Asianet Suvarna News Asianet Suvarna News

ಮತ್ತೆ ಲಾಯರ್ ಕಾರಿನಲ್ಲೇ ಹೋಗ್ತಿದಾಳೆ ಸೀತಾ; ಎದುರಿನಲ್ಲೇ ನೋಡಿ ತಲೆ ಬಿಸಿ ಮಾಡಿಕೊಂಡ ರಾಮ!

ಸಿಹಿ ತನ್ನ ಅಜ್ಜಿಯ ಬಳಿ 'ನನ್ನ ಅಪ್ಪ ಎಲ್ಲಿದಾರೆ' ಎಂದು ಕೇಳಲು ಅಜ್ಜಿ 'ನೀನು ನಿನ್ನ ಅಮ್ಮನ ಬಳಿ ಹೇಳಿದ್ರೆ ಅವ್ರು ನಿನ್ನಪ್ಪನ ಕಳಿಸ್ತಾರೆ' ಎಂದು ಹೇಳುತ್ತಾಳೆ. ಅದಕ್ಕೆ ಸಿಹಿ 'ಹಾಗಿದ್ರೆ ನಾನು ನನ್ನ ಅಮ್ಮನ ಬಳಿ ಅಪ್ಪನ ಕಳಿಸೋಕೆ ಹೇಳ್ತೀನಿ' ಎಂದು ಹೇಳಿ ಖುಷಿಯಾಗುತ್ತಾಳೆ. 

Rama gets angry towords seetha in zee kannada serial SeethaRaama srb
Author
First Published Dec 4, 2023, 7:26 PM IST

ರಾಮ ಕಾರಿನಲ್ಲಿ ಹೋಗುತ್ತಿರುವ ಸೀತಾಳನ್ನು ನೋಡುತ್ತಾನೆ. ನೋಡಿ ಪಕ್ಕದಲ್ಲಿರುವ ಫ್ರೆಂಡ್‌ಗೆ ; ಅವ್ಳು ಸೀತಾ ಅಲ್ವಾ? ಮತ್ತೆ ಆ ಲಾಯರ್ ಜತೆನೇ ಹೋಗ್ತಾ ಇದಾಳೆ' ಎಂದು ಗಾಬರಿಪಟ್ಟು ಹೇಳುತ್ತಾನೆ. ತಕ್ಷಣ ಮೊಬೈಲ್ ಎತ್ತಿಕೊಳ್ಳುವ ರಾಮ ಸೀತಾಳಿಗೆ ಕಾಲ್ ಮಾಡಿ ' ಹಲೋ ಸೀತಾ, ನಿಮ್ ಜತೆ ಸ್ವಲ್ಪ ಮಾತಾಡ್ಬೇಕಿತ್ತು ಎನ್ನಲು ಸೀತಾ 'ನಾನು ಆಚೆ ಇದೀನಿ, ಏನೋ ಕೆಲ್ಸ ಇದೆ' ಎಂದು ಹೇಳುತ್ತಾಳೆ. ಸೀತಾಳ ಮಾತು ಕೇಳಿ ಶಾಕ್ ಆದ ರಾಮ 'ಕಣ್ಣೆದುರೇ ಹೋಗ್ತಾ ಇದ್ರೂ ಇನ್ನೇನೋ ರೀಸನ್ ಹೇಳ್ತಾಳೆ. ಆ ಲಾಯರ್ ಜತೆ ಕೇಸ್ ವಿಚಾರವಾಗಿ ಹೋಗ್ತಾ ಇದೀನಿ ಅಂತ ಹೇಳ್ಬಹುದಾಗಿತ್ತು. ಇನ್ಮುಂದೆ ಸೀತಾ ಜತೆ ಮಾತಾಡೋ ಅಗತ್ಯವಿಲ್ಲ ಅಂದ್ಕೋತೀನಿ' ಎಂದು ಬೇಸರ ವ್ಯಕ್ತಪಡಿಸುತ್ತಾನೆ. 

ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ; ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್‌ ಹೀಟ್ ಶುರು!

ಇತ್ತ ಸಿಹಿ ತನ್ನ ಅಜ್ಜಿಯ ಬಳಿ 'ನನ್ನ ಅಪ್ಪ ಎಲ್ಲಿದಾರೆ' ಎಂದು ಕೇಳಲು ಅಜ್ಜಿ 'ನೀನು ನಿನ್ನ ಅಮ್ಮನ ಬಳಿ ಹೇಳಿದ್ರೆ ಅವ್ರು ನಿನ್ನಪ್ಪನ ಕಳಿಸ್ತಾರೆ' ಎಂದು ಹೇಳುತ್ತಾಳೆ. ಅದಕ್ಕೆ ಸಿಹಿ 'ಹಾಗಿದ್ರೆ ನಾನು ನನ್ನ ಅಮ್ಮನ ಬಳಿ ಅಪ್ಪನ ಕಳಿಸೋಕೆ ಹೇಳ್ತೀನಿ' ಎಂದು ಹೇಳಿ ಖುಷಿಯಾಗುತ್ತಾಳೆ. ಅತ್ತ ರಾಮ ಮಾತ್ರ ಫುಲ್ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾನೆ. ರೋಡಿನಲ್ಲಿ ಹೋಗುತ್ತಿರುವ ರಾಮ ಅಲ್ಲೊಂದು ಕಡೆ ಸೀತಾ ಲಾಯರ್ ಜತೆ ಕಾರಿನಲ್ಲಿ ಕುಳಿತು ಹೋಗುತ್ತಿರುವುದನ್ನು ನೋಡಿ ಅಕ್ಷರಶಃ ಕಂಗಾಲಾಗಿದ್ದಾನೆ. ತಾನು ಅವಳನ್ನು ಲಾಯರ್ ಕೈಯಿಂದ ಸೇವ್ ಮಾಡಬೇಕೆಂದು ಪ್ರಯತ್ನಿಸುತ್ತಿದ್ದರೆ ಸೀತಾ ಅವನ ಜತೆಯಲ್ಲಿ ಹೋಗುತ್ತಿದ್ದಾಳೆ ಎಂಬ ಸಂಗತಿ ಅವನನ್ನು ತೀವ್ರವಾಗಿ ಕಾಡತೊಡಗಿದೆ. ಇದು ಸೀತಾರಾಮ ಸೀರಿಯಲ್‌ ಪ್ರೋಮೋದ ದೃಶ್ಯ. 

ಫಸ್ಟ್‌ ನೈಟ್ ಮಂಚದ ಮೇಲೆ ಆಕಾಶ್ ಜತೆ ಮೈಮರೆತ ಪುಷ್ಪಾ; ಸಡನ್ನಾಗಿ ಆಕಾಶ್ ಮಾಡಿದ್ದು ನೋಡಿ ಶಾಕ್!

ರಾಮ ಸೀತಾಳನ್ನು ಭೇಟಿಯಾಗಿ ಲಾಯರ್ ಕಪಿಮುಷ್ಟಿಯಿಂದ ಅವಳನ್ನು ಬಿಡಿಸಿಕೊಂಡನಾ? ಸಿಹಿ ಅವಳಮ್ಮನ ಬಳಿ ಹೇಳಿಕೊಂಡು ತನ್ನ ಅಪ್ಪನನ್ನು ನೋಡಿದಳಾ? ಈ ಪ್ರಶ್ನೆಗಳಿಗೆಲ್ಲ ಉತ್ತರ ಬೇಕು ಎಂದರೆ ಇಂದಿನ ಸಂಚಿಕೆ ನೋಡಬೇಕು. ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಮೂಡಿ ಬರುತ್ತಿದೆ 'ಸೀತಾರಾಮ' ಸೀರಿಯಲ್. ಶುರುವಿನಿಂದಲೂ ಸೀರಿಯಲ್ ಕಥೆ ಸಾಕಷ್ಟು ಕುತೂಹಲ ಕೆರಳಿಸುತ್ತಿದ್ದು ಕಾಲ ಕಳೆದಂತೆ ವೀಕ್ಷಕರು ಈ ಸೀರಿಯಲ್ ಕಥೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಮಾಡತೊಡಗಿದ್ದಾರೆ. 

Follow Us:
Download App:
  • android
  • ios