Asianet Suvarna News Asianet Suvarna News

ಚಾರ್ಲಿ ಬಿಗ್ ಬಾಸ್‌ಗೆ ಹೋಗ್ಬಾರ್ದು ಅನ್ನೋದು ರಕ್ಷಿತ್ ಶೆಟ್ಟಿ ನಿರ್ಧಾರ; ಹರಿದು ಬಂತು ಪತ್ರಗಳು!

ಚಾರ್ಲಿ ಬರ್ತಾನೆ ಬರ್ತಾನೆ ಎಂದು ಕಾದು ಕುಳಿತ ವೀಕ್ಷಕರಿಗೆ ಬೇಸರದ ಸುದ್ದಿ. ರಕ್ಷಿತ್ ಶೆಟ್ಟಿ ಅಂತ ಹೇಳಿದ್ದು ಯಾಕೆ?

Rakshit shetty says no to charlie entering bigg boss house BBK10 vcs
Author
First Published Nov 24, 2023, 4:09 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ವಿಶೇಷ ಅತಿಥಿಯಾಗಿ 777 ಚಾರ್ಲಿ ಚಿತ್ರದ ಶ್ವಾನ ಚಾರ್ಲಿ ಆಗಮಿಸಲಿದ್ದಾರೆ ಅನ್ನೋ ಸುದ್ದಿ ದೊಡ್ಡದಾಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದ್ರೆ ಚಾರ್ಲಿನೇ ಮೊದಲು ಮನೆ ಪ್ರವೇಶ ಮಾಡುವ ಅತಿಥಿ ಎಂದು ಅನೌನ್ಸ್ ಕೂಡ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ನಿರ್ಧಾರ ಬದಲಾಯಿಸಿದ್ದು ಯಾಕೆ ಎಂದು ನೆಟ್ಟಿಗರು ಆಗಾಗ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಈ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. 

'ಚಾರ್ಲಿ ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಾನೆ ಅಂತ ಪ್ರಚಾರ ಆದ ತಕ್ಷಣ ನಮಗೆ ಸುಮಾರು ಕಡೆಯಿಂದ ಮೇಲ್ ಬರಲು ಶುರುವಾಗಿತ್ತು. ಚಾರ್ಲಿ ಸಿನಿಮಾ ರಿಲೀಸ್ ಸಮಯದಲ್ಲಿ ಪ್ರಾಮಿಸ್ ಮಾಡಿದ್ದೆ...ಹೇಗೆ ನನ್ನನ್ನು ಕರೆಯುತ್ತಾರೆ ಕಾರ್ಯಕ್ರಮಗಳಿಗೆ ಹಾಗೆ ಚಾರ್ಲಿನೂ ಕರೆಯಲು ಶುರು ಮಾಡುತ್ತಾರೆಂದು. ಹೀಗಾಗಿ ಸಿನಿಮಾ ಆದ್ಮೇಲೆ ಎಲ್ಲೂ ಚಾರ್ಲಿನ ಉಪಯೋಗಿಸುವುದಿಲ್ಲ ಅಂತ ಪ್ರಾಮಿಸ್ ಮಾಡಿದ್ದೆ. ಅದರೆ ಒಂದು ಅವಾರ್ಡ್ ಕಾರ್ಯಕ್ರಮಕ್ಕೆ ಮೊದಲ ಸಲ ಅವಾರ್ಡ್ ಸ್ವೀಕರಿಸಲು ಕಳುಹಿಸಿದ್ದೆ' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಬಿಗ್​ಬಾಸ್​ನಲ್ಲಿ ಮೊದಲ ಸ್ಪರ್ಧಿಯೇ ಮಿಸ್ಸಿಂಗ್​! ಉಫ್​... ನಿಮ್​ ಸಹವಾಸವೇ ಬೇಡ ಅಂದಳಾ ಚಾರ್ಲಿ?

'ಈಗ ಎರಡು ದಿನ ಬಿಗ್ ಬಾಸ್ ಮನೆಯಲ್ಲಿ ಚಾರ್ಲಿ ಇರ್ತಾನೆ ಅಂತ ತಕ್ಷಣ ಜನರು ಸಿಟ್ಟು ಮಾಡಿಕೊಂಡು ಮೇಲ್ ಮಾಡಿದ್ದರು. ನಾವೆಲ್ಲರೂ ಕುಳಿತುಕೊಂಡು ಚರ್ಚೆ ಮಾಡಿ ಸರಿ ಸಿನಿಮಾ ಆಯ್ತು ಚಾರ್ಲಿನ ಫ್ರೀ ಆಗಿ ಬಿಡಬೇಕು ಪದೇ ಪದೇ ಟಿವಿ ಮತ್ತು ಮಾಧ್ಯಮಗಳ ಎದುರು ಕರೆದುಕೊಂಡು ಹೋಗಬಾರದು ಎಂದು ಬಿಗ್ ಬಾಸ್ ಬೇಡ ಎಂದು ನಿರ್ಧಾರ ಮಾಡಿದೆ' ಎಂದಿದ್ದಾರೆ ರಕ್ಷಿತ್.

ಯಾರ ಸಿಂಪತಿನೂ ಬೇಡ, ಜೋಪಡಿಯಲ್ಲಿ ಜೀವನ ಮಾಡೋಕೆ ರೆಡಿ: ಮಾನ್ವಿತಾ ಕಾಮತ್ ಭಾವುಕ

ಒಂದು ವೇಳೆ ಬೆಳಗಿನ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರಾದರೂ ಮಲಗಿದರೆ ಅವರಿಗೆ ಚಾರ್ಲಿ ಬೊಗಳುವ ಧ್ವನಿ ಹಾಕಿ ಎಬ್ಬಿಸಲಾಗುತ್ತದೆ. ಪುಟ್ಟ ಮಕ್ಕಳು ಬಿಗ್ ಬಾಸ್ ಮನೆಯಲ್ಲಿ ಚಾರ್ಲಿ ನೋಡುವುದನ್ನು ಮಿಸ್ ಮಾಡಿಕೊಳ್ಳುತ್ತಾರೆ. ಸಂಗೀತಾ ಶೃಂಗೇರ್‌ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಚಾರ್ಲಿ ಜೊತೆ ಇದ್ದ ಕಾರಣ ಬಹುಷ ಅವರೊಟ್ಟಿಗೆ ಎಂಟ್ರಿ ಕೊಡಬಹುದು ಅಂದುಕೊಂಡಿದ್ದ ಜನರಿಗೆ ಈಗ ಕೊಂಚ ಬೇಸರ ಆಗಿದೆ. ಫಿನಾಲೆ ಟ್ರೋಫಿ ಹಿಡಿಯುವ ದಿನವಾದರೂ ಚಾರ್ಲಿ ಬರಲಿ ಎಂದು ವಿಶ್ ಮಾಡುತ್ತಿದ್ದಾರೆ. 

Follow Us:
Download App:
  • android
  • ios