ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಏಕಕಾಲಕ್ಕೆ ಮೂರು ಮದುವೆ ಆಗುವ ಹಾಗೆ ಕಾಣ್ತಿದೆ. ಹಾಗಾದರೆ ಏನಾಗಬಹುದು? 

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾಳ ನೆನಪಿನಲ್ಲೇ ದಿನ ಕಳೆಯುತ್ತಿರೋ ಕಂಠಿಗೆ ಮರು ಮದುವೆ ಮಾಡಬೇಕು ಅಂತ ಬಂಗಾರಮ್ಮ ಪಣ ತೊಟ್ಟಿದ್ದಾಳೆ. ಇನ್ನೊಂದು ಕಡೆ ಕಾಳಿ-ಸ್ನೇಹಾ ಬಾಂಧವ್ಯ ಹೆಚ್ಚಾಗ್ತಿದೆ. ಇದರ ಜೊತೆಗೆ ಸುಮಾ ಕೂಡ ಮದುವೆ ಆಗುವ ಸಮಯ ಹತ್ತಿರ ಇದೆ. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಮೂರು ಮದುವೆ ಆಗೋ ಟೈಮ್‌ ಹತ್ತಿರ ಬಂದಿದೆ. 

ಕಂಠಿ ಯಾರನ್ನು ಮದುವೆ ಆಗ್ತಾರೆ? 
ಪುಟ್ಟಕ್ಕನ ಎರಡನೇ ಮಗಳು ಸ್ನೇಹಾಳನ್ನು ಕಂಠಿ ಪ್ರೀತಿಸಿ ಮದುವೆಯಾದನು. ಆದರೆ ಸಿಂಗಾರಮ್ಮ ಅವಳನ್ನು ಕೊಲೆ ಮಾಡಿದ್ದಳು. ಸ್ನೇಹಾ ಹೃದಯವನ್ನು ಗಂಗಾಧರ್‌ ಮಗಳು ಸ್ನೇಹಾಗೆ ಹಾಕಲಾಗಿದೆ. ಈ ವಿಷಯ ಇನ್ನೂ ಕಂಠಿಗೆ ಗೊತ್ತಾಗಲಿಲ್ಲ. ತನ್ನ ಮುದ್ದಿನ ಪತ್ನಿ ಸ್ನೇಹಾ ಹೃದಯ ಯಾರ ಬಳಿ ಇದೆ ಅಂತ ಅವನು ಹುಡುಕಾಟದಲ್ಲಿದ್ದಾನೆ. ಮನೆಯಲ್ಲಿ ತಾಯಿ ಇನ್ನೊಂದು ಮದುವೆ ಆಗು ಅಂತ ಎಷ್ಟೇ ಹೇಳಿದರೂ ಕೂಡ ಅವನು ಕೇಳೋಕೆ ರೆಡಿ ಇಲ್ಲ. ಈಗ ಪುಟ್ಟಕ್ಕ ಕೂಡ ತನ್ನ ಅಳಿಯನಿಗೆ ಇದೇ ಮಾತು ಹೇಳ್ತಿದ್ದಾಳೆ. ಪುಟ್ಟಕ್ಕ ಮನೆಗೆ ಆಗಮಿಸಿರೋ ಗಂಗಾಧರ್‌ ಮಗಳು ಸ್ನೇಹಾ ಹಾಗೂ ಕಂಠಿಗೆ ಮದುವೆ ಆಗೋ ಚಾನ್ಸ್‌ ಜಾಸ್ತಿ ಇದೆ!

ಸ್ಮಶಾನದಲ್ಲಿ ಸುತ್ತಾಡಿದ ಬಿಗ್​ಬಾಸ್​ ಹಂಸಾ! ಸಮಾಧಿ ನೋಡುತ್ತಲೇ ಭಾವುಕ ಮಾತು- ನಟಿಗೆ ಏನಾಯ್ತು?

ರಾಧಾಗೆ ಖುಷಿಯೋ ಖುಷಿ! 
ರಾಧಾ ಜೊತೆ ಕಂಠಿ ಮದುವೆ ಮಾಡಬೇಕು ಅಂತ ಬಂಗಾರಮ್ಮ ಪ್ಲ್ಯಾನ್‌ ಮಾಡಿದ್ದಾಳೆ. ಮೊದಲಿನಿಂದಲೂ ಕಂಠಿ ಮೇಲೆ ಕಣ್ಣು ಹಾಕಿದ್ದ ರಾಧಾಗೆ ಈಗ ಸ್ವರ್ಗ ರಪ್ಪನೆ ಪಾಸ್‌ ಆದಂತಿದೆ. ಒಟ್ಟಿನಲ್ಲಿ ಅವಳು ಏನು ಮಾಡ್ತಾಳೋ ಏನೋ!

ಕಾಳಿ-ಸಹನಾ ಮದುವೆ ಆಗ್ತಾರಾ?
ಸಹನಾಗೆ ಈಗಾಗಲೇ ಡಿವೋರ್ಸ್‌ ಆಗಿದೆ. ಪ್ರೀತಿಸಿ ಮದುವೆಯಾದ ಮುರಳಿ ತನ್ನನ್ನು ನಂಬಲಿಲ್ಲ ಅಂತ ಅವಳು ಡಿವೋರ್ಸ್‌ ಕೊಟ್ಟಿದ್ದಾಳೆ. ಸಹನಾಳನ್ನು ಕಾಳಿ ಲವ್ ಮಾಡ್ತಿದ್ದಾನೆ. ಆದರೆ ಅವಳು ಈಗಾಗಲೇ ಕಾಳಿ ಲವ್‌ನ್ನು ತಿರಸ್ಕರಿಸಿದ್ದಾಳೆ. ಇವರಿಬ್ಬರ ನಡುವೆ ಪ್ರಸಾರ ಆಗ್ತಿರೋ ಎಪಿಸೋಡ್‌ ನೋಡಿದರೆ ಈ ಜೋಡಿ ಕೂಡ ಆದಷ್ಟು ಬೇಗ ಮದುವೆ ಆಗಬಹುದು.

ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ RESTART ಮಾಡ್ತಿದ್ದೀನಿ ಎಂದು ಹಿಮಾಲಯ ಪರ್ವತವೇರಿದ ನಟಿ ಸಂಜನಾ ಬುರ್ಲಿ

ಸಚಿನ್-ಸಹನಾ ಲವ್‌ ಕಥೆ ಏನು?
ಇನ್ನು ಸಚಿನ್‌, ಸುಮಾ ಪ್ರೀತಿ ಮಾಡ್ತಿರೋ ವಿಚಾರ ಎಲ್ಲರಿಗೂ ಗೊತ್ತಿಲ್ಲ. ಪುಟ್ಟಕ್ಕ ಈ ವಿಷಯಕ್ಕೆ ಹೇಗೆ ರಿಯಾಕ್ಟ್‌ ಮಾಡ್ತಾಳೋ ಏನೋ! ಒಟ್ಟಿನಲ್ಲಿ ಇವರ ಲವ್‌ ಟ್ರ್ಯಾಕ್‌ ಕೂಡ ಶುರು ಆಗಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಮದುವೆ ಸುಗ್ಗಿ ಎನ್ನಬಹುದು. 

ಕತೆ ಏನು?
ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಪುಟ್ಟಕ್ಕಳಿಗೆ ಮೂವರು ಹೆಣ್ಣು ಮಕ್ಕಳು. ಎರಡನೇ ಮಗಳು ಸ್ನೇಹಾ ಅಪಘಾತದಿಂದ ತೀರಿಕೊಂಡಿದ್ದಾಳೆ. ಇನ್ನಿಬ್ಬರು ಮಕ್ಕಳು ಹೊಸ ಜೀವನ ಕಟ್ಟಿಕೊಳ್ಳಬೇಕಿದೆ.

ಪಾತ್ರಗಳು
ಪುಟ್ಟಕ್ಕ-ಉಮಾಶ್ರೀ
ಕಂಠಿ-ಧನುಷ್‌ ಎನ್‌ ಎಸ್‌
ಸ್ನೇಹಾ-ಸಂಜನಾ ಬುರ್ಲಿ
ರಾಧಾ-ರಮ್ಯಾ ರಾಜು
ಸುಮಾ-ಶಿಲ್ಪಾ
ಹೊಸ ಸ್ನೇಹಾ- ಅಪೂರ್ವ ನಾಗರಾಜ್‌