ಪುಟ್ಟಕ್ಕನ ಮಕ್ಕಳು ಟ್ವಿಸ್ಟ್! ಸ್ನೇಹಾ ಆತ್ಮ ಪ್ರತ್ಯಕ್ಷ... ಕಂಠಿ ಬದುಕಲ್ಲಿ ಮತ್ತೆ ಎಂಟ್ರಿ?
ಸ್ನೇಹಾ ಸತ್ತುಹೋಗಿದ್ದಾಳೆ. ಆದರೆ ಅವಳ ಹೃದಯ ಈ ಸ್ನೇಹಾಳಲ್ಲಿ ಜೀವಂತ ಆಗಿದೆ. ಕಂಠಿಯ ಬದುಕಲ್ಲಿ ಮತ್ತೆ ಸ್ನೇಹಾ ಎಂಟ್ರಿ ಕೊಡ್ತಾಳಾ?
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಸತ್ತಿದ್ದಾಳೆ. ಅತ್ತ ಸಹನಾ ವಾಪಸ್ ಆಗಿದ್ದಾಳೆ. ಇವೆರಡನ್ನೂ ಪುಟ್ಟಕ್ಕನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸ್ನೇಹಾ ಸತ್ತಿರೋ ವಿಷಯವಂತೂ ಯಾರಿಗೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದರ ನಡುವೆಯೇ, ಸಹನಾ ಬದುಕಿದ್ದರೂ, ಖುದ್ದು ಗಂಡನ ಮದುವೆಯ ದಿನ ಬಂದಿದ್ದರೂ ಗಂಡನ ಮದುವೆಗೆ ಅವಳೇ ಕ್ಯಾಟರಿಂಗ್ ಮಾಡಿದ್ದನ್ನು ಕೇಳಿ ಪುಟ್ಟಕ್ಕನ ಹೃದಯ ಒಡೆದು ಚೂರು ಚೂರಾಗಿದೆ. ಅತ್ತ ಸ್ನೇಹಳಿಗಾಗಿ ಕಂಠಿ ಪರಿತಪಿಸುತ್ತಿದ್ದಾನೆ. ಅವಳು ಬಂದೇ ಬರುತ್ತಾಳೆ ಎಂದು ಕಾಯುತ್ತಿದ್ದಾನೆ. ಊಟ-ನಿದ್ದೆ ಬಿಟ್ಟಿದ್ದಾನೆ. ಸಹನಾ ವಾಪಸ್ ಬಂದಂತೆ, ಸ್ನೇಹಾಳೂ ಬರುತ್ತಾಳೆ ಎನ್ನುವುದು ಅವನ ಕನಸು.
ಆದರೆ ಇದೀಗ ಆ ಸ್ನೇಹಳ ಹೃದಯ ಈ ಸ್ನೇಹಾಳ ಶರೀರ ಸೇರಿದೆ. ಶಸ್ತ್ರಚಿಕಿತ್ಸೆಯ ಮೂಲಕ ಆ ಸ್ನೇಹಾಳ ಹೃದಯವನ್ನು ಈ ಸ್ನೇಹಾಳಿಗೆ ಕಸಿ ಮಾಡಲಾಗಿದೆ. ಇದು ಸಹಜವಾಗಿಯೇ ಕಂಠಿಯ ಬಾಳಲ್ಲಿ ಈ ಸ್ನೇಹಾ ಎಂಟ್ರಿ ಕೊಡುತ್ತಾಳೆ ಎನ್ನುವುದನ್ನು ಊಹಿಸಬಹುದಾಗಿದೆ. ಆದರೆ ಆ ಸ್ನೇಹಾಳಿಗೆ ಈ ಸ್ನೇಹಾ ಸತ್ತ ಸುದ್ದಿ ಗೊತ್ತಿರಲಿಲ್ಲ. ತನ್ನ ಹೃದಯ ಅವಳದ್ದೇ ಎನ್ನುವ ಅರಿವೂ ಅವಳಿಗೆ ಇಲ್ಲ. ಆದರೆ ಆಸ್ಪತ್ರೆಯಿಂದ ಮನೆಗೆ ವಾಪಸಾದ ಮೇಲೆ ಸ್ನೇಹಾ ಸತ್ತಿರೋ ವಿಷಯ ತಿಳಿದು ದುಃಖಿತಳಾಗಿದ್ದಾಳೆ. ಆದರೆ ಸ್ನೇಹಾಳ ಸಾವಿಗೆ ಈ ಸ್ನೇಹಾನೇ ಕಾರಣ ಎಂದು ಕಂಠಿ ರೇಗಾಡಿದ್ದಾನೆ.
ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ
ನೀನು ಅಂದು ಸ್ನೇಹಾಳನ್ನು ತಡೆದಿದ್ದರೆ ಸ್ನೇಹಾ ಸಾಯುತ್ತಿರಲಿಲ್ಲ ಎಂದಿದ್ದಾನೆ. ಇದು ಈ ಸ್ನೇಹಾಳಿಗೆ ತುಂಬಾ ದುಃಖ ತಂದಿದೆ. ಮಲಗಿದಾಗಲೂ ಅದೇ ನೋವಿನಿಂದ ಕಣ್ಣೀರು ಹಾಕಿದ್ದಾಳೆ. ಅಷ್ಟರಲ್ಲಿಯೇ ಅಸಲಿ ಸ್ನೇಹಾಳ ಆತ್ಮ ಅಲ್ಲಿ ಬಂದಿದೆ. ಪುಟ್ಟಕ್ಕನ ಮನೆಯಲ್ಲಿ ಅಳುವಿಗೆ ಜಾಗವಿಲ್ಲ, ನೀನು ಅಳಬಾರದು ಎಂದು ಸಮಾಧಾನ ಮಾಡಿದ್ದಾಳೆ. ಎಷ್ಟೆಂದರೂ ಅವಳ ಹೃದಯ ಇವಳದ್ದೇ ಅಲ್ಲವೆ? ಈಗ ಏನಿದ್ದರೂ ಕಂಠಿ ಮತ್ತು ಈ ಸ್ನೇಹಾಳ ಹೃದಯದ ವಿಷಯ ಶುರುವಾಗಬೇಕಿದೆ.
ಕಂಠಿಯನ್ನು ಈಕೆ ಕೂಡ ಶ್ರೀ ಎಂದೇ ಕರೆಯುತ್ತಿದ್ದಾಳೆ. ಇನ್ನು ಮುಂದೆ ಈ ಸ್ನೇಹಾ ಕಂಠಿಯ ಲೈಫ್ನಲ್ಲಿ ಎಂಟ್ರಿ ಕೊಡುತ್ತಾಳೆ ಎನ್ನುವುದು ದಿಟ. ಆದರೆ ಆ ಸ್ನೇಹಾ ಜಿಲ್ಲಾಧಿಕಾರಿಯಾಗಿ ಮೆರೆದವಳು. ಗಂಡನಿಗೆ ಅಕ್ಷರಾಭ್ಯಾಸ ಮಾಡಿಸಿದವಳು. ಆಕೆಯ ಮೇಲೆ ಅದಮ್ಯ ಪ್ರೀತಿ ಇಟ್ಟುಕೊಂಡಿರೋ ಕಂಠಿ ಈ ಸ್ನೇಹಾಳಿಗೆ ಒಲಿಯುತ್ತಾನಾ? ಇವರಿಬ್ಬರ ಲವ್ ಸ್ಟೋರಿ ಹೇಗಿರಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
ಸತ್ತು ಮಲಗಿದ್ರೂ ಕಣ್ಣೀರು ತಡೆಯಲಾಗಲಿಲ್ಲ: ಶೂಟಿಂಗ್ನಲ್ಲಿ ನಡೆದ ಆ ಘಟನೆ ನೆನಪಿಸಿಕೊಂಡ ನಟಿ ಸಂಜನಾ