ನನ್ನೊಂದಿಗೆ ಸದಾ ಜೊತೆಯಾಗಿರು... ಐ ಲವ್ ಯು ಎಂದ ನಿವೇದಿತಾ! ಯಾರೀ ಹೊಸ ಎಂಟ್ರಿ? ತಲೆ ಕೆಡಿಸಿಕೊಂಡ ಫ್ಯಾನ್ಸ್
ನಿವೇದಿತಾ ಗೌಡ ಫ್ರೆಂಡ್ ಜೊತೆ ನಗುತ್ತ ರೀಲ್ಸ್ ಮಾಡಿದ್ದು ಐ ಲವ್ ಯು ಎಂದಿದ್ದಾರೆ. ಯಾರೀ ಹೊಸ ಎಂಟ್ರಿ ಎಂದು ಫ್ಯಾನ್ಸ್ ತಲೆಕೆಡಿಸಿಕೊಳ್ತಿದ್ದಾರೆ!
ಇಷ್ಟು ದಿನ ಒಂಟಿಯಾಗಿಯೋ ಅಥವಾ ಆಗ ಪತಿಯಾಗಿದ್ದ ಚಂದನ್ ಶೆಟ್ಟಿ ಜೊತೆಗೋ ರೀಲ್ಸ್ ಮಾಡುತ್ತಿದ್ದ ನಿವೇದಿತಾ ಗೌಡ ಇದೀಗ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಇಬ್ಬರೂ ಸುಖಾಸುಮ್ಮನೆ ಜೋರಾಗಿ ನಕ್ಕಿದ್ದು ಬಿಟ್ಟರೆ ಇನ್ನೇನೂ ಇಲ್ಲ. ನನ್ನ ಪ್ರೀತಿಯ ಗೆಳತಿ ನನ್ನ ಜೊತೆ ಸದಾ ಇರುತ್ತಿ, ಐ ಲವ್ ಯು ಎಂದು ಶೀರ್ಷಿಕೆ ಕೊಟ್ಟಿರುವ ನಿವೇದಿತಾ ಅದನ್ನು ರೀಲ್ಸ್ನಲ್ಲಿ ಇರುವ ತಮ್ಮ ಸ್ನೇಹಿತೆ ವಾಣಿ ಜಿ.ಎಸ್. ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಷ್ಟಕ್ಕೂ ಗಾಯಕ, ರ್ಯಾಪರ್ ಚಂದನ್ ಶೆಟ್ಟಿ ಜೊತೆ ನಟಿ, ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಡಿವೋರ್ಸ್ ಆದ್ಮೇಲೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಮಾಮೂಲಿನಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್ ಕೊಡುತ್ತಲೇ ಬಾರ್ಬಿಡಾಲ್, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್ ಬಳಿಕವೂ ದಿನಕ್ಕೊಂದರಂತೆ ರೀಲ್ಸ್ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಆದರೆ ಇದೀಗ ಈ ಹೊಸ ಗೆಳತಿಯ ಜೊತೆ ವಿನಾಕಾರಣ ನಗುತ್ತಲೇ ರೀಲ್ಸ್ ಮಾಡಿರುವುದರಿಂದ ಈ ಹೊಸ ಎಂಟ್ರಿ ಯಾರು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಇದಕ್ಕೂ ಟ್ರೋಲ್ ಆಗುವುದು ನಿಂತಿಲ್ಲ. ಹೀಗೆ ನಗುತ್ತಲೇ ಚಂದನ್ ಶೆಟ್ಟಿ ತಲೆ ಕೆಡಿಸಿ ಲೈಫ್ ಹಾಳು ಮಾಡಿದೆ ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು, ನೀನು ಮಾಡಿದ್ದು ಸರಿಯಿಲ್ಲ ಎನ್ನುತ್ತಿದ್ದಾರೆ. ಆಟ ಆಡೋ ವಯಸ್ಸಿನಲ್ಲಿ ಮದುವೆ ಆಗಬೇಡ್ರಪ್ಪಾ ಎಂದು ಇನ್ನೊಬ್ಬ ಕಮೆಂಟಿಗ ಸಲಹೆ ಕೊಟ್ಟಿದ್ದರೆ, ನಿನ್ನ ಜೊತೆ ಈ ಯುವತಿಯನ್ನೂ ಹಾಳು ಮಾಡ್ಬೇಡ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಮೇಲೆ ನೆಟ್ಟಿಗರ ಕೋಪ ತಣ್ಣಗಾಗುವ ಹಾಗೆ ಕಾಣಿಸುತ್ತಿಲ್ಲ. ಈ ವಿಚ್ಛೇದನಕ್ಕೆ ನಿವೇದಿತಾರೇ ಕಾರಣ ಎಂದು ಬಹುತೇಕ ಮಂದಿ ಡಿಸೈಡ್ ಮಾಡಿದ ಹಾಗಿದೆ.
ಚೆಲುವಾದ ಗೊಂಬೆ... ಚಂದನದ ಮಾಜಿ ಗೊಂಬೆ... ಎನ್ನುತ್ತಲೇ ಹಿಂದೆ ಇರೋದು ಯಾರ ಕೈ ಕೇಳೋದಾ ನೆಟ್ಟಿಗರು?
ವಿಚ್ಛೇದನದ ಬಳಿಕ, ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಅಷ್ಟಕ್ಕೂ ಮೊದಲಿನಿಂದಲೂ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಗ್‌ಬಾಸ್ ಬೆಡಗಿ, ಗೊಂಬೆ ಎಂದೇ ಕರೆಸಿಕೊಳ್ತಿರೋ ನಿವೇದಿತಾ ಗೌಡ, ಡಿವೋರ್ಸ್ ಕೇಸ್ ಬಳಿಕ ಕೆಲ ದಿನ ಸೈಲೆಂಟ್ ಆಗಿದ್ರು. ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಡಿವೋರ್ಸ್ ಆಗುವ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ ಮೇಲೆ ಕೆಲ ತಿಂಗಳುಗಳಿಂದ ಇನ್ನಷ್ಟು ಹಾಟ್ ಆಗಿಯೇ ನಟಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇವರಿಬ್ಬರ ಡಿವೋರ್ಸ್ ಪ್ರಕರಣ ಅಭಿಮಾನಿಗಳಿಗೆ ಶಾಕ್ ಕೊಟ್ಟಿತ್ತು. ಸ್ವಲ್ಪ ದಿನ ಸುಮ್ಮನೆ ಇದ್ದ ನಟಿ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು ರೀಲ್ಸ್ ಮಾಡಿದ್ದಾರೆ. ಡಿವೋರ್ಸ್ ಬಳಿಕ ಸಿಂಪಲ್ ಡ್ರೆಸ್‌ನಲ್ಲಿ ಮಿಂಚಿದ್ದ ನಿವೇದಿತಾ, ಈಗ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ. ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ನಿವೇದಿತಾ ಡಿವೋರ್ಸ್ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್ ಶೆಟ್ಟಿಗೆ ಟಾಂಗ್ ಕೊಟ್ರಾ ಮಾಜಿ ಅತ್ತೆ?