ಅಳುವ ಗಂಡಸರನ್ನು ನಂಬಬಾರ್ದು ಎನ್ನೋ ಗಾದೆ ಮಾತು ಇದಕ್ಕೇನಾ ಇರೋದು?

ಅಳುವ ಗಂಡಸರನ್ನು ನಂಬಬಾರದು ಎನ್ನೋ ಗಾದೆ ಮಾತು ಇದಕ್ಕೇನಾ ಇರೋದು? ಅಭಿಮಾನಿಗಳು ಹೇಳ್ತಿರೋದೇನು?
 

proverb saying that men who cry are not to be trusted like Jayanth of Lakshminivas suc

ಅಳೋ ಗಂಡಸರನ್ನು, ನಗುವ ಹೆಂಗಸರನ್ನು ನಂಬಬಾರದು ಎಂದು ತಲೆತಲಾಂತರಗಳಿಗೆ ಗಾದೆಮಾತು ಇದೆ. ಈ ಗಾದೆ ಮಾತನ್ನು ಯಾಕೆ, ಯಾರ ಸಲುವಾಗಿ ಹುಟ್ಟುಹಾಕಿದರೋ ಗೊತ್ತಿಲ್ಲ. ಈ ಗಾದೆ ಮಾತಿಗೆ ತಕರಾರು ತೆಗೆಯುವವರೂ ಹೆಚ್ಚು ಜನ ಇದ್ದಾರೆ. ಅಷ್ಟಕ್ಕೂ ಅಳುವುದು ನಾಚಿಕೆ ಪಡುವ ವಿಚಾರವಲ್ಲ. ಅಳುವು ಕೇವಲ ನೋವನ್ನು ವ್ಯಕ್ತಪಡಿಸುವ ಭಾವನೆ. ಗಂಡಸರು ತಮ್ಮ ದುಃಖವನ್ನು ಅಳುವ ಮೂಲಕ ತೋರಿಸಿಕೊಳ್ಳದ ಕಾರಣ, ಅವರಿಗೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತದೆ. ದುಃಖವನ್ನು ಒಳಗೇ ಅದುಮಿಟ್ಟುಕೊಳ್ಳುವುದು ಸರಿಯಲ್ಲ ಎಂದೂ ಹೇಳಲಾಗುತ್ತದೆ. ಅಷ್ಟಕ್ಕೂ ಅಳುವುದು ಯಾವುದೇ ಒಂದು ಲಿಂಗಕ್ಕೆ ಸೇರಿದ್ದಲ್ಲ. ನೀವು ಅಳಲು ಬಯಸಿದರೆ, ಅದು ಹೆಂಗಸರಾಗಿರಲಿ ಅಥವಾ ಗಂಡಸರಾಗಿರಲಿ ಅಳುತ್ತಾರೆ. ಆದರೆ ನಗುವ ಹೆಂಗಸರನ್ನು, ಅಳುವ ಗಂಡಸರನ್ನು ನಂಬಬೇಡಿ ಎಂಬ ಗಾದೆ ಮಾತಿದೆ.

ಆದರೆ ಈ ಮಾತು ಲಕ್ಷ್ಮಿ ನಿವಾಸದ ಜಯಂತ್​ಗೆ ಯಾಕೋ ಸೂಟ್​ ಆಗುವ ಹಾಗಿದೆ. ಸಾಮಾನ್ಯವಾಗಿ ಹೆಂಗಸರು ತಮ್ಮ ತಪ್ಪಿದ್ದಾಗ ಅಥವಾ ಮುಂದೆ ಎದುರಿಗೆ ಇದ್ದವರು ತಮ್ಮ ವಿರುದ್ಧ ಮಾತನಾಡದ ಹಾಗೆ ಮಾಡಲು ಅಳುವುದನ್ನು ಅಸ್ತ್ರ ಮಾಡಿಕೊಳ್ಳುವುದು ಇದೆ. ಆದರೆ ಇಲ್ಲಿ ಹೇಳುತ್ತಿರುವುದು ಅಳುವ ಗಂಡಸರ ಬಗ್ಗೆ. ಜಯಂತ್​ ಅಂದ್ರೆ ಸೀರಿಯಲ್​ ಪ್ರೇಮಿಗಳಿಗೆ ಲಕ್ಷ್ಮಿ ನಿವಾಸ ಜಯಂತ್​ ಕಣ್ಣೆದುರು ಬರುತ್ತಾನೆ. ಈಗ ಒಬ್ಬ ಸೈಕೋ. ಅಂದ್ರೆ ಹೆಂಡತಿ ತನಗೊಬ್ಬಳಿಗೇ ಸೇರಿದವಳು ಎನ್ನುವ ಮನೋಭಾವದವ. ಜಾಹ್ನವಿ ತುಂಬಾ ಹೊತ್ತು ಫೋನ್ ನಲ್ಲಿ ಮಾತನಾಡೋದನ್ನು ಸಹಿಸದ ಜಯಂತ್ (Jayanth) ಆಕೆಯ ಫೋನ್ ನೆಟ್ ವರ್ಕ್ ಕನೆಕ್ಟ್ ಆಗದೇ ಇರೋತರ ಮಾಡಿ, ಮನೆಯ ಲ್ಯಾಂಡ್ ಲೈನ್ ಕನೆಕ್ಷನ್ ಕೂಡ ತೆಗೆದು ಹಾಕಿದ್ದ. ಜಾಹ್ನವಿಯ ಎಲ್ಲಾ ಪ್ರೀತಿ ತನ್ನೊಬ್ಬನಿಗೆ ಸಿಗಬೇಕೆಂದು ಇಡೀ ದಿನ ಆಕೆ ಏನ್ ಮಾಡ್ತಾಳೆ ಅನ್ನೋದನ್ನು ಆಫೀಸ್ ನಲ್ಲಿ ಕುಳಿತು ನೋಡ್ತಿರ್ತಾನೆ ಜಯಂತ್. 

ದೀಪಿಕಾ ಪಡುಕೋಣೆಯ ಒಂದೇ ಒಂದು ಸೆಕೆಂಡ್‌ನ ವಿಡಿಯೋ ನೋಡಲು ಮುಗಿ ಬಿದ್ದ ನೆಟ್ಟಿಗರು! ಅಂಥದ್ದೇನಿದೆ ನೋಡಿ...

ಮನೆಯ ಒಳಗೆ ಸಿಸಿಟಿವಿ ಹಾಕಿಸಿದ್ದಾಯ್ತು. ಇದೀಗ ಮನೆಯ ಹೊರಗೂ ಹಾಕಿಸಿದ್ದಾನೆ. ತನ್ನ ಪತ್ನಿ ವಾಚ್​ಮೆನ್​ಗೆ ಊಟ ಕೊಡುವುದನ್ನು ಆತ ಸಹಿಸುತ್ತಿಲ್ಲ. ಆದ್ದರಿಂದ ಆತನ ಮೇಲೆ ಹಲ್ಲೆ ಮಾಡಿ ಹೊರಹಾಕಿದ್ದಾನೆ. ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯ ನೋಡಿದ ಚಿನ್ನುಮರಿಗೆ ಪತಿಯ ಮೇಲೆ ಡೌಟ್​ ಬಂದಿತ್ತು. ಯಾವಾಗ ಪತ್ನಿಗೆ ತನ್ನ ಮೇಲೆ ಸಂದೇಹ ಬಂತೋ, ಆಗ ಆಕೆಯ ಸಂದೇಹವನ್ನು ತೆಗೆಯಲು ಅವಳ ಮುಂದೆ ಜೋರಾಗಿ ಅಳುವ ನಾಟಕ ಮಾಡಿದ್ದಾನೆ. ನಿನಗೆ ನನ್ನ ಮೇಲೆ ನಂಬಿಕೆ ಇಲ್ವಾ? ನಿನ್ನ ನಂಬಿಕೆಯನ್ನು ನಾನು ಉಳಿಸಿಕೊಳ್ಳಬೇಕು. ಹಾಗೆ ಹೀಗೆ ಹೇಳಿ, ಪತ್ನಿಯನ್ನು ಕರಗಿಸಿಬಿಟ್ಟಿದ್ದಾನೆ. ಅವನ ಕಣ್ಣೀರಿಗೆ ಪತ್ನಿ ಕರಗಿ ಹೋಗಿದ್ದಾಳೆ.

ಅದೇ ಇನ್ನೊಂದೆಡೆ, ಪೊಲೀಸರು ಮನೆಗೆ ಬಂದು ಸೆಕ್ಯುರಿಟಿ ಸಾಲದ ಸುಳಿಯಲ್ಲಿ ಸಿಲುಕಿದ್ದರಿಂದ ರೌಡಿಗಳು ಬಂದು ಹಲ್ಲೆಮಾಡಿದ್ದಾರೆ ಎಂದು ಹೇಳುತ್ತಾರೆ. ಇದು ಕೂಡ ಜಯಂತ್​ ಮಾಡಿರುವ ಪ್ಲ್ಯಾನ್​. ಸದ್ಯ ಪತ್ನಿಗೆ ತನ್ನ ಗಂಡನ ಬುದ್ಧಿ ಇನ್ನೂ ತಿಳಿಯಲಿಲ್ಲ. ಆದರೆ ಅಳುವ ಗಂಡಸನ್ನು ಮಾತ್ರ ಯಾರೂ ನಂಬಬಾರದು ಎನ್ನುವುದು ಇದರಿಂದ ಸಾಬೀತಾದಂತಾಗಿದೆ. 

ಅತ್ಯಾಚಾರ ತಡೆಗೆ ಗಂಡಸರಿಗೆ ಹೀಗೆ ಸಲಹೆ ಕೊಟ್ಟ ನಟಿ ಶೆರ್ಲಿನ್‌ ಚೋಪ್ರಾ! ನೆಟ್ಟಿಗರು ಕೆಂಡಾಮಂಡಲ

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios