'ರಾಧಾ ಕಲ್ಯಾಣ' ಖ್ಯಾತಿಯ ಚೈತ್ರಾ ರೈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಂತಸದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಚೈತ್ರಾ ರೈ ಜುಲೈ ತಿಂಗಳಿನಲ್ಲಿ ತಾಯಿ ಆಗುತ್ತಿರುವ ವಿಚಾರವನ್ನು ಫೋಟೋ ಶೂಟ್ ಮಾಡಿಕೊಂಡ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.
'ಇಂದು ಮಧ್ಯಾಹ್ನ ದೇವರು ನಮಗೆ ಹೆಣ್ಣು ಮಗುವನ್ನು ಕರುಣಿಸಿದ್ದಾನೆ. ನಾನೆಂದೂ ಜೀವನದಲ್ಲಿ ಇಷ್ಟು ಭಾವುಕಳಾಗಿರಲಿಲ್ಲ. ನನ್ನ ಪತಿ ಪ್ರಶಾಂತ್ ಮತ್ತು ನಮ್ಮ ಕುಟುಂಬದವರು ತುಂಬಾ ಸಂತೋಷದಲ್ಲಿದ್ದಾರೆ. ನಿಮ್ಮಲ್ಲರ ಪ್ರೀತಿ ಮತ್ತು ಆಶೀರ್ವಾದಗಳಿಗೆ ಧನ್ಯವಾದಗಳು,' ಎಂದು ಚೈತ್ರಾ ಬರೆದುಕೊಂಡಿದ್ದಾರೆ. ಪಿಂಕ್ ಬಣ್ಣದ ಗೌನ್ ಧರಿಸಿರುವ ಚೈತ್ರಾ 'It's a girl' ಎನ್ನುವ ಬೋರ್ಡ್ ಹಿಡಿದು ನಿಂತಿರುವ ಪೋಟೋ ಅಪ್ಲೋಡ್ ಮಾಡಿದ್ದಾರೆ.
'ರಾಧಾ ಕಲ್ಯಾಣ' ನಟಿ ಚೈತ್ರಾ ರೈ ಅದ್ಧೂರಿ ಸೀಮಂತ ಫೋಟೋ!
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಚೈತ್ರಾ ವಿಭಿನ್ನ ಶೈಲಿಯ ಫೋಟೋಶೂಟ್‌ಗಳನ್ನು ಮಾಡಿಸಿದ್ದಾರೆ. ಅಲ್ಲದೇ ಬೇಬಿ ಬಂಪ್ ಹಿಡಿದು ಡಿಫರೆಂಟ್ ಇನ್‌ಸ್ಟಾಗ್ರಾಂ ರಿಲೀಸ್ ಮಾಡಿದ್ದಾರೆ. ಚೈತ್ರಾ ಅವರ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮವೂ ಅದ್ಧೂರಿಯಾಗಿ ಮಾಡಲಾಗಿತ್ತು. ಕುಸುಮಾಂಜಲಿ, ಬೊಂಬೆಯಾಟವಯ್ಯ, ಬಣ್ಣದ ಬುಗುರಿ, ಪೌರ್ಣಮಿ, ನಾಗಮಣಿ ಹಾಗೂ ಯುಗಾದಿ ಧಾರಾವಾಹಿಯಲ್ಲಿ ಚೈತ್ರಾ ಅಭಿನಯಿಸಿದ್ದಾರೆ.
ತಾಯಿ ಮತ್ತು ಮಗು ಇಬ್ಬರೂ ಅರೋಗ್ಯವಾಗಿದ್ದು, ಅಭಿಮಾನಿಗಳು ಹಾಗೂ ಆಪ್ತರು ಶುಭಹಾರೈಸುತ್ತಿದ್ದಾರೆ.
