ಪತಿ ಚಂದನ್ ಶೆಟ್ಟಿನ cookie ಎಂದು ಕರೆದು ಮೊದಲ ದಿನವೇ ನಿವೇದಿತಾ ಗೌಡ ಟ್ರೋಲ್!
ಪತಿಯನ್ನು ವೇದಿಕೆ ಮೇಲೆ ನಿವೇದಿತಾ ಗೌಡ ಕರೆದ ರೀತಿಗೆ ಹಾಸ್ಯ ಮಾಡಿದ ಸೃಜನ್ ಲೋಕೇಶ್. ಡ್ರಾಮಾ ಮಾಡ್ತಿರೋದು ಯಾರು?
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಆರಂಭವಾದ ಹಾಸ್ಯ ಕಾರ್ಯಕ್ರಮ ಗಿಚ್ಚಿ ಗಿಲಿಗಿಲಿಯಲ್ಲಿ (Gichi Giligili) ಕಿರುತೆರೆಯ ಬಾರ್ಡಿ ಬಾಲ್ ನಿವೇದಿತಾ ಗೌಡ (Niveditha Gowda) ಕೂಡ ಸ್ಪರ್ಧಿಸುತ್ತಿದ್ದಾರೆ. ಪ್ರೋಮೋದಲ್ಲಿ ತಮ್ಮನ ತಾವೇ ಟ್ರೋಲ್ (troll) ಮಾಡಿ ಕೊಂಡ ನಿವೇದಿತಾ ಗೌಡ ಗ್ರ್ಯಾಂಡ್ ಓಪನಿಂಗ್ ದಿನ ಪತಿಯನ್ನು ಕರೆಯುವ ರೀತಿಗೆ ಮತ್ತೆ ಟ್ರೋಲ್ ಆಗಿದ್ದಾರೆ. ಪದೇ ಪದೇ ಟ್ರೋಲ್ ಅಗುತ್ತಿರುವ ಕಾರಣ ನೀವೂ ಕೂಡ ನ್ಯಾಷನಲ್ ಕ್ರಶ್ ಆಗಿ ರಶ್ಮಿಕಾ ಮಂದಣ್ಣ (Rashmika Mandanna) ರೇಂಜ್‌ಗೆ ಬೆಳೆಯ ಬಹುದು ಎಂದು ನೆಟ್ಟಿಗರು ಲೆಕ್ಕಚಾರ ಹಾಕುತ್ತಿದ್ದಾರೆ.
ಗ್ರೀನ್ ಆಂಡ್ ಬ್ಲೂ ಕಾಂಬಿನೇಷನ್ ಬಾರ್ಬಿ ಗೌನ್ (Barbie Gown) ಧರಿಸಿದ ನಿವೇದಿತಾ ಗೌಡ ಕನ್ನಡದ I'm a barbie girl ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಂಜು ಪಾವಗಡ (Manju pavagada) ನಿರೂಪಣೆ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ಏನಾದರೂ ಒಂದು ಸರ್ಪ್ರೈಸ್ ಇರಬೇಕು ಎಂದು ನಿವಿ ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ (Chandan Shetty) ಅವರನ್ನು ವೇದಿಕೆ ಮೇಲೆ ಕರೆಸಿದ್ದಾರೆ. 'ನಿಮ್ಮ ಜರ್ನಿ ಅದ್ಭುತವಾಗಿರಲಿ ಎಂದು ವಿಶ್ ಮಾಡುವುದಕ್ಕೆ ನಿಮ್ಮ ರಿಯಲ್ ಪಾರ್ಟನರ್ ಬರ್ತಿದ್ದಾರೆ' ಎಂದು ಮಂಜು ಹೇಳಿದಾಗ ಪಕ್ಕದಲ್ಲಿ ನಿಂತಿದ್ದ ನಿವೇದಿತಾ cookie ಎಂದು ಕರೆಯಲು ಆರಂಭಿಸುತ್ತಾರೆ.
ಜಡ್ಜ್ ಸ್ಥಾನದಲ್ಲಿ ಆಸೀನರಾಗುರುವ ಸೃಜನ್ ಲೋಕೇಶ್ (Srujan Lokesh) ಕೊಂಚ ಕನ್ಫ್ಯೂಶ್ ಆಗುತ್ತಾರೆ, ಯಾರನ್ನ ಕರೆಯುತ್ತಿರುವುದು ಓ ಚಂದನ್ ಎಂದು ತಿಳಿಯುತ್ತಿದ್ದಂತೆ. 'ಅಲ್ಲಮ್ಮ ಕುಕ್ಕಿ ಅನ್ನು ಸಾಕು ಕುಕ್ಕಿಕ್ಕಿಕ್ಕಿ' ಎಂದು ಕರೆಯಬೇಡ ಎಂದು ಹೇಳುತ್ತಾರೆ. ಹೀಗೆ ಹೇಳುವಾಗ ನಾಯಿ ಮರಿಯನ್ನು ಕರೆಯುವ ರೀತಿಯಲ್ಲಿ ಸನ್ನೆ ಮಾಡುತ್ತಾರೆ. ಈ ಸಲ ಡಿಫರೆಂಟ್ ಆಗಿರಲಿ ಎಂದು ನಿವೇದಿತಾ ಆಕ್ಟ್ ಮಾಡ್ತಿದ್ದಾರೆ ನಿಮಗೆ ಹೇಗ್ ಅನಿಸುತ್ತಿದೆ ಎಂದು ಚಂದನ್‌ಗೆ ಪ್ರಶ್ನೆ ಮಾಡಿದಾಗ. ಕಣ್ಣೀರಿಡುತ್ತಲೇ ಚಂದನ್ ಪತ್ನಿಯನ್ನು ತಬ್ಬಿಕೊಳ್ಳುತ್ತಾರೆ ಅದನ್ನು ನೋಡಿ ನಿವಿ ಇಲ್ಲಿ ನಾನು ಆಕ್ಟಿಂಗ್ ಮಾಡೋಕೆ ಬಂದಿದ್ದೀನಾ ಅಥವಾ ಚಂದನ್ ಬಂದಿದ್ದಾನಾ? ಎಂದು ಜಡ್ಜ್‌ಗೆ ಕೇಳುತ್ತಾರೆ.
ಮುಗ್ಗರಿಸಿ ಬಿದ್ದ ನಿವೇದಿತಾ ಗೌಡ ಎರಡು ಹಲ್ಲು ಡಮಾರ್, ಗಂಡ ಅತ್ತೆ ಮಾವ ರಿಯಾಕ್ಷನ್ ಇದು!'ನಿವೇದಿತಾಯಿಂದ ಕಲಿಯುವುದು ತುಂಬಾನೇ ಇದೆ ನಿಮಗೆ ಅವಳು ಕಲಿಸುತ್ತಾರೆ ಆದರೆ ಕೊನೆಯಲ್ಲಿ ನೀವು ಕಲಿತಿರುವುದನ್ನು ಮರೆಯಬೇಡಿ' ಎಂದು ಚಂದನ್ ನಿವಿ ಪಾರ್ಟನರ್‌ಗೆ ಬುದ್ದಿ ಮಾತು ಕೇಳುತ್ತಾರೆ. ಇದನ್ನು ಕೇಳಿಸಿಕೊಂಡು ಸೈಡಲ್ಲಿ ಲುಕ್ ಕೊಡುತ್ತಿದ್ದ ನಿವಿ 'ಗೊತ್ತಿದೆ ತಾನೆ ಇಬ್ಬರು ಮನೆಗೆ ಹೋಗಬೇಕು' ಎಂದು ಹೇಳುತ್ತಾರೆ. ವೇದಿಕೆ ಮೇಲೆ ಇವರಿಬ್ಬರ ಆಕ್ಟಿಂಗ್ ಆಂಡ್ ಫೈಟಿಂಗ್ (Fighting) ನೋಡಿ ಪ್ರತಿಸ್ಪರ್ಧಿಗಳು ಮತ್ತು ಜಡ್ಜ್‌ಗಳು ನಕ್ಕಿದ್ದಾರೆ.
'ನಿವೇದಿತಾ ಗೌಡ ನಿಜವಾಗ್ಲೂ ದಡ್ಡಿನಾ ಅಥವಾ ಬೇಕು ಬೇಕು ಎಂದು ಈ ರೀತಿ ಆಡುತ್ತಾಳೋ ಗೊತ್ತಿಲ್ಲ ಏಕೆಂದರೆ ಪತಿನ ನಾಯಿ ರೀತಿ ಕರೆಯುತ್ತಾಳೆ ಆದರೆ ಪತಿ ಬುದ್ಧಿ ಮಾತು ಹೇಳಿದರೆ ಮನೆಗೆ ಹೋಗಬೇಕು ನೆನಪಿದ್ಯಾ ಅಂತ ಧಮ್ಕಿ ಹಾಕುತ್ತಾಳೆ. ಇದನ್ನು ನೋಡಿತ್ತಿರುವವರು ನಾವೇ ಬಕ್ರಾ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.