ಪತಿ, ಮಗನ ಜೊತೆ ರಜೆ ಎಂಜಾಯ್​ ಮಾಡ್ತಿರೋ ಪುಟ್ಟಕ್ಕನ ಮಕ್ಕಳು 'ಕಿರಿಕ್​ ರಾಜೇಶ್ವರಿ'!

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವಿಲನ್​ ಪಾತ್ರಧಾರಿಯಾಗಿರುವ ರಾಜೇಶ್ವರಿಯವರು ಪತಿ ಮತ್ತು ಮಗನ ಜೊತೆ ರಜೆ ಎಂಜಾಯ್​ ಮಾಡ್ತಿದ್ದು, ಅದರ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. 
 

Puttakkana Makkalu Rajeshwari  enjoying holiday with   family suc

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಟಿಆರ್​ಪಿಯಲ್ಲಿಯೂ ಸದಾ ಟಾಪೆಸ್ಟ್​ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಗಂಡ ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ  ಸಹನಾ,  ಸ್ನೇಹಾ ಮತ್ತು  ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್​ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದ್ದು ಟಿಆರ್​ಪಿಯಲ್ಲಿಯೂ ಮುಂದಿದೆ. ಇದೀಗ ಧಾರಾವಾಹಿ ಕುತೂಹಲ ಹಂತಕ್ಕೆ ತಲುಪಿದ್ದು, ಎರಡನೆಯ ಮಗಳು ಸ್ನೇಹಾ ಎಂಬ ಗಟ್ಟಿಗಿತ್ತಿಯ ಮದುವೆಯ ಕೋಲಾಹಲದ ವರೆಗೆ ಬಂದು ನಿಂತಿದೆ.

ಇದಕ್ಕೆ ಪುಟ್ಟಕ್ಕ ಹಾಗೂ ಆಕೆಯ ಮಕ್ಕಳಂತೆಯೇ ಹೈಲೈಟ್​ ಆಗಿರುವ ಕ್ಯಾರೆಕ್ಟರ್​ ಎಂದರೆ ಅದು ವಿಲನ್​ ರಾಜೇಶ್ವರಿಯದ್ದು. 'ಕುಣಿಯೋಣು ಬಾರಾ' ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಇವರು, ಪುಟ್ಟಕ್ಕನ ಗಂಡನ ಎರಡನೆಯ ಪತ್ನಿಯಾಗಿ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಅಂದಹಾಗೆ ಇವರ ಅಸಲಿ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap). ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೆಜ್ಜೆ ಹೆಜ್ಜೆಯ ತನ್ನ ಪತಿಯ ಮೊದಲ ಪತ್ನಿ ಪುಟ್ಟಕ್ಕ ಮತ್ತು ಆಕೆಯ ಮಕ್ಕಳಿಗೆ ಹಿಂಸೆ ಕೊಡುವುದು ಎಂದರೆ ಈ ವಿಲನ್​ ರಾಜೇಶ್ವರಿಗೆ ಸಕತ್​ ಇಷ್ಟ. ರಾಜೇಶ್ವರಿಯಾಗಿ ಪಕ್ಕಾ ಹಳ್ಳಿ ಭಾಷೆಯಲ್ಲಿಯೇ ಮಾತನಾಡುತ್ತಿದ್ದಾರೆ ಹಂಸ.  ಅಷ್ಟರ ಮಟ್ಟಿಗೆ ಈ ಕ್ಯಾರೆಕ್ಟರ್​ಗೆ ಜೀವ ತುಂಬಿದ್ದಾರೆ.  ಯಾರಿಗೂ ಹೆದರದೆ ಜೋರು ಜೋರು ಮಾತಲ್ಲಿ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡು, ಊರವರ ಬಳಿಯೂ ಶಾಪ ಹಾಕಿಸಿಕೊಳ್ಳುವಂತ ಕ್ಯಾರೆಕ್ಟರ್ ಇವರದ್ದು.

ಹೊಸ ಲುಕ್​ನಲ್ಲಿ 'ಪುಟ್ಟಕ್ಕನ ಮಕ್ಕಳು' ವಿಲನ್​ ರಾಜೇಶ್ವರಿ: ಸೋ ಸ್ವೀಟ್​, ನಮ್​ ಕ್ರಷ್​ ಎಂದ ಫ್ಯಾನ್ಸ್​ 
 
ಆದರೆ ಇವೆಲ್ಲಾ ಧಾರಾವಾಹಿ ಆಯ್ತು. ಆದರೆ ಅಸಲಿ ಜೀವನ ಈ ಕಿರಿಕ್​ ರಾಜೇಶ್ವರಿ ಅರ್ಥಾತ್​ ಹಂಸ ಕಿರಿಕ್​ ಅಲ್ಲ. ಅವರು  ಶೂಟಿಂಗ್‌ ಬಿಡುವಿನಲ್ಲಿ ಫ್ಯಾಮಿಲಿ ಜತೆಗೆ ಒಂದಷ್ಟು ಸಮಯ ಕಳೆಯುತ್ತಿದ್ದು, ಅದರನ್ನು ಇನ್​ಸ್ಟಾಗ್ರಾಮ್​ನಲ್ಲಿ (Instagram) ಶೇರ್​ ಮಾಡಿಕೊಂಡಿದ್ದಾರೆ. ಪತಿ ಮತ್ತು ಮಗನ ಜೊತೆ ಒಂದಿಷ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಅದು ಸಕತ್​ ವೈರಲ್​ ಆಗುತ್ತಿದೆ. ಪುಟ್ಟಕ್ಕನ ಮಕ್ಕಳು ಶೇಡ್​ನಿಂದ ಈ ಫೋಟೋಗಳಲ್ಲಿ ತುಂಬಾ ಡಿಫರೆಂಟ್​ ಆಗಿ ಕಾಣಿಸೋ ಹಂಸ ಅವರ ಫೋಟೋಗಳಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅಪ್ಪ-ಅಮ್ಮನಿಗಿಂತ ಮಗನೇ ಸಕತ್​ ಎತ್ತರವಾಗಿ ಕಾಣಿಸುತ್ತಿದ್ದು, ಅವರ ಫ್ಯಾಮಿಲಿಯ ಬಗ್ಗೆ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. 

ಅಂದಹಾಗೆ ಹಂಸ ಅವರು ಫಿಟ್​ನೆಸ್​ಗೆ ಸಕತ್​ ಮಹತ್ವ ಕೊಡುವವರು.  ಅದನ್ನು ಅವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿಯೂ  ಹೇಳಿಕೊಂಡಿದ್ದರು. ಕೊರೋನಾ ಟೈಂನಲ್ಲಿ  ಜಿಮ್‌ ಮುಚ್ಚಿದ್ದಾಗ ಅದನ್ನು ಮಿಸ್​ ಮಾಡಿಕೊಂಡಿದ್ದರೂ, ಮನೆಯಲ್ಲಿ ವರ್ಕ್​ಔಟ್​ ಮಾಡುವುದಾಗಿ ಹೇಳಿಕೊಂಡಿದ್ದರು.  ಅಂದಹಾಗೆ ಹಂಸ ಅವರು,  ನಾರಾಯಣ್ ಬೆಣ್ಣೆ ಶಾಂತಾ ಎಂಬ ಪಾತ್ರದಲ್ಲಿ ಖ್ಯಾತಿ ಪಡೆದವರು. ಅವರನ್ನು ಈಗಲು ಹಲವರು ಬೆಣ್ಣೆ ಶಾಂತಾ ಎಂದೆ ಕರೆಯುತ್ತಾರೆ. ಪುಟ್ಟಕ್ಕನ ಮಕ್ಕಳು ಖ್ಯಾತಿ ಪಡೆದ ಮೇಲೆ ಅವರು ಹೋದಲ್ಲಿ ಬಂದಲ್ಲಿ ರಾಜೇಶ್ವರಿ (Rajeshwari) ಮೇಡಂ ಎನ್ನುತ್ತಿದ್ದರೂ ಇನ್ನು ಕೆಲವರು ಬೆಣ್ಣೆ ಶಾಂತಾ ಎಂದೇ ಕರೆಯುತ್ತಿದ್ದಾರೆ. 
 

 Bhagyalakshmi: ತಾಂಡವ್​ ವಿರುದ್ಧ ಭಾಗ್ಯಾಳ ಮೊದಲ ಹೆಜ್ಜೆ- ಪತ್ನಿ ಹೊಸ ರೂಪ ನೋಡಿ ಶಾಕ್​!

Latest Videos
Follow Us:
Download App:
  • android
  • ios