'ನಮ್ಮೂರ ಜಾತ್ರೆಗೆ ಬರೋ ಬೆಂಕಿ ಲತಾ..' ನಿವೇದಿತಾ ಗೌಡ ಬಾಡಿ ಶೋಗೆ ಬ್ಯಾಂಡ್‌ ಬಜಾಯಿಸಿದ ನೆಟ್ಟಿಗರು!

ನಿವೇದಿತಾ ಗೌಡ ಅವರ ಹೊಸ ವರ್ಷದ ಸಿರೀಸ್ ಪೋಸ್ಟ್‌ಗಳಲ್ಲಿ ಟೂಪೀಸ್‌ನಲ್ಲಿ ಸೊಂಟ ಬಳುಕಿಸಿರುವ ವಿಡಿಯೋ ವೈರಲ್ ಆಗಿದೆ. ಈ ಪೋಸ್ಟ್‌ಗೆ ಹೆಚ್ಚಾಗಿ ಮಹಿಳೆಯರಿಂದಲೇ ಕೀಳು ಕಾಮೆಂಟ್‌ಗಳು ಬಂದಿವೆ.

niveditha gowda Social Media Post With Bikini Fans Trolled Her BodyShow san

ನಿವೇದಿತಾ ಗೌಡ ಇನ್ನೂ ಹೊಸ ವರ್ಷದ ಮೂಡ್‌ನಿಂದ ಹೊರಬಂದ ಹಾಗೆ ಇಲ್ಲ. ಅದಕ್ಕಿಂತ ಮುಖ್ಯವಾಗಿ ಅವರ ಹೊಸ ವರ್ಷದ ಸಿರೀಸ್‌ ಪೋಸ್ಟ್‌ಗಳಲ್ಲಿ ನೆಟ್ಟಿಗರು ತೀರಾ ವಿಶೇಷವಾದದನ್ನು ಕಂಡುಹಿಡಿದಿದ್ದಾರೆ. ದಿನದಿಂದ ದಿನಕ್ಕೆ ಅವರು ಪೋಸ್ಟ್‌ ಮಾಡುತ್ತಿರುವ ವಿಡಿಯೋಗಳಲ್ಲಿ ಬಟ್ಟೆಯ ಸಂಖ್ಯೆ ಮತ್ತಷ್ಟು ಮಗದಷ್ಟು ಚಿಕ್ಕದಾಗುತ್ತಿದೆ. ಶನಿವಾರ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ಹೆಚ್ಚೂ ಕಡಿಮೆ ಅವರು ಟೂಪೀಸ್‌ನಲ್ಲಿಯೇ ಸೊಂಟ ಬಳುಕಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಎಂದಿನಂತೆ ಅವರ ಈ ಪೋಸ್ಟ್‌ಗಳು ಕಾಮೆಂಟ್‌ಗಳ ಸುರಿಮಳೆಯಾಗಿದೆ. ಹೆಚ್ಚಾಗಿ ಹೆಣ್ಣುಮಕ್ಕಳೇ ನಿವೇದಿತಾ ಗೌಡ ಅವರ ಬಟ್ಟೆಯ ಬಗ್ಗೆ ಕೀಳು ಕಾಮೆಂಟ್‌ ಪೋಸ್ಟ್‌ ಮಾಡಿದ್ದಾರೆ. ಚಂದನ್‌ ಶೆಟ್ಟಿ ಅವರು ನಿಮಗೆ ಈ ರೀತಿಯ ಬಟ್ಟೆ ಹಾಕೋಕೆ ಬಿಡೋದಿಲ್ಲ ಅನ್ನೋ ಕಾರಣಕ್ಕೆ ನೀವು ಅವರಿಗೆ ವಿಚ್ಛೇದನ ನೀಡಿರಬೇಕು ಎಂದು ಅಂದಾಜಿಸಿದ್ದಾರೆ.
ಇದಕ್ಕೂ ಮುನ್ನ ಅವರು ಪೋಸ್ಟ್‌ ಮಾಡಿದ್ದ ವಿಡಿಯೋದಲ್ಲೂ ಬಿಕಿನಿಯಲ್ಲೇ ಕಾಣಿಸಿಕೊಂಡಿದ್ದರು. ಆದರೆ, ಅದರಲ್ಲಿ ಕನಿಷ್ಠ ಮೈಮುಚ್ಚುವಂತೆ ವಸ್ತ್ರವಾದರೂ ಇತ್ತು. ಮೈಮುಚ್ಚಿಕೊಳ್ಳುವ ನೆಪ ಮಾಡಿ ಬಿಕಿನಿಯಲ್ಲಿಯೇ ನಿವೇದಿತಾ ವಿಡಿಯೋ ಮಾಡಿದ್ದರು. ಈ ವಿಡಿಯೋವನ್ನು 10.7 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದರು.

ಆದರೆ, ಇಂದು ಹಂಚಿಕೊಂಡ ವಿಡಿಯೋದಲ್ಲಿ ಟೂಪೀಸ್‌ ಧರಿಸಿ ಸೊಂಟಕ್ಕೊಂದು ವಸ್ತ್ರ ಸುತ್ತಿಕೊಂಡು ಡಾನ್ಸ್‌ ಮಾಡಿರುವ ವಿಡಿಯೋ 6 ಗಂಟೆಯಲ್ಲೇ 6.5 ಮಿಲಿಯನ್‌ ವೀಕ್ಷಣೆ ಕಂಡಿದೆ. 89 ಸಾವಿರ ಮಂದಿ ಲೈಕ್ ಬಂದಿದ್ದು, 2 ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್‌ ಮಾಡಿದ್ದಾರೆ. 'ನಿಮ್ಮಂಥವರಿಂದಾನೆ ಭಾರತದಲ್ಲಿ ರೇಪ್ ಗಳು ಜಾಸ್ತಿ ಆಗಿರೋದು..' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 'ನಿನ್ನೆಯ ವಿಡಿಯೋದಲ್ಲಿ ಮೇಲೆ ಕನಿಷ್ಠ ಒಂದು ಬಟ್ಟೆ ಆದರೂ ಇತ್ತು. ಇವತ್ತು ಅದೂ ಇಲ್ಲ. ನಾಳೆ  ಇನ್ನೊಂದು ಬಾಕಿ' ಎಂದು ಬರೆದಿದ್ದಾರೆ.

ಈ ವಿಡಿಯೋದಲ್ಲಿ ನೀನು ಚಡ್ಡಿಯೇ ಹಾಕೊಂಡಿಲ್ಲ. ಕನಿಷ್ಠ ಚಡ್ಡಿ ಹಾಕಿಯಾದ್ರೂ ರೀಲ್ಸ್‌ ಮಾಡು ಎಂದು ಮತ್ತೊಬ್ಬರು ಬರೆದಿದ್ದಾರೆ. 'ನಿನ್ನೆ ಸ್ವಲ್ಪ, ಇವತ್ತು ಸ್ವಲ್ಪ, ನಾಳೆ ಸಂಡೇ ಬೇರೆ.. ಯಾವ ಥರ ಪೋಸ್ಟ್‌ ಮಾಡ್ತಿಯೋ.. ಅಷ್ಟಕ್ಕೂ ನಮ್ಮ ಬಾಯ್ಸ್‌ಗೆಲ್ಲಾ ಯಾಕೆ ಈ ಥರ ಉರಿಸ್ತಿದ್ದೀಯಾ?' ಎಂದು ಪ್ರಶ್ನೆ ಮಾಡಿದ್ದಾರೆ.

Love the Wind ಎನ್ನುತ್ತಾ ಮೈಮುಚ್ಚುವಂತೆ ಮಾಡಿ, ಬಿಕಿನಿಯಲ್ಲೇ ಕಾಣಿಸಿಕೊಂಡ ನಿವೇದಿತಾ

'ಅದೆಷ್ಟೇ ಮಾಡರ್ನ್‌ ಲೈಫ್ ಇದ್ದರೂ ಒಮ್ಮೆ ಮದುವೆ ಆಗಿ ವಿಚ್ಛೇದನ ಆದ ಮೇಲೆ ವಯಸ್ಸು ಕಮ್ಮಿ ಇದ್ದರೂ ಸಹ, ಮಾನಸಿಕವಾಗಿ ನೀವು ದೊಡ್ಡವರು ಅಥವಾ ವಿವಾಹಿತರು ಅಲ್ವಾ, ಹೆಂಗೆ ನೀವು ಅಪ್ರಾಪ್ತ ವಯಸ್ಸಿನ ಹುಡುಗಿ ಹಾಗೆ ಇರಲು ಸದ್ಯ. ಸ್ವಲ್ಪ ಏನು ಮುಜುಗುರ ಆಗಲ್ವಾ ನಿಮಗೆ..' ಎಂದು ಪ್ರಶ್ನಿಸಿದ್ದಾರೆ. 'ಇನ್ನೂ ಬೇಕಾಗಿದೆ ನಮಗೆ ಇನ್ನೂ ಬೇಕಾಗಿದೆ ಬಟ್ಟೆ ಉಳುಕೊಂಡಿದೆ ಮೈ ಮೇಲೆ ಸ್ವಲ್ಪ ಬಟ್ಟೆ ಊಳ್ಕೊಂಡಿದೆ..' ಎಂದು ಇನ್ನೊಬ್ಬ ಯೂಸರ್‌ ಪೋಸ್ಟ್‌ ಮಾಡಿದ್ದಾರೆ. ಬಹುಶಃ ನಿವೇದಿತಾ ಕೆಟ್ಟ ಕಾಮೆಂಟ್‌ಗಳ ಇಷ್ಟ ಪಡ್ತಾರೆ ಅಂತಾ ಕಾಣುತ್ತೆ ಅದಕ್ಕಾಗಿಯೇ ಅವರು ಬೆನ್ನುಬೆನ್ನಿಗೆ ಈ ರೀತಿ ರೀಲ್ಸ್‌ ಪೋಸ್ಟ್‌ ಮಾಡ್ತಾ ಇದ್ದಾರೆ ಎಂದು ಬರೆದಿದ್ದಾರೆ.

ನಿವೇದಿತಾ ಗೌಡ VS ಜ್ಯೋತಿ ರೈ: ಹಾಟ್‌ನೆಸ್‌ನಲ್ಲಿ ಯಾರು ಬೆಸ್ಟ್‌!

 

Latest Videos
Follow Us:
Download App:
  • android
  • ios