ನಿಜ ಜೀವನದ ನೋವನ್ನೂ ಬಚ್ಚಿಟ್ಟು ನಗುವ ತ್ಯಾಗಮಯಿ 'ಪಾರು'ಗೆ ಹುಟ್ಟುಹಬ್ಬದ ಸಂಭ್ರಮ- ಹಾರ್ಟ್ ಟಚಿಂಗ್ ವಿಡಿಯೋ
ಪಾರು ಧಾರಾವಾಹಿಯ ನಾಯಕಿ ಮೋಕ್ಷಿತಾ ಪೈ ಅವರ ರಿಯಲ್ ಲೈಫ್ ಕೂಡ ತ್ಯಾಗಮಯವೇ. ಈ ನಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಸೀರಿಯಲ್ ನಟಿ ಮೋಕ್ಷಿತಾ ಪೈ ಎಂದರೆ ಬಹುಶಃ ಹೆಚ್ಚಿನವರಿಗೆ ತಿಳಿಯುವುದೇ ಇಲ್ಲ. ಆದರೆ ಪಾರು ಎಂದರೆ ಸಾಕು, ಎಲ್ಲರ ಚಿತ್ರ ಜೀ ಟಿವಿಯಲ್ಲಿ ಪ್ರಸಾರ ಆಗ್ತಿರೋ ಪಾರು ಸೀರಿಯಲ್ನತ್ತ ಹೋಗುತ್ತದೆ. ಈ ಪಾರು ಅರ್ಥಾತ್ ಮೋಕ್ಷಿತಾ ಪೈ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿ ಹಾರ್ಟ್ ಟಚಿಂಗ್ ವಿಡಿಯೋ ಒಂದನ್ನು ಶೇರ್ ಮಾಡಿದೆ. ನಟಿಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಕಳೆದ ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಪಾರು (Paaru) ಇಷ್ಟು ವರ್ಷಗಳ ಬಳಿಕವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿದೆ. ಈ ಧಾರಾವಾಹಿಯಲ್ಲಿ ಪಾರುವಿನದ್ದು ತ್ಯಾಗಮಯ ಪಾತ್ರ. ಅದು ಎಷ್ಟರಮಟ್ಟಿಗೆ ಎಂದರೆ ಮೈದುನನ ಪತ್ನಿಗಾಗಿ ತನ್ನ ಮಗುವನ್ನೇ ತ್ಯಾಗ ಮಾಡಿದ್ದಾಳೆ. ಮೈದುನನ ಪತ್ನಿ ಜನನಿ ತನ್ನ ಮಗುವನ್ನು ಕಳೆದುಕೊಂಡಾಗ ಅದು ಆಕೆಗೆ ಗೊತ್ತಾಗಬಾರದು ಎಂದು ಪಾರು ತನ್ನ ಮಗುವನ್ನೇ ಆಕೆಗೆ ಕೊಟ್ಟಿದ್ದಾಳೆ. ಇದು ಜನನಿಗೆ ತಿಳಿದಿಲ್ಲ. ಇಂಥ ತ್ಯಾಗಮಯ ಪಾತ್ರ ಮಾಡುತ್ತಿದ್ದಾರೆ ಪಾರು ಅರ್ಥಾತ್ ಮೋಕ್ಷಿತಾ ಪೈ.
ಧಾರಾವಾಹಿಯಲ್ಲಿ ಬಿಡಿ, ಏನು ಬೇಕಾದರೂ ಆಗಬಹುದು ಎನ್ನಬಹುದು. ಆದರೆ ಅಸಲಿ ಜೀವನದಲ್ಲಿಯೂ ಮೋಕ್ಷಿತಾ ಅವರನ್ನು ನೋವಿನ ಕಥೆಯೇ. ತಮ್ಮ ಮುಗ್ಧ ನಗು ಹಾಗೂ ಅಷ್ಟೇ ಮುಗ್ಧ ಪಾತ್ರಗಳಿಂದ ಧಾರಾವಾಹಿಗೆ ಜೀವ ತುಂಬುತ್ತಿರುವ ಈ ನಟಿಯ ಬಾಳಿನಲ್ಲಿ ಮಾತ್ರ ಅತ್ಯಂತ ನೋವು ತುಂಬಿದೆ. ತೆರೆಯ ಮೇಲೆ ತಮ್ಮ ನಗುವಿನ ಮೂಲಕ ರಂಜಿಸುವ ಪಾರು ಅಲಿಯಾಸ್ ಮೋಕ್ಷಿತಾ ಪೈ ಅವರ ಜೀವನದಲ್ಲಿಯೂ ನೋವು ತುಂಬಿದೆ. ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆತ ಮಾನಸಿಕ ಅಸ್ವಸ್ಥ. ಆತನ ಆರೈಕೆ ಮಾಡುವ ಜವಾಬ್ದಾರಿ ಮೋಕ್ಷಿತಾ ಅವರ ಮೇಲಿದೆ. ಒಮ್ಮೆ ರಿಯಾಲಿಟಿ ಷೋ (Reality Show) ಒಂದಕ್ಕೆ ತಮ್ಮ ತಮ್ಮನನ್ನು ಕರೆದುಕೊಂಡು ಬಂದಿದ್ದ ಪಾರು ಅವರು, ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು. ಆಗಾಗ್ಗೆ ತಮ್ಮನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
16ಕ್ಕೆ ಮದ್ವೆ, 17ಕ್ಕೆ ಇಬ್ಬರು ಮಕ್ಕಳು, 18ಕ್ಕೆ ಡಿವೋರ್ಸ್: ಕಿರುತೆರೆಗೆ ಮರಳಿದ ಈ ಬಿಗ್‌ಬಾಸ್ ವಿಜೇತೆ!
ಈ ಸಹೋದರನಿಗಾಗಿಯೇ ತಮ್ಮ ಕನಸನ್ನೂ ನನಸು ಮಾಡಿಕೊಳ್ಳಲು ಆಗದೇ ನೋವುಂಡವರು ಮೋಕ್ಷಿತಾ. ನಟನಾ ಕ್ಷೇತ್ರಕ್ಕೆ ತಾವು ಕಾಲಿಡುತ್ತೇವೆ ಎಂಬ ಕನಸು ಕಂಡಿರಲಿಲ್ಲ. ಆದರೆ ಅವರ ಇಂಟರೆರಸ್ಟ್ ಇದ್ದುದು ಫ್ಯಾಷನ್ ಡಿಸೈನಿಂಗ್ ಮೇಲೆ. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಈ ಕೋರ್ಸ್ ಅನ್ನು ಸೇರಿದ್ದರು. ಆದರೆ ಅದಾಗಲೇ ಅವರ ಅಮ್ಮ ಗೋದಾವರಿಯವರು, ಬುದ್ಧಿಮಾಂದ್ಯ ಮಕ್ಕಳ ಬಗೆಗಿನ ಉನ್ನತ ಅಧ್ಯಯನಕ್ಕೆ ತೆರಳಿದ್ದರಿಂದ ಮೋಕ್ಷಿತಾ ತಮ್ಮನ ಆರೈಕೆ ಮಾಡುವುದಕ್ಕಾಗಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ (Fashion Desiging Course) ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂದಿತ್ತು. ಅಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋದ ಕಾರಣಕ್ಕೆ, ಹದಿಹರೆಯದಲ್ಲಿಯೇ ತಮ್ಮನ ಸಂಪೂರ್ಣ ಹೊಣೆ ಹೊತ್ತವರು ಮೋಕ್ಷಿತಾ. ಅಮ್ಮ ವಾಪಸ್ ಬರುವವರೆಗೂ ಮೋಕ್ಷಿತಾ ಅವರದ್ದೇ ಜವಾಬ್ದಾರಿ.
ತಮ್ಮನ ಪಾಲಿನ ಅಪ್ಪ- ಅಮ್ಮ ಇಬ್ಬರೂ ಇವರೇ ಆದರು. ಈ ತಮ್ಮನಿಗೂ ಅಕ್ಕನೇ ಅಮ್ಮ ಆಗಿಬಿಟ್ಟಿದ್ದು, ತಮ್ಮನ್ನು ಆತ ತುಂಬಾ ಇಷ್ಟಪಡುವ ಬಗ್ಗೆ ಮೋಕ್ಷಿತಾ ಹೇಳುತ್ತಾರೆ. ಈಗ ಧಾರಾವಾಹಿಯಲ್ಲಿ ಬಿಜಿ ಇದ್ದರೂ ತಮ್ಮನ ಆರೈಕೆಯನ್ನು ಮರೆಯುವುದಿಲ್ಲ. ಆಗಾಗ್ಗೆ ತಮ್ಮನ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ಶಿಲ್ಪಾ ಶೆಟ್ಟಿ ಪತಿ ಸಪರೇಟ್ ಆಗಿದ್ದು ಯಾಕೆ? ವಿಡಿಯೋ ಮೂಲಕ ಮೌನ ಮುರಿದ ರಾಜ್ ಕುಂದ್ರಾ!