ಮನೆಯಲ್ಲಿ ಗಾಂಜಾ ಸೇವಿಸುವಾಗಲೇ ಸಿಕ್ಕಿಬಿದ್ದ ಪ್ರಖ್ಯಾತ ಬಿಗ್‌ಬಾಸ್ ಸ್ಟಾರ್!
ಪ್ರಖ್ಯಾತ ಯೂಟ್ಯೂಬ್ ಸ್ಟಾರ್ ಹಾಗೂ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿದ್ದ ಸೆಲೆಬ್ರಿಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಗಾಂಜಾ ಸೇವಿಸುವಾಗಲೇ ಅಣ್ಣ-ತಮ್ಮ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರು (ಫೆ.22): ಬಿಗ್ ಬಾಸ್ ರನ್ನರ್‌ಅಪ್ ಹಾಗೂ ಪ್ರಖ್ಯಾತ ಯೂಟ್ಯೂಬರ್ ಶಾನು ಅಲಿಯಾಸ್ ಷಣ್ಮುಖ್ ಜಸ್ವಂತ್ ಪೊಲೀಸರ ಅತಿಥಿಯಾಗಿದ್ದಾರೆ. ಮನೆಯಲ್ಲಿಯೇ ಗಾಂಜಾ ಸೇವಿಸುವಾಗ ಪೊಲೀಸರ ಅತಿಥಿಯಾಗಿದ್ದಾರೆ. ಷಣ್ಮುಖ್‌ನ ಜೊತೆ ಆತನ ಅಹೋದರ ಸಂಪತ್ ವಿನಯ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದ ಕಾರಣಕ್ಕೆ ಪೊಲೀಸರು ಸಂಪತ್ ವಿನಯ್‌ರನ್ನು ಬಂಧಿಸಲು ಮನೆಗೆ ತೆರಳಿದ್ದರು. ಈ ವೇಳೆ ಷಣ್ಮುಖ್ ಜಸ್ವಂತ್ ಗಾಂಜಾ ಸೇವನೆ ಮಾಡುತ್ತಿದ್ದರು. ಇದರಿಂದಾಗಿ ಪ್ರಖ್ಯಾತ ಯೂಟ್ಯೂಬ್ ಸ್ಟಾರ್ ಅನಿರೀಕ್ಷಿತವಾಗಿ ಪೊಲೀಸರ ಅತಿಥಿಯಾಗಿದ್ದಾರೆ. ಷಣ್ಮುಖ್ ಸೇವನೆ ಮಾಡುತ್ತಿರುವುದು ಗಾಂಜಾ ಎಂದು ಗೊತ್ತಾದ ಬೆನ್ನಲ್ಲಿಯೇ ನರಸಿಂಗಿ ಪೊಲೀಸರು ಇಬ್ಬರನ್ನೂ ಬಂಧನ ಮಾಡಿದ್ದಾರೆ. ಇದು ಟಾಲಿವುಡ್ ರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಮೂಲಗಳ ಪ್ರಕಾರ, ಷಣ್ಮುಖ್ ಅವರ ಸಹೋದರ ಸಂಪತ್ ವಿನಯ್ ಕಳೆದ 10 ವರ್ಷಗಳಿಂದ ಆಂಧ್ರಪ್ರದೇಶ ಮೂಲದ ಹುಡುಗಿಯೊಂದಿಗೆ ರಿಲೇಷನ್‌ಷಿಪ್‌ನಲ್ಲಿದ್ದರು. ಅದಲ್ಲದೆ, ಮೂರು ವರ್ಷಗಳ ಹಿಂದೆ ಇವರಿಬ್ಬರ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಆ ಬಳಿಕ ಇವರಿಬ್ಬರ ನಡುವೆ ಬ್ರೇಕಪ್ ಆಗಿತ್ತು. ಈ ವೇಳೆ ಸಂಪತ್ ವಿನಯ್ ಇನ್ನೊಂದು ಹುಡುಗಿಯನ್ನು ವಿವಾಹವಾಗಿದ್ದರು. ಈ ವಿಚಾರ ತಳಿದ ಬೆನ್ನಲ್ಲಿಯೇ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಸಂಪತ್ ವಿನಯ್ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ದೂರಿದ್ದಾಳೆ. ಈ ವೇಳೆ ಕೇಸ್ ದಾಖಲು ಮಾಡಿಕೊಂಡ ಪೊಲೀಸರು, ವಿಚಾರಣೆಗಾಗಿ ಸಂಪತ್‌ನನ್ನು ಕರೆದುಕೊಂಡು ಬರಲು ಆತನ ಮನೆಗೆ ತೆರಳಿದ್ದರು. ಈ ವೇಳೆ ಯುವತಿಯೂ ಕೂಡ ಪೊಲೀಸರೊಂದಿಗೆ ಹೋಗಿದ್ದಾಳೆ. ಈ ವೇಳೆ ಮನೆಯ ಒಳಗಡೆ ಷಣ್ಮುಕ್ ಮಾತ್ರವೇ ಇದ್ದ. ಪೊಲೀಸರು ಶೋಧ ಕಾರ್ಯ ಮಾಡುವ ವೇಳೆ ಆತ ಗಾಂಜಾ ಸೇವಿಸುತ್ತಿದ್ದ ಎನ್ನುವುದು ಗೊತ್ತಾದ ತಕ್ಷಣ ಬಂಧನ ಮಾಡಿದ್ದಾರೆ.
ಕೆಂಪು ಲೆಹಂಗಾದಲ್ಲಿ ರಾಣಿಯಂತೆ ಕಂಗೊಳಿಸಿದ ಶೃತಿ ಪ್ರಕಾಶ್; ರೆಡ್ ಹಾಟ್ ಚಿಲ್ಲಿ ಎಂದ್ರು ಫ್ಯಾನ್ಸ್
ಸಾಫ್ಟ್‌ವೇರ್ ಡೆವಲಪರ್, ಸೂರ್ಯ ವೆಬ್ ಸಿರೀಸ್ ಮೂಲಕ ಪ್ರಖ್ಯಾತಿ ಪಡೆದಿರುವ ಷಣ್ಮುಖ್, ಈ ಮೂಲಕವೇ ಯೂಟ್ಯೂಬ್‌ನಲ್ಲಿ ದೊಡ್ಡ ಮಟ್ಟದ ಮನ್ನಣೆ ಪಡೆದುಕೊಂಡಿದ್ದರು. ಇಲ್ಲಿಂದ ಪಡೆದ ಪ್ರಖ್ಯಾತಿಯಿಂದಾಗಿಯೇ 5ನೇ ಆವೃತ್ತಿಯ ಬಿಗ್ ಬಾಸ್ ತೆಲುಗು ಶೋಗೆ ಪ್ರವೇಶಿಸಿದ್ದರು. ತಮ್ಮ ಆಟದ ಮೂಲಕ ಗಮನಸೆಳೆದಿದ್ದ ಷಣ್ಮುಖ್, ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದರು. ತೆಲುಗು ರಾಜ್ಯಗಳಲ್ಲಿ ಕ್ರೇಜ್ ಹುಟ್ಟು ಹಾಕಿರುವ ಷಣ್ಮುಖ್, ವಿವಾದಗಳನ್ನೂ ಎದುರಿಸುತ್ತಿದ್ದಾರೆ. ಈ ಹಿಂದೆ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬಂಧಿತರಾಗಿದ್ದರು. ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕಾಗಿ ಪೊಲೀಸರ ಅತಿಥಿಯೂ ಆಗಿದ್ದರು. ಈಗ ಗಾಂಜಾ ಪ್ರಕರಣದಲ್ಲಿ ಪೊಲೀಸರ ಬಂಧನ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ನಕ್ಕು ನಗಿಸೋ ತುಕಾಲಿ ಸಂತುಗಿದೆ ಈ ಗಂಭೀರ ಸಮಸ್ಯೆ, ಬಿಗ್‌ಬಾಸ್ ಮನೆಯಲ್ಲಿ ಇದನ್ನು ಹೇಗೆ ಮ್ಯಾನೇಜ್ ಮಾಡಿದ್ರು ಗೊತ್ತಾ?