ಹಿಟ್ಲರ್ ಕಲ್ಯಾಣಕ್ಕೆ ಚಿಲ್ಲಿ ಚಿಕನ್, ಅಮೃತಧಾರೆಗೆ ಪಾಯಸ... ಪುಟ್ಟಕ್ಕನ ಮಕ್ಕಳು ಇಟ್ರು ಹೊಸ ಹೆಸ್ರು...
ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಸಹೋದರಿಯರು ಒಂದೊಂದು ಸೀರಿಯಲ್ಗೆ ಒಂದೊಂದು ಆಹಾರದ ಹೆಸರು ಇಟ್ಟಿದ್ದಾರೆ. ಅವರು ಇಟ್ಟಿರುವ ಹೆಸರುಗಳೇನು?
ಜೀ ಟಿ.ವಿಯಲ್ಲಿ ಪ್ರಸಾರ ಆಗ್ತಿರೋ ಪುಟ್ಟಕ್ಕನ ಮಕ್ಕಳು (Puttakkana Makkalu) ಸದಾ ಟಿಆರ್ಪಿಯಲ್ಲಿ ಟಾಪ್ಮೋಸ್ಟ್ ಸ್ಥಾನ ಪಡೆದು ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯನ್ನು ಈ ಧಾರಾವಾಹಿ ಪಡೆದುಕೊಳ್ಳುತ್ತಿದೆ. ಗಂಡ ತನ್ನನ್ನು ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ. ಚಿಕ್ಕದೊಂದು ಕ್ಯಾಂಟೀನ್ ನಡೆಸಿಕೊಂಡು ಮಕ್ಕಳನ್ನು ಈಕೆ ಸಾಕುವ ಪರಿಯಿಂದ ಉತ್ತೇಜನಗೊಂಡು ನಿಜ ಜೀವನದಲ್ಲಿ ಎಷ್ಟೋ ತಾಯಂದಿರು ತಮಗೆ ಇದು ಸ್ಫೂರ್ತಿ ಕೊಟ್ಟಿದೆ ಎಂದೂ ಹೇಳಿದ್ದುಂಟು. ತಮ್ಮ ಕಥೆ ಕೂಡ ಪುಟ್ಟಕ್ಕನ ಕಥೆಗಿಂತ ಭಿನ್ನವಾಗಿಲ್ಲ ಎಂದು ಮಾಧ್ಯಮದ ಮುಂದೆ ಬಂದು ಕಣ್ಣೀರಾಕಿದ್ದೂ ಇದೆ. ಹಾಗೆ ಪುಟ್ಟಕ್ಕನಲ್ಲಿ ತಮ್ಮತನವನ್ನು ಕಂಡುಕೊಳ್ಳುವಷ್ಟರ ಮಟ್ಟಿಗೆ ಈ ಧಾರಾವಾಹಿ ಮನೆಮಾತಾಗಿದೆ.
ಇನ್ನು ಈ ಪುಟ್ಟಕ್ಕನ ಮಕ್ಕಳಾಗಿರುವ ಸಹನಾ, ಸ್ನೇಹಾ ಮತ್ತು ಸುಮನಾ ಸಹೋದರಿಯರು ಜೀ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀರಿಯಲ್ಗಳಿಗೆ ತಮ್ಮದೇ ಆದ ರೀತಿಯಲ್ಲಿ ಹೆಸರುಗಳನ್ನು ಇಟ್ಟಿದ್ದಾರೆ. ಎಲ್ಲ ಸೀರಿಯಲ್ಗಳಿಗೂ ಅದರ ಕಥೆಗೆ ಅನುಸಾರವಾಗಿ ಆಹಾರಗಳ ಹೆಸರನ್ನು ಇಡುವ ಆಟ ಆಡಿದ್ದಾರೆ. ಪಾರು ಸೀರಿಯಲ್ನಲ್ಲಿ ಮುದ್ದಾದ ಮಗು ಬಂದಿರುವ ಕಾರಣ ಅದಕ್ಕೆ ಸೆರೆಲಾಕ್ ಎಂದರೂ, ಹಿಟ್ಲರ್ ಕಲ್ಯಾಣ ಸೀರಿಯಲ್ಗೆ ಚಿಲ್ಲಿ ಚಿಕನ್ ಎಂದರೂ, ಅಮೃತಧಾರೆತೆ ಪಾಯಸ ಎಂದೂ, ಗಟ್ಟಮೇಳಕ್ಕೆ ಬಿಸಿ ಬೇಳೆ ಬಾತ್ ಎಂದೂ, ಶ್ರೀರಸ್ತು ಶುಭಮಸ್ತುಗೆ ಪುಳಿಯೊಗರೆ ಎಂದೂ, ಸೀತಾರಾಮ ಸೀರಿಯಲ್ಗೆ ಜಾಮೂನು ಎಂದೂ, ಸತ್ಯ ಸೀರಿಯಲ್ಗೆ ಪ್ರೊಟೀನ್ ಷೇಕ್ ಎಂದೂ, ಭೂಮಿಗೆ ಬಂದ ಭಗವಂತ ಧಾರಾವಾಹಿಗೆ ಕಾಳು ಪ್ರಸಾದ ಎಂದೂ ಹೆಸರು ಇಡಲಾಗಿದೆ. ಇನ್ನು ಉಳಿದಿರುವುದು ಒಂದು ಪುಟ್ಟಕ್ಕನ ಮಕ್ಕಳು ಸೀರಿಯಲ್. ಇದಕ್ಕೆ ಯಾವ ಹೆಸರು ಇಡಬೇಕು ಎಂದು ಪ್ರೇಕ್ಷಕರಿಗೆ ಪ್ರಶ್ನೆ ಕೇಳಿದ್ದಾರೆ ಈ ಸಹೋದರಿಯರು.
ಸೀರಿಯಲ್ನಲ್ಲಿ ಮೆಸ್ ನಡೆಸ್ತಿರೋ ಪುಟ್ಟಕ್ಕನ ಮಕ್ಕಳು ನಿಜವಾಗ್ಲೂ ಹೇಗೆ ಅಡುಗೆ ಮಾಡ್ತಾರೆ ನೋಡಿ...
ಇದಕ್ಕೆ ಅಭಿಮಾನಿಗಳು ತಮ್ಮದೇ ಆದ ಹಲವಾರು ರೀತಿಯ ಹೆಸರುಗಳನ್ನು ಸೂಚಿಸುತ್ತಿದ್ದಾರೆ. ಕುಡಿ ಬಾಳೆ ಎಲೆಯೂಟ ಎಂದೂ, ಮುದ್ದೆ ಬಸ್ಸಾರು ಎಂದೂ, ಪಲಾವು ಎಂದೂ, ಉಪ್ಪಿಟ್ಟು ಎಂದೂ, ಸ್ವೀಟ್ ಪೊಂಗಲ್, ವೆಜಿಟೇಬಲ್ ಪುಲಾವ್, ನಾಟಿ ಕೋಳಿ ಸಾರು... ಹೀಗೆ ಥಹರೇವಾರಿ ಹೆಸರುಗಳನ್ನು ಕಮೆಂಟ್ನಲ್ಲಿ ಸೂಚಿಸಲಾಗಿದೆ.
ಇನ್ನು ಈ ಸಹೋದರಿಯರ ಅಸಲಿ ವಿಷಯಕ್ಕೆ ಬರುವುದಾದರೆ, ಸಹನಾ ಅವರ ಅಸಲಿ ಹೆಸರು ಅಕ್ಷರಾ. ಫೈನಾನ್ಸ್ ವಿಷಯದಲ್ಲಿ ಎಂಬಿಎ ಓದುತ್ತಿದ್ದಾರೆ ಅಕ್ಷರಾ. ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಅಕ್ಷರ ಬರದ ಹೆಣ್ಣಾಗಿದ್ದರೂ ಈಕೆಯ ನಿಜವಾದ ಕಲಿಕೆ ಇದು. ಇನ್ನು ನಾಯಕಿ ಸ್ನೇಹಾ ಅವರ ನಿಜವಾದ ಹೆಸರು, ಸಂಜನಾ ಬುರ್ಲಿ. ಇವರು ಮೆಡಿಕಲ್ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಓದುತ್ತಿದ್ದರೆ, ಇನ್ನೋರ್ವ ತಂಗಿ ಸುಮಾ ಅವರ ನಿಜವಾದ ಹೆಸರು ಶಿಲ್ಪಾ. ಇವರು ಫ್ಯಾಷನ್ ಡಿಸೈನರ್.
ಹೆಣ್ಣಿನ ಮೇಲೆರಗಲು ಬಂದವನಿಗೆ ಒದ್ದು ಬುದ್ಧಿ ಕಲಿಸಿದ ಸಹನಾ, ಅತ್ತೆಗೂ ಹಿಂಗೆ ಬುದ್ಧಿ ಕಲಿಸೆಂದ ನೆಟ್ಟಿಗರು!