ಸಂಗೀತಾಗೆ ಪ್ರತಾಪ್​ ಬಿಗ್​ ಶಾಕ್! ಅಕ್ಕ-ತಮ್ಮನ ಸಂಬಂಧ ಮುಗಿದೇ ಹೋಯ್ತಾ? ಯಾರಿಗೆ ಎಷ್ಟು ಅಂಕ?

ಬಿಗ್​ಬಾಸ್​ ಫಿನಾಲೆ ಹತ್ತಿರವಾಗುತ್ತಿದ್ದು, ಯಾರಿಗೆ ಎಷ್ಟು ಅಂಕ ಸಿಕ್ಕಿದೆ ಎನ್ನುವ ಲಿಸ್ಟ್​ ಬಿಡುಗಡೆಯಾಗಿದೆ. ಇದರ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ...
 

Pratap kept his sister Sangeeta out in Bigg Boss Total points taken by contestant released suc

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಶೃಂಗೇರಿ ಅವರನ್ನು ಅಕ್ಕ-ತಮ್ಮ ಎಂದೇ  ಮೊದಲಿನಿಂದಲೂ ಹೇಳಲಾಗುತ್ತಿದೆ. ಮುಖದ ಮೇಲೆ ನೀರು ಎರೆಚುವ ಟಾಸ್ಕ್​ನಲ್ಲಿ ಸೋಪಿನ ನೀರು ಕಣ್ಣಿಗೆ ಬಿದ್ದು ಆಸ್ಪತ್ರೆಗೆ ಸೇರಿದ್ದರು ಇವರಿಬ್ಬರು. ಇದಾದ ಬಳಿಕ ಇವರ ಸಂಬಂಧ ಇನ್ನಷ್ಟು ಹತ್ತಿರವಾಗಿತ್ತು. ಪ್ರತಾಪ್​ ನನ್ನ ತಮ್ಮನ ಹಾಗೇ ಎಂದು ಈ ಹಿಂದೆ ಅನೇಕ ಬಾರಿ ಸಂಗೀತಾ ಹೇಳಿದ್ದಾರೆ. ಡ್ರೋನ್ ಪ್ರತಾಪ್​ ಕೂಡ ಸಂಗೀತಾ ಅವರನ್ನು ಅಕ್ಕನಂತೆಯೇ ನೋಡಿಕೊಳ್ಳುತ್ತಿದ್ದರು. ಆದರೆ ಇನ್ನೇನು ಫಿನಾಲೆ ಹತ್ತಿರ ಇದೆ ಎನ್ನುವಾಗ ಡ್ರೋನ್​ ಪ್ರತಾಪ್​ ಸಂಗೀತಾ ಅವರಿಗೆ ಶಾಕ್​ ನೀಡಿದ್ದಾರೆ! ಇದಾಗಲೇ ಹಲವು ಸ್ಪರ್ಧಿಗಳು ನಾಮಿನೇಟ್​ ಆಗಿದ್ದು, ಉಳಿದವರ ಮಧ್ಯೆ ಬಿಗ್​ಬಾಸ್​ ಕಿರೀಟಕ್ಕಾಗಿ ಭಾರಿ ಹೋರಾಟ ನಡೆಯುತ್ತಿದೆ. ಅದೇ ರೀತಿ ಎಲ್ಲರೂ ತಮ್ಮದೇ ಪಾಯಿಂಟ್​ನಲ್ಲಿ ಗೇಮ್ ಆಡುತ್ತಿದ್ದಾರೆ.

ಇತ್ತೀಚೆಗೆ ಬಿಗ್​ಬಾಸ್ ಪ್ರೋಮೋ ರಿಲೀಸ್ ಮಾಡಲಾಗಿದ್ದು ಇದರಲ್ಲಿ,  ಸಂಗೀತಾಗೆ ಪ್ರತಾಪ್ ದೊಡ್ಡ ಶಾಕ್ ಕೊಟ್ಟಿರುವುದನ್ನು ನೋಡಬಹುದು. ಸಂಗೀತಾ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದು, ಪ್ರತಾಪ್ ಅವರನ್ನು ಎಲಿಮಿನೇಷನ್‌ನಿಂದ ಪಾರು ಮಾಡಿದ್ದರು. ಈ ವಾರ ಪ್ರತಾಪ್ ಈ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಪ್ರತಾಪ್​ ಮಾತ್ರ ಸಂಗೀತಾ ಅವರಿಗೆ ಶಾಕ್​ ನೀಡಿದ್ದಾರೆ. ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿರುವ ಪ್ರತಾಪ್ ಆಟದಿಂದ ಸಂಗೀತಾ ಅವರನ್ನು ಹೊರಗಡೆ ಇಡುತ್ತೇನೆ ಎಂದಿರುವ ಪ್ರೊಮೋ ರಿಲೀಸ್​  ಆಗಿದೆ. ಈ ಮೂಲಕ ಸಂಗೀತಾ ಪ್ರತಾಪ್​ ಮೇಲಿಟ್ಟಿದ್ದ ನಂಬಿಕೆ ಹುಸಿಯಾಗಿದೆ.  ಪ್ರತಾಪ್‌ ತಮ್ಮನ್ನು  ಆಟದಿಂದ ಹೊರಗಡೆ ಇಡೋದಿಲ್ಲ ಎಂದು  ನಮ್ರತಾ ಬಳಿ ಸಂಗೀತಾ ಹೇಳಿಕೊಂಡಿದ್ದರು. ಆದರೆ ಈಗ ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಎಲ್ಲಾ ಉಲ್ಟಾ ಆಗಿದೆ. 

ಸಕತ್​ ಸುದ್ದಿಯಲ್ಲಿರೋ ಲಕ್ಷದ್ವೀಪ ಹೇಗಿದೆ? ರೋಚಕ ಮಾಹಿತಿ ನೀಡುತ್ತಲೇ ಸಂಪೂರ್ಣ ದರ್ಶನ ಮಾಡಿಸಿದ ಡಾ.ಬ್ರೋ...

ಈ ರೀತಿ ಮಾಡಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಬಿಗ್ ಬಾಸ್ ಮನೆಯಲ್ಲಿರುವ ಇತರ ಸ್ಪರ್ಧಿಗಳಿಗಿಂತ ಪ್ರತಾಪ್ ಹಾಗೂ ಸಂಗೀತಾ ಅವರ ಪಾಯಿಂಟ್‌ಗಳು ಹೆಚ್ಚಾಗಿವೆ. ಇಲ್ಲಿಯವರೆಗೆ ಬಿಗ್​ಬಾಸ್​ನಲ್ಲಿ ಗುಂಪಾಗಿ ಟಾಸ್ಕ್​ ನೀಡಲಾಗಿತ್ತು. ಇದೀಗ ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ವೈಯಕ್ತಿಕ ಟಾಸ್ಕ್​ ನೀಡಲಾಗುತ್ತಿದೆ. ಇದರಲ್ಲಿ  ಆಡುವ ಸ್ಪರ್ಧಿ ಎದುರಾಳಿಯಾಗಿ ಮೂವರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಇರುತ್ತದೆ. ಎಂಟು ಸ್ಪರ್ಧಿಗಳಿದ್ದು ಈ ವಾರ ಎಲ್ಲ ವೈಯಕ್ತಿಕ ಟಾಸ್ಕ್​ಗಳನ್ನೇ ನೀಡಲಾಗಿದೆ. ಇದೀಗ  ಏಳು ಟಾಸ್ಕ್​ನ ಫಲಿತಾಂಶ ಬಂದಿದೆ.  ಅತಿ ಹೆಚ್ಚು ಅಂಕ ಪಡೆದವರು ನೇರವಾಗಿ ಫಿನಾಲೆಗೆ ಟಿಕೆಟ್ ಪಡೆಯುತ್ತಾರೆ.  
 
ಕೊನೆಯಲ್ಲಿ ಒಂದು ಟಾಸ್ಕ್​ ಉಳಿದುಕೊಂಡಿದೆ. ಈ ಸಮಯದಲ್ಲಿ  ಡ್ರೋನ್​ ಸಂಗೀತಾ ಅವರನ್ನು ಹೊರಗಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗಿದ್ದರೆ ಯಾರಿಗೆ ಎಷ್ಟು ಪಾಯಿಂಟ್​ ಸಿಕ್ಕಿದೆ ಎನ್ನುವುದನ್ನು ನೋಡೋಣ. 
ಡ್ರೋನ್​ ಪ್ರತಾಪ್: 280; 
ಸಂಗೀತಾ: 260;
ನಮ್ರತಾ ಗೌಡ: 210;
ವರ್ತೂರು ಸಂತೋಷ್: 200;
ತನಿಷಾ ಕುಪ್ಪಂಡ: 140;
ಕಾರ್ತಿಕ್ ಗೌಡ: 170;
ವಿನಯ್ ಗೌಡ: 130;
ತುಕಾಲಿ ಸಂತೋಷ್: 110;

ಮಗನ ಹೊಡೆದು, ಚಪ್ಪಲಿ ಎಸೆದ ಬಿಗ್​ಬಾಸ್​ ಡ್ರಾಮಾಕ್ವೀನ್ ​ಅಂಕಿತಾ ಲೋಖಂಡೆ ಅತ್ತೆಯಿಂದ ಶಾಕಿಂಗ್​ ಹೇಳಿಕೆ!

 

Latest Videos
Follow Us:
Download App:
  • android
  • ios