ಸ್ವಾತಂತ್ರ್ಯ ದಿನಕ್ಕೆ ನಿವೇದಿತಾ ಗೌಡ ಬಿಗ್ ಸರ್ಪ್ರೈಸ್! ಇನ್ಸ್ಟಾ ಮೂಲಕ ಹಿಂಟ್ ಕೊಟ್ಟ ನಟಿ ಹೇಳಿದ್ದೇನು?
ಬಿಗ್ಬಾಸ್ ಸುಂದರಿ ನಿವೇದಿತಾ ಗೌಡ ಬೇರೆ ಬೇರೆ ರಾಜ್ಯಗಳ ಸಂಪ್ರದಾಯಗಳ ಬಟ್ಟೆ ತೊಟ್ಟು ಸಕತ್ ಕ್ಯೂಟ್ ಆಗಿ ಕಾಣಿಸುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಕ್ಕೆ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದಾರೆ.

ಬಿಗ್ಬಾಸ್ ಸುಂದರಿ, ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಅವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟಿವ್. ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್ಟೈನ್ಮೆಂಟ್ ಕೊಡ್ತಿರೋ ಇವರು, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್ ಆಗಿದ್ದಾರೆ. ಇವರಿಬ್ಬರೂ ಜೊತೆಗಿರುವ ಹಲವಾರು ಫೋಟೋಗಳು ವೈರಲ್ ಆಗುತ್ತಿವೆ. ಕಿರುತೆರೆ ಸೆಲೆಬ್ರಿಟಿಗಳ ಮಧ್ಯೆ ಗುರುತಿಸಿಕೊಳ್ತಿರೋ ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾ ಇತ್ತೀಚೆಗೆ ಮ್ಯೂಸಿಕ್ ಆಲ್ಬಂ ಕೂಡ ಮಾಡಿ ಸುದ್ದಿಯಾಗಿದ್ದಾರೆ. ಇದು ರಿಲೀಸ್ಗೆ ರೆಡಿಯಾಗಿದೆ. ಇದರಲ್ಲಿ ನಟಿ ಶಮಂತ್ ಅಥವಾ ಬ್ರೋ (Bro Gowda) ಗೌಡ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇವುಗಳ ನಡುವೆಯೇ ಇನ್ಸ್ಸ್ಟಾಗ್ರಾಮ್ನಲ್ಲಿ ಸಕತ್ ಆ್ಯಕ್ಟೀವ್ ಇದ್ದು, ಆಗ್ಗಾಗ್ಗೆ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆಗಾಗ ಸೋಲೋ ಟ್ರಾವೆಲ್ ಮಾಡುತ್ತಾ, ಇನ್ನು ಕೆಲವೊಮ್ಮೆ ಪತಿಯ ಜೊತೆ ಸುತ್ತಾಟದಲ್ಲಿ ತೊಡಗಿ ಅದರ ವಿಡಿಯೋ ಶೇರ್ ಮಾಡುತ್ತಿರುತ್ತಾರೆ.
ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ. ಗಂಡ-ಹೆಂಡತಿ ನಡುವಿನ ರೊಮ್ಯಾನ್ಸ್ ಖುಲ್ಲಂಖುಲ್ಲಾ ಮಾಡುವುದಕ್ಕೆ ಟೀಕೆ ವ್ಯಕ್ತಪಡಿಸುತ್ತಲೇ ಈ ಜೋಡಿಯ ಪಬ್ಲಿಕ್ ರೊಮ್ಯಾನ್ಸ್ ಅನ್ನು ಆನಂದಿಸುತ್ತಿರುವವರೇ ಹೆಚ್ಚು. ತಮ್ಮ ಜನಪ್ರಿಯತೆ ಹೆಚ್ಚುತ್ತಿದ್ದಂತೆಯೇ ನಟಿ ಹೆಚ್ಚೆಚ್ಚು ಫೋಟೋ ಶೇರ್ ಮಾಡುತ್ತಿದ್ದಾರೆ. ರೀಲ್ಸ್ಗಳನ್ನು ಮಾಡಿ ಫ್ಯಾನ್ಸ್ ಗಮನ ಸೆಳೆಯುತ್ತಾರೆ. ಕಲರ್ಫುಲ್ ಫೋಟೋಶೂಟ್ ಮಾಡಿಸಿ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಒಳ್ಳೆಯ ಕಮೆಂಟ್ಸ್ ಮಾಡುವ ನೆಟ್ಟಿಗರಿಗೆ ಥ್ಯಾಂಕ್ಸ್ ಹೇಳುತ್ತಾ ಟ್ರೋಲ್ಗಳಿಗೆ ತಲೆ ಕೆಡಿಸಿಕೊಳ್ಳದವರಲ್ಲಿ ನಿವೇದಿತಾ ಗೌಡ ಕೂಡ ಒಬ್ಬರು.
ಗೋವಾದಲ್ಲಿ ನಿವೇದಿತಾ ಗೌಡ ಪೋಸ್, ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ನೆಟ್ಟಿಗರು!
ಇದೀಗ ಹೊಸದೊಂದು ಕಾನ್ಸೆಪ್ಟ್ನಲ್ಲಿ ನಿವೇದಿತಾ ಕಂಗೊಳಿಸುತ್ತಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಹೊಸ ಕಾನ್ಸೆಪ್ಟ್ನಲ್ಲಿ ವಿಡಿಯೋ ಮಾಡೋಣ ಅಂದುಕೊಂಡಿದ್ದೇನೆ ಎಂದಿರುವ ನಟಿ ನಿವೇದಿತಾ ಗೌಡ, ಅದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ (Instagram) ಶೇರ್ ಮಾಡಿಕೊಂಡಿದ್ದಾರೆ. ಹಲವಾರು ರೀತಿಯ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದಾರೆ ನಿವೇದಿತಾ. ವಿವಿಧ ರಾಜ್ಯಗಳ ಸಾಂಪ್ರದಾಯಿಕ ಡ್ರೆಸ್ನೊಂದಿಗೆ ಕಂಗೊಳುಸುತ್ತಿರುವ ನಟಿ ನನಗೆ ಈಗ ಯಾವ ರೀತಿ ಫೀಲ್ ಆಗ್ತಿದೆ ಎಂದರೆ 200 ಔಟ್ಫಿಟ್ ಹಾಕಿದ ಹಾಗೆ ಫೀಲ್ ಆಗ್ತಿದೆ ಎಂದಿದ್ದಾರೆ. ಆಗಸ್ಟ್ 15ಕ್ಕೆ ಯೂಟ್ಯೂಬ್ನಲ್ಲಿ ಹೊಸ ವಿಡಿಯೋ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಗೋವಾದಲ್ಲಿ ಡೀಸೆಂಟ್ (Decent) ಆಗಿರೋ ಫೋಟೋ ಒಂದನ್ನು ನಿವೇದಿತಾ ಶೇರ್ ಮಾಡಿದ್ದರು. ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಸಹಸ್ರಾರು ಮಂದಿ ಹಾರ್ಟ್ ಇಮೋಜಿ ಶೇರ್ ಮಾಡಿಕೊಂಡಿದ್ದರು. ಕ್ಯೂಟ್ ಎಂದು ಇನ್ನು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಡೀಸೆಂಟ್ ಲುಕ್ನಲ್ಲಿದ್ದರೂ ಹಾಟ್ ಆಗಿ ಕಾಣಿಸೋ ನೀವು ಬಾಲಿವುಡ್ ರೇಂಜಿಗೆ ಕಾಣಿಸ್ತೀರಿ ಎಂದ ಕಮೆಂಟ್ ಮೂಲಕ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದರು. ಅಮೆರಿಕದ ನಯಾಗರ ಫಾಲ್ಸ್ನಲ್ಲಿಯೂ ಡ್ಯಾನ್ಸ್ ಮಾಡಿತ್ತು ಈ ಜೋಡಿ. ಸಕ್ಕರೆ ಬೊಂಬೆ ಕರಗೋಯ್ತಿಯಾ ಎಂದಿದ್ದರು ಫ್ಯಾನ್ಸ್. ಆದರೆ ಕಳೆದ ತಿಂಗಳು ಏರ್ಪೋರ್ಟ್ನಲ್ಲಿ ಡ್ಯಾನ್ಸ್ ಮಾಡಿ ಪಬ್ಲಿಕ್ ನ್ಯೂಸೆನ್ಸ್ ಕ್ರಿಯೇಟ್ ಮಾಡಿದ್ದಕ್ಕೆ ಟ್ರೋಲ್ಗೂ ಒಳಗಾಗಿದ್ದರು. ಇದೀಗ ಸೀಕ್ರೇಟ್ ಮಾಡುತ್ತಿದ್ದು, ಆಗಸ್ಟ್ 15ರವರೆಗೆ ಫ್ಯಾನ್ಸ್ ಕಾಯಬೇಕಿದೆ.
ಚಂದನ್-ನಿವೇದಿತಾ ರೊಮ್ಯಾನ್ಸ್ ವಿಡಿಯೋ: ಬೆಸ್ಟ್ ಕಪಲ್ ಎನ್ನುತ್ತಲೇ ಉದ್ದ ಕೂದ್ಲು ಮಿಸ್ ಮಾಡ್ಕೊಂಡ ಫ್ಯಾನ್ಸ್!