ಅರೆಸ್ಟ್ ಆಗೋ ಭಯದಲ್ಲಿದ್ರೂ ರಾಖಿಗೆ ಬಿಗ್ಬಾಸ್ದ್ದೇ ಚಿಂತೆ- ನಿನ್ ತಟ್ಟೆಯಲ್ಲೇ ಇಲಿ ಬಿದ್ದಿದ್ಯಲ್ಲಾ ತಾಯಿ ಎಂದ ನೆಟ್ಟಿಗರು
ನಟಿ ರಾಖಿ ಸಾವಂತ್ ಬಿಗ್ಬಾಸ್ನ ಅಂಕಿತಾ ಲೋಖಂಡೆ ಅತ್ತೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರ ವಿಡಿಯೋ ವೈರಲ್ ಆಗಿದ್ದು, ನಟಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ರಾಖಿ ಸಾವಂತ್ ಸದ್ಯ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಪತಿ ಆದಿಲ್ ಖಾನ್ ದುರ್ರಾನಿಯವರ ಖಾಸಗಿ ವಿಡಿಯೋ ಲೀಕ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಕ್ಷಣದಲ್ಲಿಯೂ ಇವರನ್ನು ಪೊಲೀಸರು ಅರೆಸ್ಟ್ ಮಾಡುವ ಸಾಧ್ಯತೆ ಇದೆ. ಆಗಸ್ಟ್ 25, 2023 ರಂದು, ರಾಖಿ ಆದಿಲ್ ಅವರ ಖಾಸಗಿ ವಿಡಿಯೋವನ್ನು ವೈರಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆದಿಲ್ ಖಾನ್ ದೂರು ದಾಖಲಿಸಿದ್ದರು. ಇದರಲ್ಲಿ ತಮ್ಮ ತಪ್ಪು ಏನೂ ಇಲ್ಲ ಎಂದು ರಾಖಿ ಹೇಳಿದ್ದರು. ಆದರೆ ತನಿಖೆಯ ನಂತರ ಆಕೆ ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಿರುವ ವಿಡಿಯೋಗಳು ಪೊಲೀಸರ ಕೈ ಸೇರಿವೆ. ಈ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿರುವ ಕೋರ್ಟ್, ರಾಖಿ ಸದ್ಯ ತಪ್ಪಿತಸ್ಥರು ಎಂದು ಅಭಿಪ್ರಾಯ ಪಟ್ಟಿದೆ. ಪತಿ ತಮ್ಮ ವಿರುದ್ಧ ದೂರು ದಾಖಲು ಮಾಡುತ್ತಿದ್ದಂತೆಯೇ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂದುಕೊಂಡಿದ್ದ ರಾಖಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಇದೀಗ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿರುವ ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಅವರು ಅರೆಸ್ಟ್ ಆಗುವ ಸಾಧ್ಯತೆ ಇದೆ.
ಪರಿಸ್ಥಿತಿ ಹೀಗಿದ್ದರೂ ರಾಖಿ ಸಾವಂತ್ಗೆ ಈಗ ಬಿಗ್‌ಬಾಸ್ ಚಿಂತೆ ಶುರುವಾಗಿದೆ. ತನ್ನದೇ ಮನೆ ಹೊತ್ತಿ ಉರಿಯುತ್ತಿರುವಾಗ, ಬೇರೊಬ್ಬರ ಮನೆ ಸರಿ ಮಾಡಲು ಹೋಗಿದ್ದಾರೆ. ಅಷ್ಟಕ್ಕೂ ಇವರ ಚಿಂತೆ ಇರುವುದು ಹಿಂದಿ ಬಿಗ್ಬಾಸ್ನ ಮತ್ತೋರ್ವ ಡ್ರಾಮಾ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಅಂಕಿತಾ ಲೋಖಂಡೆ ಪರವಾಗಿ. ನಟ ಸುಶಾಂತ್ ಸಿಂಗ್ ಅವರ ಪ್ರೇಯಸಿಯಾಗಿದ್ದ ಅಂಕಿತಾ ಲೋಖಂಡೆ ಮೊದಲಿನಿಂದಲೂ ಸುದ್ದಿಯಲ್ಲಿ ಇರುವವರೇ. ಇದೀಗ ಬಿಗ್‌ಬಾಸ್ ಮನೆಗೆ ಹೋದ ಮೇಲಂತೂ ಅವರು ಮತ್ತು ಪತಿ ವಿಕ್ಕಿ ಜೈನ್ ಡ್ರಾಮಾ ಅಷ್ಟಿಷ್ಟಲ್ಲ. ಸುಶಾಂತ್ ಸಿಂಗ್ಗೆ ಕೈಕೊಟ್ಟವರು ಎಂದೇ ಖ್ಯಾತಿ ಪಡೆದಿರುವ ಅಂಕಿತಾ ನಂತರ ವಿಕ್ಕಿ ಜೈನ್ ಅವರನ್ನು ಮದುವೆಯಾಗಿದ್ದು, ಈ ಜೋಡಿ ಬಿಗ್‌ಬಾಸ್ 17ನ ಒಳಗೆ ಹೋಗಿದೆ. ಪ್ರತಿದಿನವೂ ಹಲ್ಚಲ್ ಸೃಷ್ಟಿಸುವ ಮೂಲಕ ಅಸಭ್ಯ, ಅಶ್ಲೀಲ ವರ್ತನೆಗಳಿಂದ ಬಿಗ್ಬಾಸ್ನ ಟಿಆರ್ಪಿ ಹೆಚ್ಚಿಸುತ್ತಿದೆ. ಈ ಸಲದ ಹಿಂದಿ ಬಿಗ್ ಬಾಸ್ ಉಳಿದ ಸೀಸನ್ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ ಕಾರಣ ಇವರಿಬ್ಬರ ಕಚ್ಚಾಟ. ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡುತ್ತಿದ್ದಾರೆ. ಒಂದು ಹಂತದಲ್ಲಿ ಅಂಕಿತಾ ಪತಿಯ ಮೇಲೆ ಚಪ್ಪಲಿ ಕೂಡ ಎಸೆದಿದ್ದಾರೆ.
ಮಗನ ಹೊಡೆದು, ಚಪ್ಪಲಿ ಎಸೆದ ಬಿಗ್‌ಬಾಸ್ ಡ್ರಾಮಾಕ್ವೀನ್ ಅಂಕಿತಾ ಲೋಖಂಡೆ ಅತ್ತೆಯಿಂದ ಶಾಕಿಂಗ್ ಹೇಳಿಕೆ!
ಇದನ್ನು ಸಹಿಸದ ವಿಕ್ಕಿ ಜೈನ್ ಅವರ ತಾಯಿ ರಂಜನಾ ಅವರು ತಮ್ಮ ಸೊಸೆಯ ಕುರಿತು ಕೆಲವೊಂದು ಮಾತುಗಳನ್ನು ಆಡಿಸಿದ್ದರು. ಈ ರೀತಿಯ ವರ್ತನೆಯನ್ನು ಅವರು ಖಂಡಿಸಿದ್ದರು. ಪತಿಯ ಮೇಲೆ ಚಪ್ಪಲಿ ಎಸೆತ, ಅವರನ್ನು ಪದೇ ಪದೇ ಹೊಡೆಯುವುದು, ಬೈಯುವುದು ಇವೆಲ್ಲವನ್ನೂ ರಂಜನಾ ಖಂಡಿಸಿದ್ದರು. ಇದೇ ವೇಳೆ, ಪದೇ ಪದೇ ಅಂಕಿತಾ ಸುಶಾಂತ್ ಸಿಂಗ್ ಅವರ ಹೆಸರನ್ನು ಪ್ರಚಾರಕ್ಕಾಗಿ ಬಳಸುತ್ತಿರುವ ಬಗ್ಗೆ ರಂಜನಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಂಕಿತಾ ಸುಶಾಂತ್ ಹೆಸರನ್ನು ಬಿಗ್ಬಾಸ್ನಲ್ಲಿ ಸಿಂಪಥಿ ಗಳಿಸಲು ಬಳಸುತ್ತಿರುವುದು ಸರಿಯಾದ ಕ್ರಮವಲ್ಲ. ಈಗ ಅವರಿಗೆ ವಿಕ್ಕಿ ಜೊತೆ ಮದುವೆಯಾಗಿದೆ. ಹೀಗಿರುವಾಗ ಸತ್ತವನ ಹೆಸರನ್ನು ಪದೇ ಪದೇ ಬಳಸಿ ಸಿಂಪಥಿ ಗಳಿಸುವುದರಲ್ಲಿ ಅರ್ಥವಿಲ್ಲ. ಸುಶಾಂತ್ ಬದುಕಿದ್ದಾಗ ಎಲ್ಲರ ಪ್ರೀತಿ ಗಳಿಸಿದ ವ್ಯಕ್ತಿ. ಆದರೆ ಇದೀಗ ಇವಳು ಹೀಗೆ ಅವನ ಹೆಸರನ್ನು ಬಳಸುತ್ತಿರುವುದು ಮುಜುಗರ ತರುತ್ತಿದೆ ಎಂದಿದ್ದರು.
ತಮ್ಮ ಸೊಸೆಯ ಪರವಾಗಿ ಹೀಗೆ ಹೇಳುತ್ತಿರುವ ಕಾರಣ, ರಾಖಿ ಸಾವಂತ್ ರಂಜನಾ ಅವರಿಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೀಗೆ ಸೊಸೆಯ ವಿರುದ್ಧ ಮಾತನಾಡುವುದು ಸರಿಯಲ್ಲ. ಬಾಯಿಗೆ ಬಂದ ಹಾಗೆ ಸೊಸೆಯ ವಿರುದ್ಧ ಹೇಳುತ್ತಿದ್ದೀರಿ. ನೀವು ಏನೇ ಅಂದರೂ ಬಿಗ್‌ಬಾಸ್ ಗೆಲ್ಲುವುದು ಅಂಕಿತಾನೇ ಎಂದಿದ್ದಾರೆ ರಾಖಿ. ಶಾಂತಿಯಿಂದ ಇದ್ದು, ಚೆನ್ನಾಗಿ ಊಟ-ತಿಂಡಿ ಮಾಡಿ ನಿದ್ದೆ ಮಾಡಿ. ಅದನ್ನು ಬಿಟ್ಟು ಸೊಸೆಯ ವಿಷಯಕ್ಕೆ ತಲೆ ಹಾಕಬೇಡಿ. ಇದು ನಿಮಗೆ ಸರಿಯಲ್ಲ. ಆಕೆಗೆ ಬುದ್ಧಿ ಹೇಳಲು ಹೋಗುವುದು ಸರಿಯಲ್ಲ ಎಂದು ರಂಜನಾ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರಿಂದಾಗಿ ನೆಟ್ಟಿಗರು ರಾಖಿ ಸಾವಂತ್ಗೆ ಛೀಮಾರಿ ಹಾಕುತ್ತಿದ್ದು, ನೀನು ಮೊದಲು ನಿಮ್ಮ ಸಂಸಾರ ಸರಿ ಮಾಡ್ಕೋ, ಆಮೇಲೆ ಬೇರೊಬ್ಬರ ಸಂಸಾರಕ್ಕೆ ತಲೆ ಹಾಕು ಎನ್ನುತ್ತಿದ್ದಾರೆ. ಪತಿಯನ್ನು ಹೀನಾಯವಾಗಿ ಕಾಣುವ ಅಂಕಿತಾ ಪರ ವಹಿಸಿಕೊಂಡು ಬರುವುದನ್ನು ನೋಡಿದರೆ ನಿನ್ನ ಬುದ್ಧಿ ಎಷ್ಟಿದೆ ಎಂದು ತಿಳಿಯುತ್ತದೆ ಎನ್ನುತ್ತಿದ್ದಾರೆ.
ಗಂಡನ ಖಾಸಗಿ ವಿಡಿಯೋ ಬಹಿರಂಗಗೊಳಿಸಿದ ರಾಖಿ ಸಾವಂತ್ಗೆ ಕೋರ್ಟ್ ಶಾಕ್: ಯಾವುದೇ ಕ್ಷಣ ಅರೆಸ್ಟ್!