Asianet Suvarna News Asianet Suvarna News

ನಟಿ ಕವಿತಾ ಗೌಡ ಸೀಮಂತ ಸಂಭ್ರಮ, ತುಂಬು ಗರ್ಭಿಣಿ ನೇಹಾ ಗೌಡ ಭಾಗಿ, ಮೊದಲು ತಾಯಿ ಆಗೋದ್ಯಾರೆಂಬ ಕುತೂಹಲ!

ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಮತ್ತು ಕವಿತಾ ಗೌಡ ಇಬ್ಬರೂ ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದು, ಇದೀಗ ಕವಿತಾ ಗೌಡ ಅವರ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ನೆರವೇರಿಸಲಾಗಿದೆ.

pregnant neha gowda attends kannada actor chandan wife actress kavitha gowda baby shower gow
Author
First Published Sep 15, 2024, 9:13 PM IST | Last Updated Sep 15, 2024, 9:13 PM IST

ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಮತ್ತು ಕವಿತಾ ಗೌಡ ಇಬ್ಬರೂ ಕೂಡ ಈಗ ತುಂಬು ಗರ್ಭಿಣಿ. ಇಬ್ಬರು ಆತ್ಮೀಯ ಸ್ನೇಹಿತರು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಅವರು ಒಂದೇ ತಿಂಗಳಲ್ಲಿ ತಾಯಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರಿಗೂ ಈಗ 9 ತಿಂಗಳು ನಡೆಯುತ್ತಿದೆ. ಇದೀಗ ಕವಿತಾ ಗೌಡ ಅವರ ಸೀಮಂತ ಶಾಸ್ತ್ರದಲ್ಲಿ  ನೇಹಾ ಗೌಡ ಮತ್ತು ಅನುಪಮಾ ಗೌಡ ಕೂಡ ಸೇರಿದಂತೆ ಕಿರುತೆರೆಯ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. 

ಕವಿತಾ ಗೌಡ ಸೀಮಂತ ಶಾಸ್ತ್ರದ ಫೋಟೋಗಳು ಈಗ ವೈರಲ್ ಆಗುತ್ತಿದ್ದು, ಪಿಂಕ್‌ ಸೀರೆಯಲ್ಲಿ ಮೈತುಂಬಾ ಆಭರಣ ಧರಿಸಿ ಗೊಂಬೆಯಂತೆ ಕಾಣುತ್ತಿರುವ ಕವಿತಾ ಗೌಡಗೆ ಎಲ್ಲರೂ ವಿಶ್ ಮಾಡುತ್ತಿದ್ದಾರೆ. ನೇಹಾಗೆ ಗಂಡು ಮಗು, ಕವಿತಾಗೆ ಹೆಣ್ಣು ಮಗು ಇಲ್ಲವೇ ಟ್ವಿನ್ಸ್ ಮಕ್ಕಳಾಗಲಿದೆ ಎಂದು ಭವಿಷ್ಯದ ನುಡಿದಿದ್ದಾರೆ ಅಭಿಮಾನಿಗಳು.  ಆಗಸ್ಟ್ ನಲ್ಲಿ ನೇಹಾ ಗೌಡ ಅವರ ಸೀಮಂತ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ಕವಿತಾ ಗೌಡ ದಂಪತಿ  ಭಾಗವಹಿಸಿದ್ದರು.

ಮಾಜಿ ಗೆಳತಿಯೊಂದಿಗಿನ ಆದಾಯ ಹಂಚಿಕೆ, ಬೈಕ್‌ ಗಿಫ್ಟ್ ಬಗ್ಗೆ ಮಾತನಾಡಿದ ವರುಣ್ ಆರಾಧ್ಯ

ಗೌರಿ ಗಣೇಶ ಹಬ್ಬದ ಸಮಯದಲ್ಲಿ  ವಿಶೇಷ ಫೋಟೋಶೂಟ್ ಮಾಡಿಸಿದ ಚಿನ್ನು ಹಳದಿ ಸೀರೆಯಲ್ಲಿ  ಮಿಂಚಿದ್ದರು. ಆಗ ಏನೇ ಆದರೂ ಸೀಮಂತ ಮಾಡಬೇಕಿತ್ತು ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದರು. ಅಭಿಮಾನಿಗಳು ಅಂದುಕೊಂಡತೆ ಈಗ ಸೀಮಂತ ಶಾಸ್ತ್ರ ನೆರವೇರಿದೆ.

ಇತ್ತೀಚೆಗೆ ಕವಿತಾ (Kavitha Gowda) ಜೊತೆಗಿನ ಫೋಟೊ ಹಂಚಿಕೊಂಡಿರುವ ನೇಹಾ ಗೌಡ, ನನ್ನ ಪ್ರೆಗ್ನೆನ್ಸಿ ಜರ್ನಿಯನ್ನು ನನ್ನ ತಂಗಿ ಜೊತೆ ಸೆಲೆಬ್ರೇಟ್ ಮಾಡಿರೋದಕ್ಕೆ ಖುಷಿಯಾಗಿದ್ದೇನೆ.   ಈಗ ಅವಳು ಕೂಡ ಶೀಘ್ರದಲ್ಲೇ ಮಗುವಿನ ತಾಯಿಯಾಗಲಿದ್ದಾಳೆ, ಅವಳಿಗೆ ಸಂತೋಷದ, ಆರೋಗ್ಯಕರ ಮತ್ತು ಸುರಕ್ಷಿತ ಹೆರಿಗೆ ಆಗಲೆಂದು ಹಾರೈಸುತ್ತೇನೆ. ಈ ಹೊಸ ಅಧ್ಯಾಯವು ಅವಳ ಜೀವನದಲ್ಲಿ ಅಪಾರ ಸಂತೋಷ ಮತ್ತು ಖುಷಿಯನ್ನು ತರಲಿ ಎಂದು ಹಾರೈಸಿದ್ದರು. 

ಇನ್ನು ನೇಹಾ ಮತ್ತು ಕವಿತಾ ಬಗ್ಗೆ ಕುತೂಹಲಕರ ಮಾಹಿತಿ ಹೇಳಬೇಕು ಅಂದ್ರೆ ಸೀರಿಯಲ್ ನಲ್ಲಿ  ಒಟ್ಟಿಗೆ ಇದ್ದರು. ರಿಯಲ್ ಲೈಫಲ್ಲೂ ಇಬ್ಬರ ಜೀವನದಲ್ಲಿ ಎಲ್ಲವೂ ಜೊತೆಯಾಗಿಯೇ ನಡೆಯುತ್ತಿದೆ. ಸೀರಿಯಲ್ ನಲ್ಲಿ  ಚಿನ್ನು ಗೊಂಬೆ ಇಬ್ಬರ ಗಂಡನ ಹೆಸರು ಚಂದು ಎಂದಿತ್ತು, ರಿಯಲ್ ಲೈಫಲ್ಲೂ ಇಬ್ಬರ ಗಂಡಂದಿರ ಹೆಸರು ಕೂಡ  ಚಂದನ್ ಆಗಿದೆ. ಸಹ ನಟ ಚಂದನ್ ಕುಮಾರ್‌ನನ್ನು ಪ್ರೀತಿಸಿ ಕವಿತಾ ಮದುವೆಯಾಗಿದ್ದರೆ. ಬಾಲ್ಯದ ಗೆಳೆಯ ಚಂದನ್‌ ಗೌಡ ಅವರನ್ನು ನೇಹಾ ಮದುವೆಯಾಗಿದ್ದಾರೆ.  ಈಗ ಒಂದೇ ಸಮಯದಲ್ಲಿ ಇಬ್ಬರೂ ಗರ್ಭಿಣಿಯಾಗಿದ್ದು, ಎಲ್ಲವೂ ಕಾಕತಾಳಿಯ ಆದರೆ ಅದೇನೋ ನಂಟು ಎಂಬಂತಿದೆ.

ವರ್ಷಾ ಕಾವೇರಿ ಜೊತೆಗಿನ ಬ್ರೇಕಪ್‌ಗೆ ಕಾರಣ ಬಿಚ್ಚಿಟ್ಟ ವರುಣ್‌ ಆರಾಧ್ಯ!

ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಲ್ಲಿ ನೇಹಾ, ಕವಿತಾ ಹಾಗೂ ಚಂದನ್ ಕುಮಾರ್ ಮೂವರು ಜೊತೆಯಾಗಿ ನಟಿಸಿದ್ದರು. ಗೊಂಬೆ ಪಾತ್ರದಲ್ಲಿ ನೇಹಾ ರಾಮಕೃಷ್ಣ, ಚಿನ್ನು ಪಾತ್ರದಲ್ಲಿ ಕವಿತಾ  ಚಂದು ರೋಲ್‌ನಲ್ಲಿ ಚಂದನ್ ನಟಿಸಿದ್ದರು. ಈಗ ನವ ಮಾಸದಲ್ಲಿ ಇರುವ ಇಬ್ಬರಲ್ಲಿ ಯಾರು ಮೊದಲು ತಾಯಿಯಾಗಲಿದ್ದಾರೆ ಎಂಬುದು ಕಾದು ನೋಡಬೇಕು.

Latest Videos
Follow Us:
Download App:
  • android
  • ios