ಪುಟ್ಟಕ್ಕನ ಮಕ್ಕಳು ಕಂಠಿ ಕಮಾಲ್​! ಯಶ್​ಗೆ ನಾನೇ ಡಾನ್ಸ್​ ವಿಡಿಯೋ ತೋರಿಸ್ತೀನಿ ಎಂದ ಶಿವಣ್ಣ

ಡಾನ್ಸ್​ ಕರ್ನಾಟಕ ಡಾನ್ಸ್​ನಲ್ಲಿ ಪುಟ್ಟಕ್ಕನ ಮಕ್ಕಳು ಕಂಠಿ ಉರ್ಫ್​ ಧನುಷ್​ ಅವರು ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ವಾಹಿನಿ ಶೇರ್​ ಮಾಡಿರುವ ವಿಡಿಯೋ ಇಲ್ಲಿದೆ ನೋಡಿ...
 

Puttakkana Makkalu Kanthi urf Dhanush danced like Yash in  Dance Karnataka Dance show suc

ಪುಟ್ಟಕ್ಕನ ಮಕ್ಕಳು ಸೀರಿಯಲ್​ ಕಂಠಿ ಅದೃಷ್ಟ ಖುಲಾಯಿಸಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಡಾನ್ಸ್​ ಕರ್ನಾಟಕ ಡಾನ್ಸ್​ ಷೋನಲ್ಲಿ ಕಂಠಿ ಮಾಡಿರುವ ಅದ್ಭುತ ಡಾನ್ಸ್​ ತೀರ್ಪುಗಾರರ ಮನಸ್ಸು ಗೆದ್ದಿದೆ. ಥೇಟ್​ ಯಶ್​ ಅವರಂತೆಯೇ ನೀವು ಡಾನ್ಸ್​ ಮಾಡುತ್ತಿರುವಿರಿ ಎಂದು ಜಡ್ಜ್ಸ್​ ಹಾಡಿ ಹೊಗಳಿದ್ದಾರೆ. ಇದೇ ವೇಳೆ ಆ್ಯಂಕರ್​ ಅನುಶ್ರೀ ಅವರು ಇವರ ಡಾನ್ಸ್​ ಅನ್ನು ಯಶ್​ ಅವರಿಗೆ ತೋರಿಸಬೇಕು ಎಂದಾಗ, ತೀರ್ಪುಗಾರರಾಗಿರುವ ಶಿವರಾಜ್​ ಕುಮಾರ್​ ಅವರು, ಯಶ್​ ಅವರಿಗೆ ನಾನೇ ಫೋನ್​ ಮಾಡಿ ಹೇಳುತ್ತೇನೆ ಎಂದರು.  ಅಂದಹಾಗೆ, ಎಲ್ಲರ ಮನಸ್ಸನ್ನು ಗೆದ್ದು, ಕದ್ದಿರುವ ಕಂಠಿಯ ನಿಜವಾದ ಹೆಸರು ಧನುಷ್​. ಇದೀಗ ಧನುಷ್​ ಅವರು Dance ಕರ್ನಾಟಕ Dance ರಿಯಾಲಿಟಿ ಷೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವಾರ 'Jodi Introduction Round'ನಲ್ಲಿ ಮನಿಷಾ ಅವರ ಜೊತೆ ಸಕತ್​ ರೊಮಾನ್ಸ್​ ಮಾಡಿದ್ದರು. ಈ ಮೂಲಕ ವೇದಿಕೆಯಲ್ಲಿ ಪ್ರೇಮದ ಕಿಚ್ಚು ಹೊತ್ತಿಸಿದ್ದರು. 'ಚೆಂದುಟಿಯ ಪಕ್ಕದಲಿ' ಹಾಡಿನಲ್ಲಿ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ  ಧನುಷ್​ ಅವರು ನಟನೆಗೆ ಮಾತ್ರವಲ್ಲದೇ ಡಾನ್ಸ್​ಗೂ ಸೈ ಎನ್ನುವುದನ್ನು  ಇಲ್ಲಿ ನಿರೂಪಿಸಿದ್ದಾರೆ. ಕಳೆದ ಸಲದಂತೆ ಇವರಿಗೆ ತೀರ್ಪುಗಾರರ ಕಡೆಯಿಂದಲೂ ಈ ಭಾರಿ ಶ್ಲಾಘನೆ ವ್ಯಕ್ತವಾಗಿದೆ. 


ಅಷ್ಟಕ್ಕೂ, ಈ ಬಾರಿಯ ಡಾನ್ಸ್​ ಕರ್ನಾಟಕ ಡಾನ್ಸ್​ (DKD) ಕರ್ನಾಟಕ ಮೂಲೆಮೂಲೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಒಂದೇ ವೇದಿಕೆಯ ಮೇಲೆ ನರ್ತಿಸುವಂತೆ ಮಾಡುವ ಷೋ ಆಗಿದೆ.  ಆದರೆ ಈ ಬಾರಿ ವಿಭಿನ್ನ ಪ್ರಯೋಗ ಮಾಡಲಾಗಿದೆ.  ಈ ಸಲ  ಇಲ್ಲಿ ಬಂದಿರುವ  ಸ್ಪರ್ಧಿಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಕಿರುತೆರೆ, ಹಿರಿತೆರೆ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಸಕತ್​ ಸೌಂಡ್​ ಮಾಡುತ್ತಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗಿದೆ.   ಈ ಬಾರಿ ಆರ್ಯವರ್ಧನ್​ ಗುರೂಜಿ, ಒಳ್ಳೆ ಹುಡುಗ ಎಂದೇ ಹಾಕಿಕೊಳ್ಳುವ ಪ್ರಥಮ್​, ಪುಟ್ಟಕ್ಕನ ಮಕ್ಕಳು ಕಂಠಿ ಅಂದರೆ ಧನುಷ್​,  ಇದೇ ಸೀರಿಯಲ್​ನ ಸಹನಾ ಅಂದರೆ ಅಕ್ಷರ, ಸೀತಾರಾಮ ಸೀರಿಯಲ್​ ಖ್ಯಾತಿಯ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ, ಗಗನ, ರೆಮೊ, ವಿಶ್ವ, ಅಮೃತಧಾರೆ ಜೀವನ್ ಅರ್ಥಾತ್​ ಶಶಿ ಹೆಗ್ಡೆ​ ಮುಂತಾದವರು ಈ ಷೋನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ.  ಸೀತಾರಾಮ ಸೀರಿಯಲ್ ಸಿಹಿ ಅಂದರೆ ರೀತು ಸಿಂಗ್ ಕೂಡ ಸ್ಪರ್ಧಿಸುತ್ತಿದ್ದಾಳೆ​.

ಸದಾ ಕಿತ್ತಾಡುತ್ತಿರೋ ಶ್ರೀರಸ್ತು ಶುಭಮಸ್ತು ವಾರೆಗಿತ್ತಿಯರಿಂದ ಜೇನ ದನಿಯೋಳೆ...ಗೆ ಭರ್ಜರಿ ಸ್ಟೆಪ್​


ಇನ್ನು ಧನುಷ್​ ಕುರಿತು ಹೇಳುವುದಾದರೆ, ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಾಯಕರನ್ನು ನೋಡಿ, ಅವರಂತೆಯೇ ತಾನಾಗಬೇಕು ಎಂಬ ಕನಸು ಕಂಡದ್ದ ಧನುಶ್ ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಆ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದಾಗಲೇ ಧನುಷ್​ ಕೆಲವು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.   ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ನಟಿಸುವುದಕ್ಕೂ ಮುನ್ನ ಇವರು ಧನುಷ್‌, 'ಅನಿರೀಕ್ಷಿತ', '18+2' ಕಿರುಚಿತ್ರಗಳನ್ನು, 'ನನ್ನ ನಗು' ಹಾಡಿನ ಆಲ್ಬಂ ಮಾಡಿದ್ದಾರೆ.  ಚಿಕ್ಕ ವಯಸ್ಸಿನಿಂದಲೂ ನಾಯಕನಾಗಬೇಕು ಎಂಬ ಕನಸು ಕಂಡವರು.  ಕೋಲಾರ ಜಿಲ್ಲೆಯ ಸಂತೆಹಳ್ಳಿ ಇವರ ಊರು. ಧನುಷ್ ಅವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು. ಇತ್ತೀಚೆಗಷ್ಟೇ ಧನುಷ್ ಗೌಡ ಕಾಣಿಸಿಕೊಂಡಿದದ 'ಮನಸೆಲ್ಲಾ ನೀನೇ' ಆಲ್ಬಂ ರಿಲೀಸ್ ಆಗಿತ್ತು.  ಶಿಕ್ಷಣ ಮುಗಿದಿದ್ದೇ ತಡ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕಿದವರು ಇವರು.

ಅಷ್ಟಕ್ಕೂ, ರಿಯಾಲಿಟಿ ಷೋಗಳಲ್ಲಿ ಸಕತ್​ ಕಾಂಪಿಟೇಷನ್​ ಇರುವ ಹಿನ್ನೆಲೆಯಲ್ಲಿ, ವಾಹಿನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ವೀಕ್ಷಕರನ್ನು ಸೆರೆಹಿಡಿದು ಟಿಆರ್​ಪಿ ಗಿಟ್ಟಿಸಿಕೊಳ್ಳುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ, ಹೊಸ ಹೊಸ ಪ್ರಯೋಗಗಳು ಅನಿವಾರ್ಯವಾಗಿದೆ. ಅದೇ ರೀತಿ ಈ ಬಾರಿಯ ಡಾನ್ಸ್​ ಕರ್ನಾಟಕ ಡಾನ್ಸ್​ನಲ್ಲಿ ವಿಭಿನ್ನ ಪ್ರಯೋಗ ಮಾಡಲಾಗುತ್ತಿದೆ.  ಜುಲೈ 20ರಿಂದ ಜೀ ಕನ್ನಡದಲ್ಲಿ ಈ ಷೋ ಆರಂಭವಾಗಿದೆ. ಈ ಬಾರಿಯ ಕುತೂಹಲದ ಸಂಗತಿ ಎಂದರೆ, ಇವರ್ಯಾರೂ ನೃತ್ಯ ಕ್ಷೇತ್ರದಲ್ಲಿ  ಅಷ್ಟು ಎಕ್ಸ್​ಪರ್ಟ್​ ಇಲ್ಲದವರು. ಅವರನ್ನು ಈ ಕಾಂಪಿಟೇಷನ್​ನಲ್ಲಿ ಸ್ಪರ್ಧಿಗಳನ್ನಾಗಿ ಮಾಡಲಾಗಿದೆ.  ಅಂದಹಾಗೆ, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡಾನ್ಸ್​ ಕರ್ನಾಟಕ ಡಾನ್ಸ್​ ಇದಾಗಲೇ ಏಳು ಸೀಸನ್​ಗಳನ್ನು ಮುಗಿಸಿದೆ.  

ಮದುವೆಗೆ ಗಂಡೇ ಬೇಕೆಂದೇನೂ ಇಲ್ಲ, ಮೂರು ಮದ್ವೆಯಾಗಿದ್ದೇನೆ: ಮನದಾಳದ ಮಾತು ತೆರೆದಿಟ್ಟ ರೇಖಾ!

Latest Videos
Follow Us:
Download App:
  • android
  • ios