ಅಮೃತಧಾರೆ: ಛಾಯಾ ಸಿಂಗ್ ರಾಜೇಶ್ ನಟರಂಗಗೆ ಅಣ್ಣಾ ಅಂತಿದ್ರಂತೆ! ಕಾರಣವಿಲ್ಲಿದೆ
ಮಧ್ಯ ವಯಸ್ಸಿನ ಗಂಡು ಹೆಣ್ಣಿನ ನಡುವಿನ ಜಗಳ, ರೊಮ್ಯಾನ್ಸ್, ಹೊಂದಾಣಿಕೆಗಳ ಕಥೆ 'ಅಮೃತಧಾರೆ'. ಇದರಲ್ಲಿ ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ನಟಿಸುತ್ತಿದ್ದಾರೆ. ಆದರೆ ಛಾಯಾಸಿಂಗ್ ಈ ಸೀರಿಯಲ್ ಶೂಟಿಂಗ್ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಈ ವಿಷಯವನ್ನೂ ಅವರೇ ಹೇಳಿದ್ದು. ಸೆಟ್‌ನಲ್ಲಿ ಅಂಥದ್ದೇನಾಯ್ತು?
ಅಮೃತಧಾರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸಖತ್ ಪಾಪ್ಯುಲರ್ ಸೀರಿಯಲ್. ಇದರಲ್ಲಿ ಗೌತಮ್ ದಿವಾನ್ ಎಂಬ ಲೀಡ್ ಪಾತ್ರದಲ್ಲಿ 'ಮೊಗ್ಗಿನ ಮನಸು' ಸಿನಿಮಾದ ಸ್ಮಾರ್ಟ್ ಲೆಕ್ಚರರ್ ರಾಜೇಶ್ ನಟರಂಗ ಕಾಣಿಸಿಕೊಂಡಿದ್ದಾರೆ. ಮಹಾ ಸ್ವಾಭಿಮಾನಿ, ಕೊಂಚ ತರಲೆ, ಪ್ರೀತಿಗಾಗಿ ಒಳಗೊಳಗೇ ಹಂಬಲಿಸುವ ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್ ನಟಿಸಿದ್ದಾರೆ. ಅಷ್ಟಕ್ಕೂ ರಾಜೇಶ್ ಮತ್ತು ಛಾಯಾ ಪರಸ್ಪರ ಪರಿಚಿತರೇ. ಬಹಳ ಹಿಂದೆ ಈಟಿವಿಯಲ್ಲಿ ಒಂದು ಸೀರಿಯಲ್‌ನಲ್ಲಿ ಈ ಇಬ್ಬರೂ ಅಣ್ಣ ತಂಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಸೀರಿಯಲ್‌ನಿಂದ ಈ ಜೋಡಿ ಅಣ್ಣ ತಂಗಿ ಜೋಡಿ ಅಂತನೇ ಫೇಮಸ್ ಆಗಿತ್ತು. ಆದರೆ ಇದಾಗಿ ಕೆಲವು ವರ್ಷಗಳಾಗಿರುವ ಕಾರಣಕ್ಕೆ ಜನಕ್ಕೆ ಮರೆತು ಹೋಗಿದೆ. ಆದರೆ ಛಾಯಾ ಸಿಂಗ್‌ಗೆ ಮಾತ್ರ ಮರೆತಿಲ್ಲ. ಅವರು ಸೆಟ್‌ನಲ್ಲಿ ಮೊದಲ ಸಲ ರಾಜೇಶ್ ನಟರಂಗ ನೋಡಿದಾಗ 'ಅಣ್ಣಾ' ಅಂದರಂತೆ. ಅಯ್ಯೋ ದೇವ್ರೇ ರೊಮ್ಯಾಂಟಿಕ್ ಕಪಲ್ ಆಗಿ ನಟಿಸಬೇಕಾಗಿರೋರು ಇದೇನು ಅಣ್ಣ ತಂಗಿ ಅಂತೆಲ್ಲ ಮಾತಾಡ್ತಿದ್ದಾರಲ್ಲ ಅಂತ ಅಲ್ಲಿರೋರಿಗೆ ಟೆನ್ಶನ್ ಆಗಿತ್ತು. ಪುಣ್ಯ ಆಮೇಲೆ ಛಾಯಾ ಅವರು ರಾಜೇಶ್ ಅವರನ್ನು ಅಣ್ಣ ಅಂತ ಕರೀತಿಲ್ಲ. ಇಲ್ಲಾಂದ್ರೆ ಆಕೆ ಅಣ್ಣ ಅಂತಿದ್ರೆ ರೊಮ್ಯಾಂಟಿಕ್ ಸೀನ್‌ಗಳಲ್ಲಿ ಏನು ಮಾಡೋದಪ್ಪ ಅಂತ ರಾಜೇಶ್ ಅವರಿಗೆ ಟೆನ್ಶನ್ ಆಗಿತ್ತಂತೆ.
ಸೆಟ್‌ನಲ್ಲಿ ನಾವಿಬ್ರೂ ಯಾವತ್ತೂ ಗಲಾಟೆ ಮಾಡಿಲ್ಲ, ಜಗಳ ಆಡಿಲ್ಲ, ಟಚ್ ವುಡ್ ಅಂತ ಕೂತಿದ್ದ ಕುಶನ್ ಸೋಫಾ ಮುಟ್ಟಿ ರಾಜೇಶ್ ಮತ್ತು ಛಾಯಾ ಹೇಳಿದ್ದಾರೆ. ಆದರೆ ಛಾಯಾ ಸಿಂಗ್ ಸೆಟ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗವನ್ನೂ ಸಖತ್ ಇಂಟರೆಸ್ಟಿಂಗ್ ಆಗಿ ಹಂಚಿಕೊಂಡಿದ್ದಾರೆ. ಛಾಯಾ ಸಿಂಗ್‌ಗೆ ಮೊದಲಿಂದಲೂ ಸಿಕ್ಕಾಪಟ್ಟೆ ಕೆಲಸ ಮಾಡಬೇಕು ಅಂತ ಆಸೆ. ಹೀಗಾಗಿ ಬೆಳಗ್ಗೆ ಅವರನ್ನು ಪಿಕ್ ಮಾಡೋಕೆ ಕಾರು ಬರೋ ಮುಂಚೆನೇ ರೆಡಿ ಆಗಿ ಯಾಕೆ ಕಾರು ಇನ್ನೂ ಬಂದಿಲ್ಲಪ್ಪ ಅಂತ ಹತ್ತಾರು ಸಲ ಕೊರಳುದ್ದ ಮಾಡಿ ನೋಡ್ತಾರಂತೆ. ಸೆಟ್‌ನಲ್ಲಿ ಪ್ಯಾಕಪ್ ಅನ್ನೋ ಸೈರನ್ ಮೊಳಗಿದ್ರೆ ರಾಜೇಶ್, ಛಾಯಾ ಇಬ್ರಿಗೂ ಇಷ್ಟ. 'ನಂಗೆ ಸೆಟ್‌ನಲ್ಲಿ ಬೆಳಗ್ಗೆ ತಿಂಡಿ ತಿಂದಾಕ್ಷಣ ಪ್ಯಾಕಪ್ ಅಂದ್ರೂ ಸಖತ್ ಖುಷಿ ಆಗುತ್ತೆ' ಅಂತ ರಾಜೇಶ್ ಅಂದ್ರೆ, 'ನಂಗೆ ಕೆಲ್ಸ ಆಗಿ ಪ್ಯಾಕಪ್ ಅಂದ್ರೇನೇ ಖುಷಿ' ಅಂತ ಛಾಯಾ ಹೇಳ್ತಾರೆ. ಇಷ್ಟು ವರ್ಕ್‌ನಲ್ಲಿ ಡೆಡಿಕೇಟೆಡ್ ಆಗಿರೋ ಛಾಯಾ ಬಿಕ್ಕಿ ಬಿಕ್ಕಿ ಅಳುವಂಥಾ ಪ್ರಸಂಗ ಏನು ಬಂತಪ್ಪಾ ಅನ್ನೋದು ಅಚ್ಚರಿ ಮೂಡಿಸುತ್ತೆ. ಅದಕ್ಕೆ ಉತ್ತರ ಛಾಯಾ ಅವರೇ ಹೇಳ್ತಾರೆ.
ವಿಚ್ಛೇದನ ಪಡೆದ ಬಿಗ್ ಬಾಸ್ ಚೈತ್ರಾ ವಾಸುದೇವನ್; ಕಾಮೆಂಟ್ ಸೆಕ್ಷನ್ ಆಫ್ ಮಾಡಿದ ನಿರೂಪಕಿ!
'ಅವತ್ತು ಬೆಳಗ್ಗೆ ಏಳು ಗಂಟೆಗೆ ಫಸ್ಟ್ ಶಾಟ್ ಇತ್ತು. ಅದು ನನ್ನ ಪಾತ್ರದ ಇಂಟ್ರಡಕ್ಷನ್ ಶಾಟ್. ಆದರೆ ಅವತ್ತು ಈ ಒಂದು ಶಾಟ್ ಮುಗಿದಾಗ ಗಂಟೆ ಹತ್ತು ದಾಟಿತ್ತಂತೆ. ಒಂದು ಕಡೆ ಸುಸ್ತು, ಇನ್ನೊಂದು ಕಡೆ ಬೇಜಾರು, ಮತ್ತೊಂದು ಕಡೆ ಕೋಪ, ಮಗದೊಂದು ಕಡೆ ರೆಸ್ಟ್‌ಲೆಸ್‌ನೆಸ್ .. ಇದೆಲ್ಲ ಸೇರ್ಕೊಂಡು ಅವತ್ತ ಸೆಟ್‌ನಲ್ಲಿ ಛಾಯಾ ಸಿಂಗ್ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರಂತೆ. ಕೆಲಸದಲ್ಲಿ ಸೋಮಾರಿತನ ಎಂದಿಗೂ ಮಾಡದ ಛಾಯಾಗೆ ಹೀಗಾಗಿದ್ದು ಮಾತ್ರ ಸಖತ್ ಬೇಜಾರಾಯ್ತಂತೆ. ಈ ಥರ ಕಂಟಿನ್ಯುಯಸ್ ಶಾಟ್‌ಗಳು, ಬೆಳಗ್ಗಿಂದ ಮಧ್ಯರಾತ್ರಿವರೆಗಿನ ಶೂಟ್‌ಗಳೆಲ್ಲ ವಿಪರೀತ ದಣಿಸುತ್ತವೆ ಅನ್ನೋ ಛಾಯಾ, 'ನಂಗೆ ಮೊದಲಿಂದಲೂ ತುಂಬ ಕೋಪ ಬಂದ್ರೂ ಅಳು ಬರುತ್ತೆ, ತುಂಬ ಬೇಜಾರಾದ್ರೂ ಅಳು ಬರುತ್ತೆ, ಹರ್ಟ್ ಆದರೂ ಅಳು ಬರುತ್ತೆ' ಅನ್ನೋ ತಮ್ಮ ಅಳುವಿನ ಹಿನ್ನೆಲೆಯನ್ನು ತೆರೆದಿಡ್ತಾರೆ.
ಛಾಯಾ ಸಿಂಗ್ ಅವರ ಈ ಮಾತನ್ನು ಕೇಳಿ ಅಮೃತಧಾರೆ ಫ್ಯಾನ್ಸ್, 'ಪ್ಲೀಸ್ ನಮ್ ಭೂಮಿಕಾ ಮೇಡಂ ತುಂಬ ಒಳ್ಳೇವ್ರು, ಅವ್ರನ್ನು ಅಳಿಸಬೇಡಿ ದೇವ್ರೂ..' ಅಂತ ಸೀರಿಯಲ್ ಟೀಮ್‌ಗೆ ರಿಕ್ವೆಸ್ಟ್ ಮೇಲೆ ರಿಕ್ವೆಸ್ಟ್ ಮಾಡ್ತಿದ್ದಾರೆ.
ಸೀತಾರಾಮ ಸೀರಿಯಲ್‌ನ ಸಿಹಿ ಮುದ್ದು ರೀತು ಸಿಂಗ್ ಕನ್ನಡದವಳಲ್ಲ, ಭಾಷೆ ಕಲಿತಿದ್ದು ಹೇಗೆ?