ಸೋಶಿಯಲ್ ಮೀಡಿಯಾ ಸೆನ್ಸೇಷನ್ ನಿವೇದಿತಾ ಗೌಡ ಗೋವಾದಲ್ಲಿ ಕನ್ನಡ ಮಾತನಾಡದಿದ್ದಕ್ಕೆ ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದಾಗ ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಫೋಟೋ ವಿಡಿಯೋಗಳ ಮೂಲಕವೇ ಸೆನ್ಸೇಷನ್‌ ಸೃಷ್ಟಿಸಿರುವ ಬೇಬಿ ಡಾಲ್‌ ನಿವೇದಿತಾ ಗೌಡಗೆ ಈಗ ಕನ್ನಡಿಗರು ಪಕ್ಕದ ಗೋವಾದಲ್ಲಿ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕನ್ನಡವನ್ನೂ ಇಂಗ್ಲೀಷ್‌ ರೀತಿಯಲ್ಲಿ ಮಾತನಾಡುವ ನಿವೇದಿತಾ ಗೌಡಗೆ ಕನ್ನಡ ಮಾತನಾಡುವಂತೆ ತಾಕೀತು ಮಾಡಿದ್ದಾರೆ. ತನ್ನ ಸೌಂದರ್ಯ ರಾಶಿಯನ್ನು ತೋರಿಸುವ ಸಾಲು ಸಾಲು ಫೋಟೋ, ವಿಡಿಯೋವನ್ನು ಹಾಕುವ ಮೂಲಕ ನಿವೇದಿತಾ ಗೌಡ ಪ್ರತಿ ದಿನವೂ ಸುದ್ದಿಯಲ್ಲಿರುತ್ತಾರೆ. ಇನ್ನು ಅವರಾಡುವ ಕನ್ನಡ ಮಾತುಗಳು ದೇವರಿಗೆ ಪ್ರೀತಿ. ಅದೇನೇ ಇರಲಿ ಪಕ್ಕದ ರಾಜ್ಯದಲ್ಲಿ ಕನ್ನಡ ಮಾತನಾಡುವಂತೆ ನಿವೇದಿತಾಗೆ ಹೇಳಿರುವ ವಿಡಿಯೋವಂತೂ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಇತ್ತೀಚೆಗೆ ಅವರು ಗೋವಾದ ಕ್ಯಾಸಿಯೋಗೆ ಹೋಗಿದ್ದರು. ಅಲ್ಲಿ ನಡಡೆದ ಕಾರ್ಯಕ್ರಮಕ್ಕೆ ಅವರು ಅತಿಥಿಯಾಗಿ ಹೋಗಿದ್ದು ಕಂಡಿದೆ. ಈ ವೇಳೆ ನಿರೂಪಕಿ ನಿವೇದಿತಾ ಗೌಡಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಎಲ್ಲಾ ಪ್ರಶ್ನೆಗಳು ಕೂಡ ಇಂಗ್ಲೀಷ್‌ನಲ್ಲಿಯೇ ಇದ್ದವು.

ಇನ್ನೊಂದೆಡೆ ನಿವೇದಿತಾ ಗೌಡ ಕೂಡ ಇಂಗ್ಲೀಷ್‌ನಲ್ಲಿಯೇ ಉತ್ತರ ಕೊಡಲು ಆರಂಭ ಮಾಡಿದದಾಗ, ಗೋವಾದಲ್ಲಿದ್ದ ಕನ್ನಡಿಗರು ಬೇಸರಪಟ್ಟಿದ್ದರೆ. ನಿವೇದಿತಾ ನಿಮ್ಮ ಮಾತು ಕೇಳಿ ಬೇಸರ ಆಗ್ತಾ ಇದೆ. ಕನ್ನಡಲ್ಲಿೇ ಮಾತಾಡಮ್ಮ ಎದು ಹೇಳಿದ್ದಾರೆ.
ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳೇನು ಎಂದು ನಿರೂಪಕಿ ಕೇಳುವ ಪ್ರಶ್ನೆಗೆ, ನನ್ನ ಮುಂದಿನ ಪ್ರಾಜೆಕ್ಟ್‌ ಏನೆಂದರೆ ನಾನು ಸಿನಿಮಾಗಳಲ್ಲಿ ಮಾಡುತ್ತಿದ್ದೇನೆ. ಜಾಹೀರಾತು ಶೂಟಿಂಗ್‌ಗಳು, ಸಾಂಗ್‌ ಶೂಟಿಂಗ್‌ಗಳನ್ನು ಮಾಡುತ್ತಿದ್ದೇನೆ ಎನ್ನುತ್ತಾರೆ. ಈ ಹಂತಲ್ಲಿ ವೇದಿಕೆಯ ಕೆಳಗಿನಿಂದ ಜೋರಗಿಯೇ ಮಾತನಾಡುವ ವ್ಯಕ್ತಿ, ಬೇಜಾರಾಗ್ತಿದೆ ನಿವೇದಿತಾ, ಕನ್ನಡದಲ್ಲಿ ಮಾತಾಡಮ್ಮ ಪ್ಲೀಸ್‌.. ಎಂದು ಹೇಳಿದ್ದಾರೆ.

ಮಗಳನ್ನೇ ಮೀರಿಸ್ತಿರೋ ಅಮ್ಮ; ತುಂಡುಡುಗೆ ನಿವೇದಿತಾಗೆ, ಸೀರೆಯಲ್ಲಿ 'ಮಾಯಾವಿ ಬೆಡಗಿ' ಎಂದ ತಾಯಿ!

ಆ ಬಳಿಕ ತಕ್ಷಣವೇ ಎಚ್ಚೆತ್ತುಕೊಂಡ ನಿವೇದಿತಾ ಗೌಡ ಕನ್ನಡದಲ್ಲಿ ಮಾತನಾಡಲು ಆರಂಭ ಮಾಡುತ್ತಾರೆ. 'ಸಿನಿಮಾ ಮಾಡ್ತಾ ಇದ್ದೀನಿ. ಹಾಗೇ ಸಾಂಗ್‌ ಶೂಟ್ಸ್‌, ಸೇರಿದಂತೆ ಇನ್ನೂ ಕೆಲವು ಕೆಲಸ ಮಾಡುತ್ತಿದ್ದೇನೆ. ಇದು ನನ್ನ ಪ್ರಾಜೆಕ್ಟ್‌. ಹಾಗೇ ಏನಾದರೂ ಇಲ್ಲಿ ಹೇಳಬೇಕು ಅಂದ್ರೆ, ಎಲ್ಲರೂ ಜಸ್ಟ್‌ ಆಟ ಆಡೋದನ್ನ ಎಂಜಾಯ್‌ ಮಾಡಿ. ಫನ್‌ ಆಗಿ ಆಡಿ. ಎಲ್ಲರೂ ಜಾಸ್ತಿ ಜಾಸ್ತಿ ಹಣ ಗೆದ್ದುಕೊಂಡು ಹೋಗಿ ಇಲ್ಲಿಂದ' ಎಂದು ಹೇಳಿದ್ದಾರೆ. ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ ಬಳಿಕ ಬೇರೆ ಒಂದೇ ಒಂದು ಅಕ್ಷರವನ್ನೂ ಮಾತನ್ನಾಡದೇ, ಆ ವ್ಯಕ್ತಿ ಹೇಳಿದಂತೆ ಕನ್ನಡದಲ್ಲಿಯೇ ನಿವೇದಿತಾ ಮಾತನಾಡಿದ್ದು ಮೆಚ್ಚುಗೆಗೆ ಕಾರಣವಾಗಿದೆ.

ಇವಳು ನನ್ನ ಪಾರ್ಟನರ್​... ನಾವಿಬ್ರೂ... ಎನ್ನುತ್ತಲೇ ಸ್ನೇಹಿತೆಯ ಜೊತೆಗಿನ ಗುಟ್ಟು ಬಿಚ್ಚಿಟ್ಟು ಶಾಕ್​ ಕೊಟ್ಟ ನಿವೇದಿತಾ!