ಅನುಬಂಧ ಸ್ಟೇಜ್‌ನಲ್ಲಿ ಸಖತ್ ಫನ್ ಡ್ರೆಸ್ ಭಾರ ಕೇಳಿದ್ರೆ ಎತ್ನೋಡಿ ಅನ್ನೋದಾ ನಿವೇದಿತಾ ಸೃಜನ್‌ಗೆ ನಗು, ಚಂದನ್‌ ಶಾಕ್..!

ಕಲರ್ಸ್ ಕನ್ನಡದ(Colors Kannada) ಅನುಬಂಧ ಅವಾರ್ಡ್ 2021(Anubandha Awards) ಸದ್ಯ ಸಖತ್ ಫನ್ ಕೊಡುತ್ತಿದೆ. ಕನ್ನಡಿಗರ ನೆಚ್ಚಿನ ಮನೊರಂಜನಾ ಚಾನೆಲ್ ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಅವಾರ್ಡ್ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಕಿರುತೆರೆ ತಾರೆಗಳ ಝಲಕ್ ಸದ್ದು ಮಾಡುತ್ತಿದೆ.

ರಾಜರಾಣಿ ರಿಯಾಲಿಟಿ ಶೋ ಸೆಲೆಬ್ರಿಟಿಗಳು, ಕಿರುತೆರೆ ಧಾರವಾಹಿ ಕಲಾವಿದರು ಕಾರ್ಯಕ್ರಮದಲ್ಲಿ ಸಖತ್ ಫನ್ ಮಾಡುತ್ತಿದ್ದಾರೆ. ಒಂದಷ್ಟು ಗೇಮ್ಸ್, ತಮಾಷೆ, ಡ್ಯಾನ್ಸ್, ತೆಲೆ ಹರಟೆ ಜೊತೆಗೆ ಅವಾರ್ಡ್ ಸೆರೆಮನಿ ಸಂಭ್ರಮದಿಂದ ನಡೆಯುತ್ತಿದೆ. ಡಾಲಿ ಧನಂಜಯ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶೋಗೆ ಸ್ಟಾರ್ ರಂಗು ತುಂಬಿದ್ದಾರೆ.

ಅವಸರದಲ್ಲಿ ಜಿಲೇಬಿ ತಿನ್ನಲು ಹೋಗಿ ಚಂದನ್‌ ಶೆಟ್ಟಿ ಬೆರಳು ಕಚ್ಚಿದ ನಿವೇದಿತಾ ಗೌಡ!

ಅಕ್ಟೋಬರ್ 15ರಂದು ರಾತ್ರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಅನುಬಂಧ ಅವಾರ್ಡ್‌ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದು ನಿವೇದಿತಾ ಗೌಡ. ಬಿಗ್‌ಬಾಸ್ ಖ್ಯಾತಿಯ ಸುಂದರಿ, ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ(Niveditha Gowda) ಗೇಮ್‌ನಲ್ಲಿ ಎಂಜಾಯ್ ಮಾಡಿ ಗಿಫ್ಟ್ ಗೆದ್ದಿದ್ದಾರೆ.

ಫನ್ ಗೇಮ್ ಆಡಿಸಿದ ನಿರೂಪಕ ಸೃಜನ್ ಲೋಕೇಷ್‌(Srujan Lokesh)ಗೆ ಫನ್ನಿ ಫನ್ನಿ ಉತ್ತರ ಕೊಟ್ಟಿರೋ ನಿವೇದಿತಾ ಗೌಡ ಗೇಮ್ ಹವರ್ ಎಂಜಾಯ್ ಮಾಡುವುದರ ಜೊತೆಗೆ ಪ್ರೇಕ್ಷಕರನ್ನೂ ನಗಿಸಿದ್ದಾರೆ. ಪತಿ ಚಂದನ್ ಶೆಟ್ಟಿ ಪ್ರೇಕ್ಷಕನಾಗಿ ಪತ್ನಿಯ ಗೇಮ್ ನೋಡಿ ರಿಯಾಕ್ಟ್ ಮಾಡಿದ್ದು ಇನ್ನೂ ಸೊಗಸಾಗಿತ್ತು.

ಗೇಮ್ ಗೆದ್ದ ನಿವೇದಿತಾ ಚಾಕಲೇಟ್ ಬಾಕ್ಸ್ ಗೆದ್ದಿದ್ದು ಫುಲ್ ಖುಷಿಯಾಗಿದ್ದಾರೆ. ಗಾಢ ಹಸಿರು ಬಣ್ಣದ ಲೆಹಂಗಾ ಧರಿಸಿಕೊಂಡು ಬಂದಿದ್ದ ನಿವೇದಿತಾ ತಮ್ಮ ಉಡುಪನ್ನು ಸಂಭಾಳಿಸಲು ಕಷ್ಟಪಟ್ಟಿದ್ದು ಹೌದು. ಗೇಮ್ ಕೊನೆಯಲ್ಲಿ ಸೃಜನ್ ಈ ಬಟ್ಟೆ ತುಂಬಾ ಭಾರ ಇದೆಯಾ ಎಂದು ಕೇಳಿದಾಗ ಎತ್ತಿ ನೋಡಿ ಎಂದಿದ್ದಾರೆ ನಿವೇದಿತಾ. ಇದನ್ನು ಭಿನ್ನ ಅರ್ಥದಲ್ಲಿ ತೆಗೆದುಕೊಂಡ ಸೃಜನ್ ಹಾಗೂ ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ.

View post on Instagram

ಇದು ಫ್ಯಾಮಿಲಿ ಶೋ ಹಾಗೆಲ್ಲಾ ಆಗಲ್ಲ ಎಂದಿರೋ ಸೃಜನ್ ಮಾತಿಗೆ ಚಂದನ್ ಕೂಡಾ ನಕ್ಕಿದ್ದಾರೆ. ಪ್ರೇಕರಂತೂ ನಿವೇದಿತಾರ ಮುಗ್ಧ, ನೇರ ಮಾತಿಗೆ ನಗುವುದರ ಜೊತೆ ಜೊತೆಗೆ ಕರ್ಯಕ್ರಮವನ್ನೂ ಗೇಮ್ಸ್‌ಗಳನ್ನು ಎಂಜಾಯ್ ಮಾಡಿದ್ದಾರೆ. ಈ ಬಾರಿ ಅನುಬಂಧ ಅವಾರ್ಡ್ಸ್‌ನಲ್ಲಿ ಬಹಳಷ್ಟು ಸೆಲೆಬ್ರಿಟಿ ರಂಗು ತುಂಬಿದ್ದು, ಕಿರುತೆರೆ ಕಲಾವಿದರ ಜೊತೆ ಬೆಳ್ಳಿ ತೆರೆ ಕಲಾವಿದರು ಬಂದು ಸಂಭ್ರಮವನ್ನು ದುಪ್ಪಟ್ಟು ಹೆಚ್ಚಿಸಿದ್ದಾರೆ. ಕಾರ್ಯಕ್ರಮದ ಪ್ರೋಮೋಗಳು, ಫೋಟೋ, ವಿಡಿಯೋಗಳು ಈಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿವೆ.