದ ಜನತೆ ರಾಮ, ಸೀತೆ, ಲಕ್ಷ್ಮಣರೆಂದೇ ಗುರುತಿಸುತ್ತಾರೆ. ಜನವರಿ 22 ರಂದು ನಡೆದ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲೂ ಕೂಡ ಈ ಮೂವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಆ ಸಮಯದಲ್ಲಿ ಅಯೋಧ್ಯೆಗೆ ಹೋಗಿದ್ದ ಇವರನ್ನು ಸ್ಥಳೀಯ ಜನ ಖುಷಿಯಿಂದಲೇ ಸ್ವಾಗತಿಸಿದ್ದರು. ಈಗ ಇದೇ ಸೀರಿಯಲ್‌ ಅನ್ನು ಮರು ಪ್ರಸಾರ ಮಾಡುವುದಾಗಿ ಡಿಡಿ ನ್ಯಾಷನಲ್‌ ಘೋಷಣೆ ಮಾಡಿದೆ.

ಅದರಂತೆ ಡಿಡಿ ನ್ಯಾಷನಲ್‌ ಟ್ವೀಟ್‌ ಮಾಡಿದ್ದು, 'ಧರ್ಮ, ಪ್ರೇಮ ಹಾಗೂ ಸಮರ್ಪಣೆಯ ಅದ್ವಿತೀಯ ಕಥೆ..ಇಡೀ ದೇಶವೇ ಮೆಚ್ಚಿದ ಶೋ ರಾಮಾಯಣ ಮತ್ತೊಮ್ಮೆ ಪ್ರಸಾರವಾಗುತ್ತಿದೆ. ಫೆಬ್ರವರಿ 5 ರಿಂದ ನೀವು ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುಪ್ರಸಾರವನ್ನು ಮರುದಿನ ಮಧ್ಯಾಹ್ನ 12 ಗಂಟೆಗೆ ವೀಕ್ಷಣೆ ಮಾಡಬಹುದು' ಎಂದು ಟ್ವೀಟ್‌ ಮಾಡಿದೆ.

ಐತಿಹಾಸಿಕ ಈವೆಂಟ್‌ಗೆ ಸಾಕ್ಷಿಯಾಗಿದ್ದು ನನ್ನ ಭಾಗ್ಯ, ರಾಮಲಲ್ಲಾ ಮೂರ್ತಿ ಸುಂದರವಾಗಿದೆ; ನಟ ರಜನಿಕಾಂತ್

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗಿದೆ. ಇಡೀ ದೇಶವೇ ರಾಮನನ್ನು ಸಂಭ್ರಮದಿಂದ ಸ್ವಾಗತಿಸಿದೆ. ಐತಿಹಾಸಿಕ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿದ್ದರು. ಇಂದು ಇಡೀ ದೇಶ ಭಗವಾನ್‌ ಶ್ರೀರಾಮನ ಆರಾಧನೆಯಲ್ಲಿ ತೊಡಗಿದೆ. ಇಂಥ ಹೊತ್ತಿನಲ್ಲಿ ಪುರಾಣ ಪ್ರಸಿದ್ಧ ರಾಮಾಯಣ ಸೀರಿಯಲ್‌ಅನ್ನು ಮರು ಪ್ರಸಾರ ಮಾಡುವ ಮೂರು ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ತಲುಪುವ ಗುರಿಯನ್ನು ಡಿಡಿ ನ್ಯಾಷನಲ್‌ ಹೊಂದಿದೆ.

ಡಿಡಿಯಲ್ಲಿ ಮತ್ತೆ ಪ್ರಸಾರವಾಗಲಿದೆ ರಮಾನಂದ್‌ ಸಾಗರ್‌ 'ರಾಮಾಯಣ'!

1987ರಲ್ಲಿ ರಮಾನಂದ ಸಾಗರ್‌ ಅವರ ರಾಮಾಯಣ ಪ್ರಸಾರ ಆರಂಭಿಸಿತ್ತು. ಪ್ರಸಾರ ಆರಂಭವಾದ ಕೆಲವೇ ತಿಂಗಳಲ್ಲಿಯೇ ಈ ಕಾರ್ಯಕ್ರಮ ದೇಶಾದ್ಯಂತ ಮನ್ನಣೆ ಪಡೆದುಕೊಂಡಿತ್ತು. ರಾಮನ ಜೀವನದ ಕುರಿತಾಗಿ ನಂತರ ಅನೇಕ ಸೀರಿಯಲ್‌ಗಳು ಬಂದರೂ, ಯಾವ ಸೀರಿಯಲ್‌ಗೂ ಕೂಡ ರಮಾನಂದ್‌ ಸಾಗರ್‌ ಅವರ ರಾಮಾಯಣದಲ್ಲಿ ಪ್ರಸಿದ್ಧಿ ಪಡೆದುಕೊಂಡಿರಲಿಲ್ಲ. ಅಂದು ರಾಮನ ಪಾತ್ರದಲ್ಲಿ ನಟಿಸಿದ್ದ ಅರುಣ್‌ ಗೋವಿಲ್‌ ಅವರ ಮುಖಭಾವದಲ್ಲೇ ಜನರು ರಾಮನನ್ನು ಕಂಡಿದ್ದರು. ಕೋವಿಡ್‌ ಸಮಯದಲ್ಲಿ ಇದೇ ಸೀರಿಯಲ್‌ ಮರು ಪ್ರಸಾರವಾದಾಗಲೂ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು.

Follow Us:
Download App:
  • android
  • ios